ಕ್ಯಾನ್ಸರ್​ ತಡೆಗೆ ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಅಗತ್ಯ

Treatment at an early stage is essential to prevent cancer.
Treatment at an early stage is essential to prevent cancer.
Published on
ಚಿಕ್ಕಬಳ್ಳಾಪುರ: ಕ್ಯಾನ್ಸರ್​ ಅನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಪ್ರಾಧ್ಯಾಪಕಿ ಡಾ.ಉಷಾ ಜಿ.ಶಾನಾಯಿ ತಿಳಿಸಿದರು.
ತಾಲೂಕಿನ ಪೆರೇಸಂದ್ರದಲ್ಲಿನ ಶಾಂತಾ ಅಲೈಡ್​ ಆರೋಗ್ಯ ವಿಜ್ಞಾನ ಕಾಲೇಜು ಮಂಗಳವಾರ ಆಯೋಜಿಸಿದ್ದ ಕ್ಯಾನ್ಸರ್​ ಬಗೆಗಿನ ಅರಿವು ಮತ್ತು ಜಾಗೃತಿ ಬಗೆಗಿನ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಕ್ಯಾನ್ಸರ್​ ಪತ್ತೆ ಹಚ್ಚುವುದೇ ಕಷ್ಟವಾಗಿತ್ತು. ರೋಗಿಗಳು ಸೂಕ್ತ ಚಿಕಿತ್ಸೆ ಇಲ್ಲದೇ ಜೀವನವಿಡಿ ನರಳುತ್ತಿದ್ದರು. ಆದರೆ ಈಗ ಆಧುನಿಕ ಪರೀೆಗಳ ಮೂಲಕ ನಿಖರವಾಗಿ ಗುರುತಿಸಬಹುದು. ಹಾಗೆಯೇ ಆರಂಭದ ಹಂತದ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದರು.
ಕ್ಯಾನ್ಸರ್​ ಲಕ್ಷಣಗಳವುಳ್ಳವರು ಪ್ರಾಥಮಿಕ ಹಂತದಲ್ಲೇ ಪರಿಣಿತ ವೈದ್ಯರಿಂದ ತಪಾಸಣೆಗೊಳಗಾಗಿ ಚಿಕಿತ್ಸೆ ಪಡೆಯಬೇಕು.ಯಾರಿಗಾದರೂ ಈ ಕಾಯಿಲೆ ಬರಬಹುದು. ಶ್ವಾಸಕೋಶ, ಮೂತ್ರಜನಕಾಂಗ, ಲಿವರ್​, ಗರ್ಭಕೋಶ, ರಕ್ತ, ಸ್ತನ, ಗಂಟಲು ಸೇರಿ ನಾನಾ ಭಾಗಗಳಲ್ಲಿ ಸೋಂಕು ಪತ್ತೆಯಾಗಬಹುದು. ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳ ಸೇವನೆ ಸೇರಿ ನಾನಾ ದುಶ್ಚಟಗಳಿಂದ ದೂರವಿರಬೇಕು. ಪೌಷ್ಟಿಕ ಆಹಾರ, ಸ್ವಚ್ಛತೆ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂದರು.
ಕ್ಯಾನ್ಸರ್​ ಬಗೆಗಿನ ಪ್ರಾಥಮಿಕ ತಿಳಿವಳಿಕೆಗೆ ವ್ಯಾಪಕವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಕಾಲ ಕಾಲಕ್ಕೆ ರೋಗ ಪತ್ತೆ ಶಿಬಿರಗಳನ್ನು ಉಚಿತವಾಗಿ ಕೈಗೊಳ್ಳಲಾಗುತ್ತಿದೆ. ಇದರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಂಡು ಕಾಯಿಲೆ ಬಾರದಂತೆ ಎಚ್ಚರ ವಹಿಸಬೇಕು ಎಂದರು.
ಶಾಂತಾ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಕೋಡಿರಂಗಪ್ಪ ಮಾತನಾಡಿ, ಕ್ಯಾನ್ಸರ್​ ಅಂಟು ರೋಗವಲ್ಲದಿದ್ದರೂ ಅನೇಕರು ರೋಗಿಗಳನ್ನು ನೋಡಿ ಭಯಪಡುತ್ತಾರೆ. ಇದರಿಂದ ಕ್ಯಾನ್ಸರ್​ ಪೀಡಿತರು ಅಳುಕಿನಿಂದ ಸಾಮಾಜಿಕ ಕಳಂಕಕ್ಕೆ ಗುರಿಯಾಗುತ್ತಿದ್ದು ಇದರ ಪ್ರಭಾವದ ಭಯ, ಗೊಂದಲದಿಂದ ರೋಗ ನಿರೋಧಕ ಶಕ್ತಿ ಣಿಸಿ, ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದರು.
ವೈದ್ಯಕಿಯ,ಆರೋಗ್ಯ ವಿಜ್ಞಾನ ಕಾಲೇಜುಗಳು, ಆಸ್ಪತ್ರೆಗಳು ತಪಾಸಣೆ, ಚಿಕಿತ್ಸೆ ಸೇವೆ ಒದಗಿಸುವುದರ ಜತೆಗೆ ವಿಚಾರ ಸಂಕಿರಣ, ಕಾರ್ಯಾಗಾರ, ನಾಟಕ ಪ್ರದರ್ಶನ, ಭಾಷಣ, ರಸಪ್ರಶ್ನೆ, ಮೂಕಾಭಿನಯ ಸೇರಿ ವಿವಿಧ ಸ್ಪರ್ಧೆಗಳ ಮೂಲಕ ಕ್ಯಾನ್ಸರ್​ ಬಗೆಗಿನ ತಪ್ಪು ಕಲ್ಪನೆಗಳನ್ನು ದೂರವಾಗಿಸಬೇಕು ಎಂದರು.
ಪ್ರಾಂಶುಪಾಲೆ ಪ್ರಸಿತಾ ಸಾಯಿ ಹರಿಣಿ, ಮುದಾಸಿರ್​ ಅನುಷ್​, ಸಾಯಿ ಕೃಷ್ಣ, ಪವನ್​ ರೇವತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net