ಒಂದೇ ಗುಂಡಿಯಲ್ಲಿ ತಂದೆ-ತಾಯಿ, ಸಹೋದರಿಯನ್ನೇ ಹೂತಿಟ್ಟ ನರಹಂತಕ; ತನಿಖೆಯಲ್ಲಿ ಹೊರಬಿತ್ತು ಭಯಾನಕ ಸಂಗತಿ | Triple Murder

ತ್ರಿವಳಿ ಕೊಲೆ ಪ್ರಕರಣ
ತ್ರಿವಳಿ ಕೊಲೆ ಪ್ರಕರಣ
Published on

ಪ್ರಮುಖ ಮುಖ್ಯಾಂಶಗಳು

  • ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ತ್ರಿವಳಿ ಕೊಲೆ
  • ತಂದೆ-ತಾಯಿ, ಸಹೋದರಿಯನ್ನು ಕೊಂದು ಒಂದೇ ಗುಂಡಿಯಲ್ಲಿ ಹೂತಿದ್ದ ಪಾಪಿ
  • ಮಿಸ್ಸಿಂಗ್ ಕೇಸ್​ ದೂರು ಕೊಡಲು ಬಂದಾಗ ಪ್ರಕರಣ ಬೆಳಕಿಗೆ
  • ಆರೋಪಿಯನ್ನು ಅಕ್ಷಯ್ ಕುಮಾರ್​ ಎಂದು ಗುರುತಿಸಲಾಗಿದೆ
ವಿಜಯನಗರ: ತಂದೆ, ತಾಯಿ, ಸಹೋದರಿಯನ್ನೇ ಭೀಕರವಾಗಿ ಹತ್ಯೆಗೈದ ಪಾಪಿ, ಮೂವರ ಶವವನ್ನು ಒಂದೇ ಕುಣಿಯಲ್ಲಿ ಹೂತಿಟ್ಟ ಪ್ರಕರಣ ಕೊಟ್ಟೂರಿನಲ್ಲಿ ವರದಿಯಾಗಿದೆ. ಆರೋಪಿಯನ್ನು ಅಕ್ಷಯ್​ ಕುಮಾರ್​ ಎಂದು ಗುರುತಿಸಲಾಗಿದೆ. ಸದ್ಯ ಆತನನ್ನು ಬೆಂಗಳೂರು ಪೊಲೀಸರು ಬಂಧಿಸಿ, ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

4 ಅಡಿ ಆಳ, ಎರಡು ಅಡಿ ಅಗಲ

4 ಅಡಿ ಆಳ, ಎರಡು ಅಡಿ ಅಗಲ ಗುಂಡಿ ತೆಗೆದು ಮೂವರ ಶವವನ್ನು ಒಂದೇ ಕುಣಿಯಲ್ಲಿ ಹೂತು ಹಾಕಿದ್ದ ನರಹಂತಕ ಅಕ್ಷಯ್ ಕುಮಾರ್, ತಂದೆ-ಸಹೋದರಿ ಇಲ್ಲದ ಸಮಯದಲ್ಲಿ, ಮೊದಲು ತಾಯಿ ಜಯಲಕ್ಷ್ಮಿಯ ಕತ್ತುಸೀಳಿ ಕೊಂದಿದ್ದು, ನಂತರದಲ್ಲಿ ಭೀಮರಾಜ್​ ಮತ್ತು ತಂಗಿ ಅಮೃತಾಳನ್ನು ಹತ್ಯೆಗೈದಿದ್ದಾನೆ. ಬಳಿಕ ಮೂವರ ಮೃತದೇಹವನ್ನು ಒಂದೇ ಗುಂಡಿಯಲ್ಲಿ ಹೂತಿಟ್ಟು, ಪೊಲೀಸರ ಬಳಿ ಮಿಸ್ಸಿಂಗ್ ಕಂಪ್ಲೇಟ್​ ಕೊಡಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.
ತಂದೆ-ತಾಯಿ, ಸಹೋದರಿಯನ್ನು ಕೊಂದ ಬೆನ್ನಲ್ಲೇ ದೂರದ ಬೆಂಗಳೂರಿಗೆ ತೆರಳಿದ್ದ ಆರೋಪಿ ಅಕ್ಷಯ್, ನಗರದ ತಿಲಕ್ ನಗರದ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲು ಮಾಡಲು ಸಂಚು ಹೂಡಿ, ಖಾಕಿ ಮುಂದೆ ತನ್ನ ತಂದೆ, ತಾಯಿ ಮತ್ತು ಸಹೋದರಿ ಜಯದೇವ ಆಸ್ಪತ್ರೆಗೆ ಹೋದವರು ಮನೆಗೆ ವಾಪಾಸ್​ ಆಗಿಲ್ಲ ಎಂದಿದ್ದಾನೆ. ಈ ಸಂಬಂಧ, ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂಬರ್ 35/26 ನಾಪತ್ತೆ ಪ್ರಕರಣ ದಾಖಲು ಮಾಡಿದ್ದ. ಆದ್ರೆ, ಆರೋಪಿಯ ದ್ವಂದ್ವ ಹೇಳಿಕೆಯನ್ನು ಗಮನಿಸಿದ ಖಾಕಿ, ಕಡೆಗೂ ಆತನಿಂದ ಸತ್ಯ ಕಕ್ಕಿಸಿದೆ.

ನಿಜಾಂಶ ಬಯಲು

ಆರೋಪಿಯನ್ನು ವಿಚಾರಣೆ ನಡೆಸಿದ ಖಾಕಿಗೆ ಬೀಮ್‌ರಾಜ್, ಜಯಲಕ್ಷ್ಮಿ, ಸಹೋದರಿ ಅಮೃತ ಕಾಣೆಯಾಗಿಲ್ಲ. ಬದಲಿಗೆ ಕೊಲೆಯಾಗಿದ್ದಾರೆ ಎಂಬ ನಿಜಾಂಶ ತಿಳಿಯಿತು. ಮತ್ತೊಂದು ಶಾಕಿಂಗ್ ಸಂಗತಿ ಎಂದರೆ, ಆ ಮೂವರನ್ನು ಕೊಲೆಗೈದಿದ್ದು ಅಕ್ಷಯ್​. ತನ್ನ ಮನೆಯವರನ್ನು ಕೊಲೆಗೈದ ಆರೋಪಿ, ಮನೆಯ ಹಾಲ್‌ನಲ್ಲಿ ಮೂವರ ಶವವನ್ನು ಹೂತಿದ್ದಾಗಿ ಸತ್ಯ ಒಪ್ಪಿಕೊಂಡಿದ್ದಾನೆ. ನಾಲ್ಕು ಅಡಿ ಉದ್ದ, ಎರಡು ಅಡಿ ಅಗಲ ಕುಣಿತೆಗೆದು ಹೂತಿಟ್ಟಿದ್ದ ಎಂಬುದು ಗೊತ್ತಾಗಿದೆ.

ಕೊಟ್ಟೂರು ಎಸ್ಪಿ ಜಾಹ್ನವಿ ಹೇಳಿಕೆ...

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಕೊಟ್ಟೂರು ಎಸ್ಪಿ ಜಾಹ್ನವಿ, ಕೊಲೆಯ ಹಿಂದಿರುವ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪ್ರಸ್ತುತ, ತ್ರಿವಳಿ ಕೊಲೆ ಕೇಸ್​ ತನಿಖೆ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net