_1787478130307.webp?w=480&auto=format%2Ccompress&fit=max)
_1787478130307.webp?w=480&auto=format%2Ccompress&fit=max)
ಚಿಂತಾಮಣಿ: ತಾಲೂಕಿನ ಚಿಕ್ಕಪುರದ ಕೆರೆ ಅಂಗಳದಲ್ಲಿ ಜೂಜಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, 3,500 ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.
ದೊಡ್ಡಬೊಮ್ಮನಹಳ್ಳಿಯ ವೀರಭದ್ರಪ್ಪ (65) ಮತ್ತು ಚಿಕ್ಕಪುರಯ ರಮೇಶ್ (46) ಬಂಧಿತರು. ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ಎಸ್.ಶಿವರಾಜು ಮಾರ್ಗದರ್ಶನದಲ್ಲಿ ಸಿಬ್ಬಂದಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ.
ಚಿನ್ನಿ ಮತ್ತು ಬುಜ್ಜಿ ಅಲಿಯಾಸ್ ಮುರಳಿ ಎಂದು ಗುರುತಿಸಲಾಗಿದೆ. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.