ಅರಿಶಿಣ ಬೆಳೆಗಾರರ ಚಿತ್ತ ಮಹಾರಾಷ್ಟ್ರದತ್ತ

ಅರಿಶಿಣ ಬೆಳೆಗಾರರ ಚಿತ್ತ ಮಹಾರಾಷ್ಟ್ರದತ್ತ
ಅರಿಶಿಣ ಬೆಳೆಗಾರರ ಚಿತ್ತ ಮಹಾರಾಷ್ಟ್ರದತ್ತ
Published on

ಪ್ರಮುಖ ಮುಖ್ಯಾಂಶಗಳು

  • ಅರಿಶಿಣ ಬೆಳೆಗಾರರ ಚಿತ್ತ ಮಹಾರಾಷ್ಟ್ರದತ್ತ
  • ಜಿಲ್ಲೆಯಲ್ಲಿ ಮಾರುಕಟ್ಟೆ ಇಲ್ಲದೇ ಪರದಾಟ
  • ಮಹಾರಾಷ್ಟ್ರದ ಸಾಂಗಲಿ ಮಾರುಕಟ್ಟೆಯ ಅವಲಂಬನೆ

ಅರಿಶಿಣ ರೈತರ ಚಿತ್ತ ಮಹಾರಾಷ್ಟ್ರದತ್ತ!

| ಮಾರುಕಟ್ಟೆ ಇಲ್ಲದೆ ರೈತರ ಪರದಾಟ | ರಾಜ್ಯ ಸರ್ಕಾರಕ್ಕೆ ತೆರಿಗೆ ನಷ್ಟ
ಆನಂದ ಭಮ್ಮನ್ನವರ ಚಿಕ್ಕೋಡಿ

ರಾಜ್ಯದಲ್ಲಿ ಚಾಮರಾಜನಗರ ಜಿಲ್ಲೆ ಹೊರತುಪಡಿಸಿದರೆ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅರಿಶಿಣ ಬೆಳೆಗಾರರಿದ್ದಾರೆ. ಆದರೆ, ಅರಿಶಿಣ ಮಾರುಕಟ್ಟೆ ಜಿಲ್ಲೆಯಲ್ಲಿ ಇಲ್ಲದೇ ಇರುವುದರಿಂದ ಅನಿವಾರ್ಯವಾಗಿ ಮಹಾರಾಷ್ಟದ ಸಾಂಗಲಿ, ಮಿರಜ್‌ಗೆ ಅರಿಶಿಣ ಬೆಳೆ ರೈತರು ಕೊಂಡೊಯ್ಯುತ್ತಿದ್ದರೆ, ರಾಜ್ಯ ಸರ್ಕಾರಕ್ಕೆ ತೆರಿಗೆ ನಷ್ಟವಾಗುತ್ತಿದೆ.
ಜಿಲ್ಲೆಯ ರಾಯಬಾಗ, ಮೂಡಲಗಿ, ಚಿಕ್ಕೋಡಿ, ಅಥಣಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕಡಪಾ ಮತ್ತು ರಾಜಾಪುರಿ ತಳಿಯ ಅರಿಶಿಣ ಬೆಳೆಯಲು ಆಯ್ಕೆ ಮಾಡಲಾಗುತ್ತದೆ. ಇದು 9 ತಿಂಗಳ ಬೆಳೆಯಾಗಿದೆ. ಇದನ್ನು ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ನಾಟಿ ಮಾಡಿ, ಫೆಬ್ರುವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಕಟಾವು ಮಾಡಲಾಗುತ್ತದೆ.

ಜಿಲ್ಲೆಯ 4 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ:
ಅಥಣಿ ತಾಲ್ಲೂಕಿನಲ್ಲಿ ೬೮೬, ಚಿಕ್ಕೋಡಿಯಲ್ಲಿ ೪೧೪, ಗೋಕಾಕದಲ್ಲಿ ೬೦೬, ಹುಕ್ಕೇರಿಯಲ್ಲಿ ೮೧, ಕಾಗವಾಡದಲ್ಲಿ ೬೩, ಮೂಡಲಗಿಯಲ್ಲಿ ೭೧೦, ರಾಯಬಾಗದಲ್ಲಿ ೧೬೦೩ ಹಾಗೂ ಯರಗಟ್ಟಿ ತಾಲ್ಲೂಕಿನಲ್ಲಿ ೪.೫ ಪ್ರದೇಶದಲ್ಲಿ ಅರಿಶಿಣ ಬೆಳೆ ಇದೆ. ಜಿಲ್ಲೆಯಲ್ಲಿ ಅಂದಾಜು 62,713 ಮೆಟ್ರಿಕ್ ಟನ್ ಅರಿಶಿಣ ಉತ್ಪಾದನೆಯಾಗುತ್ತಿದೆ.
ಎಕರೆಗೆ ೩೦-೪೦ ಕ್ವಿ. ಇಳುವರಿ:
ಪ್ರತಿ ಎಕರೆಗೆ ಅರಿಶಿಣ ಬೆಳೆಗೆ ಬೀಜ, ಗೊಬ್ಬರ, ಔಷಧ, ಕೂಲಿಕಾರ್ಮಿಕರ ಖರ್ಚು ಸೇರಿ ಅಂದಾಜು 70 ಸಾವಿರದಿಂದ 1 ಲಕ್ಷ ರೂ.ವರೆಗೆ ಖರ್ಚು ತಗಲುತ್ತದೆ. ಪ್ರತಿ ಎಕರೆಗೆ ೩೦ರಿಂದ ೪೦ ಕ್ವಿಂಟಾಲ್ ಅರಿಶಿಣ ಇಳುವರಿ ಬರುತ್ತಿದೆ. ಕಳೆದ ವರ್ಷ ಸಾಂಗಲಿ ಗುಣಮಟ್ಟದ ಅರಿಶಿಣಕ್ಕೆ ಕ್ವಿಂಟಾಲ್‌ಗೆ 13 ಸಾವಿರ ಬೆಲೆ ದೊರೆತಿದೆ. ಈ ಬಾರಿ ಮಹಾ ಸಾಮಾನ್ಯ ಪ್ರತಿ ಕ್ವಿಂಟಲ್‌ಗೆ 16 ರಿಂದ 18 ಸಾವಿರದ ಬೆಲೆ ಸಿಗುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ.
----------------
ಬಾಕ್ಸ್...
ಸರ್ಕಾರದ ಬೆಂಬಲ ಅಗತ್ಯ
ಸರ್ಕಾರ ಅರಿಶಿಣ ಬೆಳೆಗಾರರ ​​ಬಗ್ಗೆ ನಿರ್ಲಕ್ಷ್ಯ ತೋರಿದ ಕಾರಣ ಪ್ರತಿ ವರ್ಷ ಬೆಳಗಾವಿ ಜಿಲ್ಲೆಯಲ್ಲಿ ಬೆಳೆಯುವ ಅಂದಾಜು 60 ಸಾವಿರ ಮೆಟ್ರಿಕ್ ಟನ್ ಅರಿಶಿಣ ಮಹಾರಾಷ್ಟ್ರ ಮಾರುಕಟ್ಟೆಗೆ ಹೋಗುತ್ತಿದೆ. ಪರಿಣಾಮ ವ್ಯಾಪರ ವಹಿವಾಟಿನಿಂದ ಸರ್ಕಾರಕ್ಕೆ ಬರುವ ತೆರಿಗೆ ನಷ್ಟವಾಗುತ್ತಿದೆ. ಈ ಬಗ್ಗೆ ಜಿಲ್ಲೆಯ ಶಾಸಕರು, ಸಚಿವರು ಗಮನಹರಿಸಿ ಸರ್ಕಾರದಿಂದ ಅರಿಶಿಣ ಖರೀದಿಸಿ, ಸೂಕ್ತ ಬೆಂಬಲ ಬೆಲೆ ಒದಗಿಸಿ, ಅರಿಶಿಣ ಬೆಳೆಗಾರರನ್ನು ಉತ್ತೇಜಿಸಬೇಕು ಎಂದು ಹಾರೂಗೇರಿಯ ಅರಿಶಿಣಗಾರ ತಮ್ಮಣ್ಣ ಕುರಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net