ಜಿಲ್ಲಾಧಿಕಾರಿಯಿಂದ ಏಕಪಕ್ಷೀಯ ನಿರ್ಧಾರ dc

ಜಿಲ್ಲಾಧಿಕಾರಿಯಿಂದ ಏಕಪಕ್ಷೀಯ ನಿರ್ಧಾರ dc
ಜಿಲ್ಲಾಧಿಕಾರಿಯಿಂದ ಏಕಪಕ್ಷೀಯ ನಿರ್ಧಾರ dc
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಎ.ಮಂಜುನಾಥ್ ಆರೋಪ
ಬಿಡದಿ: ಭೂ ಸ್ವಾಧೀನ ಪ್ರಕ್ರಿಯೆಗೆ ಒಳಪಡುವ ರೈತರೊಂದಿಗೆ ದರ ನಿಗದಿ ವಿಚಾರವಾಗಿ ನ.6ರಂದು ಸಭೆ ನಿಗದಿ ಮಾಡಲಾಗಿತ್ತು. ಆದರೆ, ಜಿಲ್ಲಾಧಿಕಾರಿ ಮೂರು ದಿನದಲ್ಲಿ ನೋಟಿಸ್ ನೀಡಿ ಸಭೆ ಮಾಡಿ ಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಕಿಡಿಕಾರಿದರು.dc
ಬೈರಮಂಗಲದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಭೆ ನಿಗದಿಯ ಬಗ್ಗೆ ಎರಡು ದಿನ ಮೊದಲೇ ನೋಟಿಸ್ ನೀಡಿದ್ದಾರೆ. ಆದರೆ, ನೋಟಿಸ್‌ಗಳನ್ನು ರೈತರಿಗೆ ನೀಡದೆ ಗ್ರಾಮ ಲೆಕ್ಕಾಧಿಕಾರಿಗಳ ಕೈಯಲ್ಲಿ ಹಾಗೂ ಅಂಗಡಿಗಳು, ದೇವಾಲಯದ ಗೋಡೆಗಳ ಮೇಲೆ ಅಂಟಿಸಿದ್ದಾರೆ. ಸಭೆ ಆಯೋಜಿಸುವ 7 ದಿನಗಳ ಮೊದಲು ನೋಟಿಸ್ ನೀಡಬೇಕು ಎಂದರು.
ನಾಗೇಶ್ ಕುಮಾರ್, ರವೀಂದ್ರನಾಥ ರೆಡ್ಡಿ, ಕೃಷ್ಣ, ಮಂಜಣ್ಣ, ಸುಮಾ, ಸುಜಾತಾ, ಭಾಗ್ಯಾ, ರಮ್ಯಾ, ಜ್ಯೋತಿ ಹಾಗೂ ಇತರರಿದ್ದರು.
ರೈತರ ವಿರುದ್ಧ ದೂರು ದಾಖಲು: ಈ ಯೋಜನೆ ಕೈ ಬಿಡುವಂತೆ ರೈತರು ಸತತ ಹೋರಾಟ ಮಾಡುತ್ತಿದ್ದಾರೆ. ಆದರೆ, ಈವರೆಗೂ ಜಿಲ್ಲಾಧಿಕಾರಿ ಸಮಸ್ಯೆ ಕೇಳಲಿಲ್ಲ. ಇನ್ನೂ ಡಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ದರ ನಿಗದಿ ಸಭೆಯಲ್ಲಿ ರೈತರು ಸಮಸ್ಯೆ ಹೇಳಿಕೊಳ್ಳಲು ಮುಂದಾಗಿದ್ದರು. ಇದನ್ನು ಸಹಿಸದ ಜಿಲ್ಲಾಧಿಕಾರಿ ಮಹಿಳೆಯರನ್ನೂ ನೋಡದೆ 25 ರೈತರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಡಿಸಿ ವಿರುದ್ಧ ಬೃಹತ್ ಪಾದಯಾತ್ರೆ: ಜಿಲ್ಲಾಧಿಕಾರಿಯ ಸರ್ವಾಧಿಕಾರಿ ನಡೆ ಖಂಡಿಸಿ ಬಿಡದಿಯಿಂದ ಬೃಹತ್ ಪಾದಯಾತ್ರೆ ನಡೆಸಲು ಚಿಂತಿಸಲಾಗಿದೆ. 3,600 ರೈತ ಕುಟುಂಬಗಳೊಂದಿಗೆ ಜಾನುವಾರು, ಕೋಳಿ, ಕುರಿ ಸೇರಿ ಸಾಕು ಪ್ರಾಣಿಗಳನ್ನು ಹಿಡಿದುಕೊಂಡು ಡಿಸಿ ಕಚೇರಿವರೆಗೆ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ತಾಕತ್ತು ಇದ್ದರೆ ಜಿಲ್ಲಾಧಿಕಾರಿಯವರು ಪಾದಯಾತ್ರೆಯಲ್ಲಿ ಬರುವ ರೈತರ ಮೇಲೆ ದೂರು ದಾಖಲಿಸಿ ಜೈಲಿಗೆ ಕಳುಹಿಸಲಿ ಎಂದು ಮಂಜುನಾಥ್ ಸವಾಲು ಎಸೆದರು.
ಚಳಿಗಾಲದ ಅಧಿವೇಶನದಲ್ಲಿ ಚರ್ಚೆ: ಈ ಭಾಗದಲ್ಲಿ ನಡೆಯುತ್ತಿರುವ ಉಪನಗರ ಯೋಜನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ಬಂದಿಲ್ಲ. ಹಾಗಾಗಿ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ನಮ್ಮ ಪಕ್ಷದ ನಾಯಕ ರಮೇಶ್ ಅವರು ಬಿಡದಿ ಯೋಜನೆ ಕುರಿತು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಿ ಮುಖ್ಯಮಂತ್ರಿ ಅವರ ಗಮನ ಸೆಳೆಯಲಿದ್ದಾರೆ ಮಂಜುನಾಥ್ ತಿಳಿಸಿದರು.

ರಾಜ್ಯದ ಯಾವ ಜಿಲ್ಲೆಯಲಿಯೂ ಇಲ್ಲದ 144 ನೇ ವಿಧಿ ಡಿಸಿ ಕಚೇರಿ ಸುತ್ತ ಇದೆ. ರೈತ ಹಾಗೂ ಕನ್ನಡ ಪರ ಹೋರಾಟಗಾರರು, ಮಾಧ್ಯಮದವರನ್ನು ಸೇರಿಸದ ಸೂಪರ್ ಡಿಸಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಯೋಜನೆ ಕುರಿತು ಮಾಹಿತಿ ಪಡೆದುಕೊಳ್ಳುವ ಸಲುವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿಗೆ ಕರೆ ಮುಖಾಂತರ ಸಂಪರ್ಕಿಸಿದರು. ಆದರೆ, ಜಿಲ್ಲಾಧಿಕಾರಿ ಕರೆ ಸ್ವೀಕರಿಸದೆ ಉದ್ಧಟತನ ತೋರಿಸಿದ್ದಾರೆ.

— ಎ.ಮಂಜುನಾಥ್, ಮಾಜಿ ಶಾಸ
ಬೇನಾಮಿ ಹೆಸರಲ್ಲಿ ಡಿಸಿ ಆಸ್ತಿ: ಬಿಡದಿ ಉಪನಗರ ಯೋಜನೆಗೆ ಒಳಪಡುವ ಪ್ರದೇಶಗಳಲ್ಲಿ ಜಿಲ್ಲಾಧಿಕಾರಿಗಳು ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿಕೊಂಡಿರುವ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಸದ್ಯದಲ್ಲೇ ರಾಜ್ಯಪಾಲರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡುತ್ತೇನೆ ಎಂದು ಮಂಜುನಾಥ್ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net