ಅಪಘಾತದಲ್ಲಿ ಬೈಕ್​ ಸವಾರರಿಬ್ಬರು ಸಾವು

Two bikers die in accident
Two bikers die in accident
Published on
ಚಿಂತಾಮಣಿ: ರಾಜ್ಯ ಹೆದ್ದಾರಿ ಚಿಂತಾಮಣಿ- ಮದನಪಲ್ಲಿ ರಸ್ತೆಯಲ್ಲಿ ಭಾನುವಾರ ಕಾರು ಹಾಗೂ ಬೈಕ್​ ನಡುವೆ ಅಪಘಾತ ಸಂಭವಿಸಿ, ತೀವ್ರವಾಗಿ ಗಾಯಗೊಂಡಿದ್ದ ಬೈಕ್​ ಸವಾರರಿಬ್ಬರು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ತಾಲೂಕಿನ ಕಲ್ಲಹಳ್ಳಿ ನಾಗರಾಜ್​ (65), ಮುಂತಕದಿರೇನಹಳ್ಳಿಯ ವೆಂಕಟರೆಡ್ಡಿ (53) ಮೃತರು.
ಬೆಂಗಳೂರಿನಿಂದ ಆಂಧ್ರದ ಮದನಪಲ್ಲಿಗೆ ಹೋಗುತ್ತಿದ್ದ ಕಾರು ಎದುರುಗಡೆ ಬರುತ್ತಿದ್ದ ಬೈಕ್​ಗೆ ಡಿಕ್ಕಿಯಾಗಿದೆ. ಗಾಯಾಳುಗಳಿಗೆ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಿಮ್ಹಾನ್ಸ್​ಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಕಾರನ್ನು ಅಪಘಾತದ ಸ್ಥಳದಲ್ಲಿಯೇ ಬಿಟ್ಟು ಚಾಲಕ ಹಾಗೂ ಪ್ರಯಾಣಿಕರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಚಿಂತಾಮಣಿ ಉಪವಿಭಾಗ ಡಿವೈಎಸ್​ಪಿ ಮುರಳೀಧರ್​ ಮತ್ತು ಪಿಎಸ್​ಐ ನಾಗಮ್ಮ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net