ಅರ್ಬನ್​ ಬ್ಯಾಂಕ್​ ಉಪಾಧ್ಯೆಕ್ಷೆ ಮನಿಷಾ

ಭಾಲ್ಕಿಯ ಅರ್ಬನ್​ ಬ್ಯಾಂಕ್​ನ ನೂತನ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಮನಿಷಾ ಸಂಗಮೇಶ ವಾಲೆ ಮತ್ತು ನಿರ್ದೇಶಕ ರಂಗರಾವ ನಟರಾಜ್​ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕ್​ನ ಅಧ್ಯಕ್ಷ ಶಿವಕುಮಾರ ಕಲ್ಯಾಣೆ, ಸಂಗಮೇಶ ವಾಲೆ ಸೇರಿದಂತೆ ಹಲವರು ಇದ್ದರು
ಭಾಲ್ಕಿಯ ಅರ್ಬನ್​ ಬ್ಯಾಂಕ್​ನ ನೂತನ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಮನಿಷಾ ಸಂಗಮೇಶ ವಾಲೆ ಮತ್ತು ನಿರ್ದೇಶಕ ರಂಗರಾವ ನಟರಾಜ್​ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕ್​ನ ಅಧ್ಯಕ್ಷ ಶಿವಕುಮಾರ ಕಲ್ಯಾಣೆ, ಸಂಗಮೇಶ ವಾಲೆ ಸೇರಿದಂತೆ ಹಲವರು ಇದ್ದರು
Published on
ಭಾಲ್ಕಿ: ಇಲ್ಲಿಯ ಪ್ರತಿಷ್ಠಿತ ದಿ ಅರ್ಬನ್​ ಕೋ. ಆಪರೇಟಿವ್​ ಬ್ಯಾಂಕ್​ನ ನೂತನ ಉಪಾಧ್ಯಕ್ಷರಾಗಿ ಮನಿಷಾ ಸಂಗಮೇಶ ವಾಲೆ ಅವಿರೋಧ ಆಯ್ಕೆಯಾಗಿದ್ದಾರೆ. ಹಿಂದಿನ ಉಪಾಧ್ಯಕ್ಷರಾಗಿದ್ದ ಸಂಜೀವಕುಮಾರ ಗುಂಜರಗೆ ಅಕಾಲಿಕವಾಗಿ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಮನಿಷಾ ವಾಲೆ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ ಚುನಾವಣೆ ಅಧಿಕಾರಿಗಳು ಮನಿಷಾ ಅವರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧ ಆಯ್ಕೆ ಪ್ರಕಟಿಸಿದರು. ಜತೆಗೆ ನೂತನ ನಿರ್ದೇಶಕರಾಗಿ ರಂಗರಾವ ನಟರಾಜ್​ ಆಯ್ಕೆಯಾದರು. ಬ್ಯಾಂಕ್​ನ ಅಧ್ಯಕ್ಷ ಶಿವಕುಮಾರ ಕಲ್ಯಾಣೆ, ನಿರ್ದೇಕರಾದ ಜೀವನ ಪೆದ್ದೆ, ವಿಲಾಸ ಬಕ್ಕಾ, ಶೇಖರ ವಂಕೆ, ಅನೀಲ ಲೋಖಂಡೆ, ದೀಲಿಪಕುಮಾರ ಸುಂಟೆ, ನಿರಂಜನ ಅಷ್ಟೂರೆ, ಬಸವರಾಜ ಬುರೂಡೆ, ಬಾಲಾಜಿ ಬಾಮಣೆ, ಸೂರ್ಯಮತಿ ಮಡ್ಡೆ, ಶೃತಿ ಸಂತೋಷ ಬಿಜಿ ಪಾಟೀಲ್​, ಸಂಗಮೇಶ ವಾಲೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net