ಇಬ್ಬರು ಸರಗಳ್ಳರ ಬಂಧನ :ಚಿನ್ನಾಭರಣ ವಶ

Two jewellery thieves arrested, gold jewellery seized
Two jewellery thieves arrested, gold jewellery seized
Published on
ಗೌರಿಬಿದನೂರು: ನಗರದ ಮಾದನಹಳ್ಳಿಯಲ್ಲಿ ಜ.27ರಂದು ನಡೆದಿದ್ದ ಸರಗಳ್ಳತನ ಪ್ರಕರಣ ಸಂಬಂಧ ಇಬ್ಬರು ಸರಗಳ್ಳರನ್ನು ಬಂಧಿಸಿ ಚಿನ್ನಾಭರಣ, ಬೈಕ್​ ವಶಪಡಿಸಿಕೊಳ್ಳಲಾಗಿದೆ.
ಆಂಧ್ರ ಮೂಲದ ಎಸ್​.ಕೆ. ಕೃಪಾರಾವ್​, ಮಲ್ಲೇಲ ಕೊಂಡಾರೆಡ್ಡಿ ಬಂಧಿತರು. 65 ಗ್ರಾಂ ಬಂಗಾರದ ಮಾಂಗಲ್ಯ ಸರಗಳು, 2 ಬೈಕ್​ಗಳನ್ನು ಸೋಮವಾರ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜ.27ರಂದು ಮಾದನಹಳ್ಳಿ ಲಕ್ಷ$್ಮಮ್ಮ (70) ಎಂಬುವವರು 22 ಗ್ರಾಂ ಮಾಂಗಲ್ಯಸರ, ಲಕ್ಷಿ$್ಮ ಬೊಟ್ಟು, ಚೈನ್​ ಕಳ್ಳತನವಾಗಿದೆ ಎಂದು ಪ್ರಕರಣ ದಾಖಲಿಸಿದರು. ದೂರಿನ ಮೇರೆಗೆ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಸರಗಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಕೃಪಾರಾವ್​ ವಿರುದ್ಧ ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ 20ಕ್ಕೂ ಹೆಚ್ಚು ಸರಕಳ್ಳತನ, ಮಲ್ಲೇಲ ಕೊಂಡಾರೆಡ್ಡಿ ವಿರುದ್ಧ 30ಕ್ಕೂ ಹೆಚ್ಚು ಬೈಕ್​ ಕಳವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್​ಪಿ ಕುಶಾಲ ಚೌಕ್ಸ್​, ಹೆಚ್ಚುವರಿ ಪೊಲೀಸ್​ ಅಧೀಕ್ಷಕ ಶ್ರೀಜಗನ್ನಾಥ್​ ರೈ, ಡಿವೈಎಸ್​ಪಿ ಆರ್​.ಪ್ರಕಾಶ್​ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಆರೋಪಿಗಳನ್ನು ಬಂಧಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net