ಮಾನವ ಹಕ್ಕುಗಳ ಪಾವಿತ್ರ ಅರಿಯಿರಿ

Understand the sanctity of human rights.
Understand the sanctity of human rights.
Published on
human rights ಕುಣಿಗಲ್​: ಭಾರತೀಯ ಸಂಸತಿಯ ಪ್ರತಿಕವಾದ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದೆ. ಪ್ರತಿಯೊಬ್ಬ ನಾಗರಿಕರ ಹಕ್ಕುಗಳನ್ನು ಗೌರವಿಸಬೇಕು. ಭಾರತೀಯ ಸಂವಿಧಾನವು ಮಾನವನ ನತೆ ಎತ್ತಿ ಹಿಡಿಯುವ ಹಲವಾರು ಮೌಲ್ಯಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ಮಾನವ ಹಕ್ಕುಗಳ ಪಾವಿತ್ರ್ಯತೆ ಅರಿಯಬೇಕು ಎಂದು ಸಂಪನ್ಮೂಲ ವ್ಯಕ್ತಿ ಡಾ.ಎಂ.ಎಸ್​.ನಾಗರಾಜು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯುಎಸಿ ಮತ್ತು ರಾಜ್ಯಶಾಸ್ತ್ರ ವಿಭಾಗದಿಂದ ಏರ್ಪಡಿಸಿದ್ದ ಭಾರತೀಯ ಸಂವಿಧಾನ ಮತ್ತು ಮಾನವೀಯ ಮೌಲ್ಯಗಳು ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತೀಯ ಸಂವಿಧಾನವು ಮೂಲಭೂತ ಹಕ್ಕುಗಳನ್ನು ನೀಡುವ ಜತೆಗೆ ಎಲ್ಲರಿಗೂ ನ್ಯಾಯ, ಸಮಾನತೆ, ಸ್ವಾತಂತ್ರ್ಯ, ಭ್ರಾತತ್ವ, ಮಾನವ ನತೆ, ಧರ್ಮ ನಿರಪೇತೆಯನ್ನು ಪ್ರತಿಪಾದಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾನ್ಯ ವ್ಯಕ್ತಿ ಸಹ ಉನ್ನತ ರಾಜಕೀಯ ಅಧಿಕಾರ ಪಡೆಯುವ ಅವಕಾಶ ನೀಡಿದೆ. ಯುವಜನರು ಸಂವಿಧಾನದತ್ತವಾದ ಮೌಲ್ಯಗಳನ್ನು ಪಾಲಿಸಿ ಜವಾಬ್ದಾರಿಯುತ ಪ್ರಜೆಗಳಾಗಬೇಕು ಎಂದರು.
ರಾಜ್ಯಶಾಸ್ತ್ರ್ರ ವಿಭಾಗದ ಮುಖ್ಯಸ್ಥ ಡಾ.ರಾಧಾಕಷ್ಣ ಮಾತನಾಡಿ, ಮಾನವಹಕ್ಕುಗಳನ್ನು ಎಲ್ಲರೂ ಗೌರವಿಸಬೇಕು. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದರಿಯಬೇಕು. ತಾರತಮ್ಯ ರಹಿತ ಸಮಾಜ ನಿರ್ಮಾಣ ಮಾಡಲು ಸಂವಿಧಾನ ಮುಕ್ತ ಅವಕಾಶ ನೀಡಿದೆ ಎಂದರು.
ಐಕ್ಯುಎಸಿ ಸಂಚಾಲಕ ಡಾ.ಟಿ.ಎನ್​.ನರಸಿಂಹಮೂರ್ತಿ ಮಾತನಾಡಿ, ಶಿಣ ಮಾನವ ವ್ಯಕ್ತಿತ್ವದ ಬೆಳವಣಿಗೆಗೆ ನೆರವಾಗುತ್ತದೆ. ಮಾನವ ಹಕ್ಕುಗಳು ಮೂಲಭೂತ ಸ್ವಾತಂತ್ರ್ಯದ ಗೌರವವನ್ನು ಬಲಪಡಿಸಿ, ಸಹಿಷ್ಣುತೆ ಮತ್ತು ಸ್ನೇಹವನ್ನು ಉತ್ತೇಜಿಸಿ ಶಾಂತಿ ಕಾಪಾಡುತ್ತದೆ ಎಂದರು.
ಅಧ್ಯತೆ ವಹಿಸಿದ್ದ ಪ್ರಾಂಶುಪಾಲೆಡಾ.ಎಂ.ಕೆ.ಮಂಜುಳಾ ಮಾತನಾಡಿ, ಮನುಷ್ಯ ಮೊದಲು ಮನುಷ್ಯತ್ವದ ಗುಣಗಳನ್ನು ಹೊಂದಬೇಕು. ಎಲ್ಲರನ್ನು ಸಮಾನವಾಗಿ ಕಾಣಬೇಕು. ತನ್ನ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಚಲಾಯಿಸುವಾಗ, ಇತರರ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳಿಗೆ ಸರಿಯಾದ ಮನ್ನಣೆ ಮತ್ತು ಗೌರವ ನೀಡಬೇಕು ಎಂದರು. ಸಾಂಸತಿಕಸಮಿತಿ ಸಂಚಾಲಕ ಎಂ.ಟಿ.ಈಶ್ವರಪ್ಪ ಮಾತನಾಡಿದರು. ಅಧ್ಯಾಪಕರಾದ ಡಾ.ಧರಣೇಶ್​ ನಿರೂಪಿಸಿ, ಪಥ್ವಿರಾಜ್​ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net