ವಂಚನೆ ಆರೋಪದ ಮೇಲೆ ಇಬ್ಬರ ಬಂಧನ

Two arrested
Two arrested
Published on
ಬೆಳಗಾವಿ: ಕೇಂದ್ರ ಸರ್ಕಾರದ ಮುದ್ರಾ ಲೋನ್ ಮಂಜೂರು ಮಾಡಿಸುವುದಾಗಿ ನಂಬಿಸಿ, ಲಕ್ಷಾಂತರ ರೂ. ವಂಚನೆ ಆರೋಪದ ಮೇಲೆ ಜಿಲ್ಲಾ ಸಿಇಎನ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬೆಂಗಳೂರು ನೆಲಮಂಗಲದ ರಾಮಯ್ಯ ಬಡಾವಣೆ ನಿವಾಸಿ ದರ್ಶನ ಮಹಾದೇವ ಹಾಗೂ ಬಿಹಾರದ ಬೋಧಗಯಾ ಗ್ರಾಮದ ರಾಹುಲಕುಮಾರ ರೋಷನ್ ಬಂಧಿತರು.
ಗೋಕಾಕ ತಾಲೂಕಿನ ದುರದುಂಡಿ ಗ್ರಾಮದ ಹಾಲಪ್ಪ ದುರದುಂಡಪ್ಪ ಅಂತರಗಟ್ಟಿ ಅವರಿಗೆ ಕಡಿಮೆ ಬಡ್ಡಿದರದಲ್ಲಿ, ಸರ್ಕಾರದ ಯೋಜನೆಯಡಿ ಸಾಲ ಮಂಜೂರು ಮಾಡಿಸುವುದಾಗಿ ವಿವಿಧ ಶುಲ್ಕಗಳ ಹೆಸರಿನಲ್ಲಿ ಒಟ್ಟು 7,44,940 ರೂ. ಹಣ ಪಡೆದು ವಂಚಿಸಿದ್ದರು.
ಈ ಬಗ್ಗೆ ಹಾಲಪ್ಪ ದೂರು ನೀಡುತ್ತಿದ್ದಂತೆಯೇ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಅಲ್ಲದೇ, ಬಂಧಿತರಿಂದ 5 ಲಕ್ಷ ರೂ. ಹಣ ಸೇರಿ ವಂಚನೆಗೆ ಬಳಸಿದ ಮೊಬೈಲ್ ಮತ್ತು ಟ್ಯಾಬ್ ಜಪ್ತಿಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net