ಬುಕ್ಕಸಾಗರ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

Unopposed election for Bukkasagar Cooperative Society
Unopposed election for Bukkasagar Cooperative Society
Published on
ಗುಬ್ಬಿ: ತಾಲೂಕಿನ ಬುಕ್ಕಸಾಗರ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಶಾರದಬಾಯಿ ಉಪಾಧ್ಯಕ್ಷರಾಗಿ ವೀಣಾ ಅವಿರೋಧ ಆಯ್ಕೆಯಾದರು.
ನೂತನ ಅಧ್ಯಕ್ಷೆ ಶಾರದಬಾಯಿ ಮಾತನಾಡಿ, ರೈತರಿಗೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಹಾಲು ಉತ್ಪಾದಕರಿಗೆ ತಲುಪಿಸುತ್ತೇನೆ. ರೈತರು ಗುಣಮಟ್ಟದ ಹಾಲನ್ನು ಹಾಕುವುದರ ಮೂಲಕ ಪ್ರೋತ್ಸಹಧನ ಪಡೆಯಬೇಕು. ಗ್ರಾಮೀಣ ಭಾಗದ ರೈತರು ಪ್ರತಿ ಮನೆಗೊಂದು ಹಸುವನ್ನು ಕಟ್ಟಿಕೊಂಡು ಡೇರಿಗಳಿಗೆ ಹಾಲನ್ನು ಹಾಕುವುದರ ಮೂಲಕ ಸ್ವಾವಲಂಭಿ ಬದಕನ್ನು ಕಟ್ಟಿಕೊಳಬೇಕು ಎಂದರು.
ತಮುಲ್​ ನಿರ್ದೇಶಕಿ ಭಾರತಿ ಶ್ರೀನಿವಾಸ್​ ಅವರ ಸಹಕಾರ ಪಡೆದು ಬುಕ್ಕ ಸಾಗರ ಮಹಿಳಾ ಹಾಲು ಉತ್ಪಾದಕರ ಸಹಕಾರಕ್ಕೆ ಸಂಘಕ್ಕೆ ಹೆಚ್ಚು ಅನುದಾನ ತಂದು ಅಭಿವೃದ್ಧಿ ಮಾಡುತ್ತೇನೆ. ಗ್ರಾಮೀಣ ಭಾಗದ ರೈತರು ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದರು.
ಕಾರ್ಯದರ್ಶಿ ಎ.ಎಂ.ಹೇಮಾವತಿ, ನಿರ್ದೇಶಕರಾದ ಶಿವಮ್ಮ, ಲಕ್ಷ$್ಮಮ್ಮ, ವಸಂತಮ್ಮ, ಗಂಗಮ್ಮ, ನಾಗರತ್ನಮ್ಮ, ಸಿದ್ದಗಂಗಮ್ಮ, ವಸಂತಾ, ಪುಟ್ಟಮ್ಮ, ಕೆಂಪಮ್ಮ, ಪದ್ಮ, ಗಂಗಮ್ಮ, ಗ್ರಾಪಂ ಮಾಜಿ ಅಧ್ಯೆ ಗಂಗಾ ಭೋರಯ್ಯ, ಮೀನಾಕ್ಷಿ, ಸತೀಶ್​, ಮುಖಂಡರಾದ ಪ್ರಕಾಶ್​, ಪ್ರೇಮ್​ ಕುಮಾರ್​ , ದೇವಾನಂದ್​, ದೊರೆರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net