ಶಿಕ್ಷಕರಿಗೆ ಸನ್ಮಾನ

Tribute to teachers
Tribute to teachers
Published on
ಚಿಕ್ಕನಾಯಕನಹಳ್ಳಿ: -ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆಯುವಂತೆ ಮಾಡಿದ ತಾಲೂಕಿನ 72 ಶಿಕ್ಷಕರನ್ನು "ನಮಗೆ ಪ್ರೇರಣೆ ನಮ್ಮ ಮೇಷ್ಟ್ರು' ಶೀರ್ಷಿಕೆಯಡಿ ಗೌರವಿಸಲು ಎಸ್​ಬಿ. ಚಾರಿಟಬಲ್​ ಟ್ರಸ್ಟ್​ ಜ್ಞಾನಕಲ್ಪನಿಂದ ಮೇ16ರಂದು ಬೆಳಗ್ಗೆ 11ಗಂಟೆಗೆ ಪಟ್ಟಣದ ತೀನಂಶ್ರೀ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್​ಬಾಬು ತಿಳಿಸಿದರು.
ತಾಲೂಕು ಆಡಳಿತ ಸೌಧದ ಶಾಸಕರ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ -ಎಸ್ಸೆಸ್ಸೆಲ್ಸಿಯಲ್ಲಿ 600ಕ್ಕೂ ಹೆಚ್ಚು ಅಂಕಗಳಿಸಿದ 34 ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದು, ಅದರಂತೆ ಈ ಸಾಧನೆಗೆ ಕಾರಣರಾದ ವಿಷಯವಾರು ಶಿಕ್ಷಕರನ್ನು ಗೌರವಿಸಲಾಗುವುದು ಎಂದರು.
2024-&25ನೇ ಸಾಲಿನಲ್ಲಿ 625ಕ್ಕೆ 625ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ರ್ಯಾಂಕ್​ ಪಡೆದ ತಾಲೂಕಿನ ಹಂದನಕೆರೆಯ ವಿದ್ಯಾರ್ಥಿ ಕಿಶನ್​ ಕುಮಾರ್​ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು 623ಅಂಕ ಗಳಿಸಿದ ಯಶ್ವಂತ್​ ವಹಿಸಲಿದ್ದು, 620 ಅಂಕ ಪಡೆದ ವಿದ್ಯಾರ್ಥಿ ಮಹಾಲಕ್ಷಿ$್ಮ ಆಶಯ ನುಡಿಗಳನ್ನಾಡಲಿದ್ದಾರೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net