ವಿಶ್ವವಿದ್ಯಾಲಯಗಳ ಪಠ್ಯಗಳಲ್ಲಿ ಕಥೆ ಹಾಗೂ ಕವಿತೆಗಳ ಸಾರಾಂಶದ ಬಗ್ಗೆ ಅಷ್ಟೇ ಪಾಠ ಮಾಡಲಾಗುತ್ತದೆ ಹೊರತು ಅದನ್ನು ಆಳವಾಗಿ ವಿವರಿಸುವ ಕೆಲಸ ಆಗುವುದಿಲ್ಲ. ಆ ಕೆಲಸ ಹೆಚ್ಚಾದಾಗ ಮೌಲ್ಯಗಳು ಹಾಗೂ ಭಾಷೆ ಎರಡೂ ಅರಿವಿಗೆ ಬರಲು ಸಾಧ್ಯ. ಪಂಪ, ಡಿವಿಜಿ, ಕುವೆಂಪು ಕಾವ್ಯಗಳ ಸಾರಾಂಶ ಹೇಳಲಾಗುತ್ತದೆಯೇ ಹೊರತು. ಆಳವಾದ ಅಧ್ಯಯನ ಆಗುವುದಿಲ್ಲ. ನಮಗೆ ಮೌಲ್ಯಗಳು ತಿಳಿಯಬೇಕು. ಮೌಲ್ಯಗಳು ಎಂದರೆ ನಮ್ಮನ್ನು ನಾವು ತಿಳಿದುಕೊಳ್ಳುವುದು. ಫ್ಯಾಕ್ಟ್ಸ್ ಹೇಳಲು ಆಗದಿರುವುದನ್ನು ಮೌಲ್ಯಗಳು ಹೇಳುತ್ತವೆ’ ಎಂದರು.