ಬೇರಂಬಾಡಿ ಗ್ರಾಮದಲ್ಲಿ ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಅಭಿಯಾನ
ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿ ಗ್ರಾಮದಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಅಂಗವಾಗಿ ಜಾಥಾ ನಡೆಯಿತು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ
ಬೇರಂಬಾಡಿ ಗ್ರಾಮ ಪಂಚಾಯಿತಿ
ಗುಂಡ್ಲುಪೇಟೆ: ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ನಡೆಯುತ್ತಿರುವ 100 ದಿನಗಳ ಟಿಬಿ ಅಭಿಯಾನ ಅಂಗವಾಗಿ ತಾಲೂಕಿನ ಬೇರಂಬಾಡಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಮಂಗಳವಾರ ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಅಭಿಯಾನ ನಡೆಯಿತು.
ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಜಾಥಾಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ ಚಾಲನೆ ನೀಡಿದರು. ಶಿಬಿರದಲ್ಲಿ 113 ಜನರನ್ನು ತಪಾಸಣೆ ಮಾಡಿ, 66 ಜನರಿಗೆ ಪೋರ್ಟಬಲ್ ಡಿಜಿಟಲ್ ಎಕ್ಸ್-ರೇ ಮೂಲಕ ಎದೆ ಎಕ್ಸ್-ರೇ ಪರೀಕ್ಷೆ ನಡೆಸಲಾಯಿತು.
ಕಗ್ಗಳದಹುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಅಮೂಲ್ಯಾ, ಸಿಬ್ಬಂದಿ ಮಹೇಶ್, ದೀಪಶ್ರೀ, ನವೀನ್, ವಹೀದ್, ನಂಜಮನಿ, ವಿನಾಯಕ, ಅಶ್ವಿನಿ, ಪೂಜಾ ಇತರರಿದ್ದರು.