ಎಂ.ಎನ್.ಕೋಟೆ : ದೇಶದ ಸನಾತನ ಸಂಸತಿ (tumkur) ಪರಂಪರೆಯ ಮೇಲೆ ಬೆಳಕು ಚೆಲ್ಲುವಲ್ಲಿ ದೇವಾಲಯಗಳು ಸ್ಮಾರಕಗಳಾಗಿವೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.
ಗುಬ್ಬಿ ತಾಲೂಕಿನ ಹೊಸಕೆರೆ ಗ್ರಾಮದ ಶ್ರೀ ಮಾರಮ್ಮ ದೇವಿಯ ನೂತನ ವಿಮಾನ ಗೋಪುರ ಕಳಸ ಸ್ಥಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವದಲ್ಲಿ ಮಾತನಾಡಿ, ದೇವಾಲಯ ನಿಮಾರ್ಣ ಮಾಡುವುದರಿಂದ ಗ್ರಾಮಗಳಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡುತ್ತದೆ. ಇದರಿಂದ ದೇವಾಲಯಗಳ ಅವಶ್ಯಕತೆ ಗ್ರಾಮೀಣ ಭಾಗಕ್ಕೆ ಹೆಚ್ಚಿದೆ ಎಂದರು.
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶಕ್ಕೆ ಭವಿಷ್ಯವಿದೆ. ಎರಡು ವರ್ಷದಲ್ಲಿ ಭಾರತ ನಂಬರ್ ಒನ್ ದೇಶ ಆಗುತ್ತದೆ. ಮುಂದಿನ ಯುವ ಪೀಳಿಗೆಗೆ ದೊಡ್ಡ ಮಟ್ಟದ ಬದಲಾವಣೆಯಾಗಿ ಇಡೀ ದೇಶದಲ್ಲೇ ದೇವಸ್ಥಾನಗಳು ನಿಮಾರ್ಣವಾಗುತ್ತದೆ. ದೇವಾಲಯಗಳಿಗೆ ತನ್ನದೆ ಆದ ವೈಶಿಷ್ಟ$್ಯಗಳನ್ನು ಹೊಂದಿದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚು ದೇವಾಲಯಗಳು ನಿಮಾರ್ಣವಾಗಿದೆ. ಮಾರಮ್ಮ ದೇವಿ ಆಶೀರ್ವಾದ ಇದ್ದರೆ ದೇವಾಲಯ ನಿಮಾರ್ಣಕ್ಕೆ ಸಾಕಷ್ಟು ಸೌಲಭ್ಯ ಮಾಡುತ್ತೇನೆ ಎಂದರು.
ಈ ಭಾಗದಲ್ಲಿ ರಸ್ತೆಗಳು, ನೀರಾವರಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಗುಬ್ಬಿ ತಾಲೂಕಿನಲ್ಲಿ ಸಾಕಷ್ಟು ರಸ್ತೆಗಳನ್ನು ಮಾಡಿಕೊಡಿ ಎಂದು ಅರ್ಜಿಗಳು ಬಂದಿದ್ದು, ಸರ್ಕಾರಕ್ಕೆ ಕಳುಹಿಸಿದ್ದೇನೆ. ಸರ್ಕಾರದಿಂದ ಅನುದಾನ ಬಂದ ತಕ್ಷಣ ರಸ್ತೆ ನಿಮಾರ್ಣ ಮಾಡಿಕೊಡುತ್ತೇನೆ ಎಂದು ತಿಳಿಸಿದರು.
ಮುಖಂಡರಾದ ಎಕೆಪಿರಾಜು, ನಟೇಶ್, ಮಹಾರುದ್ರಸ್ವಾಮಿ, ಗುರುರೇಣುಕರಾಧ್ಯ, ರಂಗನಾಥ್, ಬಾಬು, ಅಂಬರೀಷ್, ಸೋಮಣ್ಣ, ನಾರಾಯಣಮೂರ್ತಿ ಹಾಗೂ ಗ್ರಾಮಸ್ಥರು ಇದ್ದರು.