ನಂದಿನಿ ಬಡಾವಣೆಯಲ್ಲಿ ಟ್ರಾಫಿಕ್ ಭವಣೆ; ಕಿರಿದಾದ ರಸ್ತೆಯಿಂದ ನಿತ್ಯ ಕಿರಿಕಿರಿ

ನಂದಿನಿ ಬಡಾವಣೆಯಲ್ಲಿ ಟ್ರಾಫಿಕ್ ಭವಣೆ; ಕಿರಿದಾದ ರಸ್ತೆಯಿಂದ ನಿತ್ಯ ಕಿರಿಕಿರಿ
ನಂದಿನಿ ಬಡಾವಣೆಯಲ್ಲಿ ಟ್ರಾಫಿಕ್ ಭವಣೆ; ಕಿರಿದಾದ ರಸ್ತೆಯಿಂದ ನಿತ್ಯ ಕಿರಿಕಿರಿ
Published on

ಪ್ರಮುಖ ಮುಖ್ಯಾಂಶಗಳು

  • ನಂದಿನಿ ಬಡಾವಣೆಯಲ್ಲಿ ಟ್ರಾಫಿಕ್ ಭವಣೆ
  • ಕಿರಿದಾದ ರಸ್ತೆಯಿಂದ ನಿತ್ಯ ಜನರಿಗೆ ಕಿರಿಕಿರಿ
  • ಏಕಮುಖ ಸಂಚಾರ, ರಸ್ತೆ ವಿಭಜಕ ಅಳವಡಿಕೆಗೆ ಒತ್ತಾಯ

ಪ್ರಶಾಂತರಿಪ್ಪನ್​ಪೇಟೆ,ಬೆಂಗಳೂರು :ಬೆಂಗಳೂರು ಎಷ್ಟುವೇಗವಾಗಿ ಬೆಳೆಯುತ್ತಿದೆಯೋಅಷ್ಟೇ ದೊಡ್ಡ ಸಮಸ್ಯೆಯಾಗಿಕಾಡುತ್ತಿರುವುದು ಇಲ್ಲಿನಸಂಚಾರಸಿಕ್ಕು. ಸಂಚಾರ ಸಿಕ್ಕಿಗೆಪ್ರಮುಖ ಕಾರಣ ಹೆಚ್ಚಾದ ವಾಹನಗಳಸಂಖ್ಯೆ ಒಂದೆಡೆಯಾದರೆ,ಕಿರಿದಾದ ರಸ್ತೆಗಳುಮತ್ತೊಂದು ಕಾರಣ.ಹಾಗೆ ಕಿರಿದಾದರಸ್ತೆಗಳಿಂದ ಸಂಚಾರಸಿಕ್ಕಿಗೆಸಿಲುಕಿ ನಂದಿನಿ ಲೇಔಟ್ ನಿವಾಸಿಗಳುನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ.

ಕೇವಲ15-20 ವರ್ಷಗಳಹಿಂದೆ ಸಾಮಾನ್ಯ ಪ್ರದೇಶಗಳಾಗಿದ್ದಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿಕಳೆದ 10 ವರ್ಷದಿಂದಜನಸಂಖ್ಯೆಗನುಗುಣವಾಗಿ ವಾಹನಗಳಸಂಖ್ಯೆ ಮಿತಿಮೀರಿದೆ ಇದರಿಂದಚಿಕ್ಕಪುಟ್ಟ ಬಡಾವಣೆಗಳಲ್ಲಿದ್ದಕಿರಿದಾದ ರಸ್ತೆಗಳಲ್ಲಿ ಸಂಚರಿಸುವುದುಬಹಳ ತ್ರಾಸದಾಯಕವಾಗಿದೆ. 2007ರವರೆಗೆದಾಸರಹಳ್ಳಿ ನಗರಸಭೆ (ಸಿಎಂಸಿ)ವ್ಯಾಪ್ತಿಗೊಳಪಟ್ಟಿದ್ದನಂದಿನಿ ಬಡಾವಣೆ ಹಾಗೂ ಸುತ್ತಮುತ್ತಲಿನಪ್ರದೇಶಗಳು 2007ರಲ್ಲಿರಚನೆಯಾದ ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ)ವ್ಯಾಪ್ತಿಗೆಸೇರ್ಪಡೆಯಾದವು.ಸದ್ಯ ಈ ಎಲ್ಲಪ್ರದೇಶ ಗ್ರೇಟರ್ ಬೆಂಗಳೂರುಪ್ರಾಧಿಕಾರದ ಬೆಂಗಳೂರು ಪಶ್ಚಿಮಮಹಾನಗರ ಪಾಲಿಕೆ ವ್ಯಾಪ್ತಿಗೆಸೇರ್ಪಡೆಯಾಗಿವೆ.ಆದರೆ 20ವರ್ಷಗಳ ಹಿಂದಿದ್ದಕಿರಿದಾದ ರಸ್ತೆಗಳು ಮಾತ್ರ ಇಂದಿಗೂಹಾಗೇ ಇವೆ.ಇದರಿಂದಾಗಿಸುತ್ತಮುತ್ತಲಿನ ಪ್ರದೇಶದಲ್ಲಿಸಂಚಾರ ಸಿಕ್ಕು ಸಮಸ್ಯೆ ಮಿತಿಮೀರಿದೆ.

ಮಹಾಲಕ್ಷ್ಮಿಪುರಂವಿಧಾನಸಭಾ ಕ್ಷೇತ್ರ ವ್ಯಾಪ್ತಿಯನಂದಿನಿ ಬಡಾವಣೆ ನಾಲ್ಕನೇ ಹಂತದ16ನೇಮುಖ್ಯ ರಸ್ತೆಯ ಬಳಿ ಹೊರವರ್ತುಲರಸ್ತೆ ಮೇಲೆ ನಿರ್ಮಿಸಿರುವ ಸೇತುವೆಮತ್ತು ಕೂಲಿನಗರದಲ್ಲಿ ನಿರ್ಮಾಣಮಾಡಿರುವ ಮೇಲ್ಸೇತುವೆಗಳುಲಕ್ಷ್ಮೀದೇವಿನಗರ,ವಿಧಾನಸೌಧಬಡಾವಣೆ, ಲಗ್ಗೆರೆಮುಖ್ಯರಸ್ತೆ,ಚೌಡೇಶ್ವರಿನಗರಮುಂತಾದ ಪ್ರದೇಶಗಳಿಗೆ ಸಂಪರ್ಕಕಲ್ಪಿಸುತ್ತವೆ.ಆದರೆ 10ವರ್ಷದ ಹಿಂದೆನಿರ್ಮಾಣಗೊಂಡ ಈ ಫ್ಲೈಓವರ್ ಮತ್ತುಇದಕ್ಕೆ ಸಂಪರ್ಕಿಸುವ ರಸ್ತೆಗಳುತೀರಾ ಕಿರಿದಾಗಿರುವುದರಿಂದಬೆಳಗ್ಗೆ ಮತ್ತು ಸಂಜೆಯ ವೇಳೆಗಂಟೆಗಟ್ಟಳೆ ಸಂಚಾರ ಸಿಕ್ಕುಉಂಟಾಗುತ್ತಿದೆ.ಮೇಲ್ಸೇತುವೆಮೇಲೆ ದ್ವಿಮುಖ ಸಂಚಾರವಿದ್ದುಮದ್ಯದಲ್ಲಿ ರಸ್ತೆ ವಿಭಜಕಇಲ್ಲದಿರುವುದರಿಂದ ದ್ವಿಚಕ್ರವಾಹನ ಮತ್ತು ಆಟೋದವರು ಸಣ್ಣಗ್ಯಾಪ್‌ಗಳ ಮೂಲಕ ನುಗ್ಗಿಬರುವುದರಿಂದ ವಾಹನಗಳು ಸಂಚಾರಸಿಕ್ಕಿನಲ್ಲಿ ಸಿಲುಕಿಕೊಳ್ಳುತ್ತಿವೆ.

ಪರಿಹಾರಮಾರ್ಗಗಳೇನು ?

2016ರಲ್ಲಿಶಂಕುಸ್ಥಾಪನೆಗೊಂಡು,2018ರಲ್ಲಿ ಸಂಚಾರಕ್ಕೆಮುಕ್ತವಾದ ಕೂಲಿನಗರದ ಮೇಲ್ಸೇತುವೆಯರಸ್ತೆ ನಡುವೆ ಡಿವೈಡರ್ ಅಳವಡಿಸಿದರೆವಾಹನ ಸವಾರರು ಬೇಕಾಬಿಟ್ಟಿನುಗ್ಗುವುದು ತಪ್ಪಿ ಸರಿಯಾದಸರದಿಯಲ್ಲಿ ಸಾಗಬಹುದು.ಜೊತೆಗೆ ಎರಡುಕಡೆಯಾದರೂ ರೋಡ್ ಹಂಪ್ಸ್ ಮತ್ತುಸಿಸಿಟಿವಿ ಅಳವಡಿಸಬೇಕು. ಇದರಿಂದ ಕೊಂಚಮಟ್ಟಿನಸಂಚಾರ ಸಿಕ್ಕು ಕಡಿಮೆಯಾಗಬಹುದು. ಹೆಸರೇ ಹೇಳುವಂತೆಇಲ್ಲಿ ವಿಧಾನಸೌಧ ಬಡಾವಣೆಇರುವುದರಿಂದ ಸುತ್ತಮುತ್ತಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ.ಆದ್ದರಿಂದಬೆಳಗ್ಗೆ 8 ರಿಂದ10.30 ಹಾಗೂಸಂಜೆ 5 ರಿಂದರಾತ್ರಿ 9 ರವರೆಗೆವಾಹನಗಳ ಸಂಖ್ಯೆ ಮೂರ್ನಾಲ್ಕುಪಟ್ಟು ಹೆಚ್ಚಾಗುವುದರಿಂದ ಸಂಚಾರಸಿಕ್ಕು ಉಂಟಾಗುತ್ತಿದೆ.ನಂದಿನಿ ಬಡಾವಣೆಯಮುಖ್ಯರಸ್ತೆ ಬಹಳ ಕಿರಿದಾಗಿದ್ದು,16ನೇ ಮುಖ್ಯರಸ್ತೆಮತ್ತು 15ನೇಮುಖ್ಯರಸ್ತೆಯನ್ನು ಈಗಿರುವದ್ವಿಮುಖ ಸಂಚಾರದ ಬದಲಾಗಿ ಏಕಮುಖಸಂಚಾರವನ್ನಾಗಿ ಬದಲಿಸಿದರೆಈಗಿರುವ ಸಂಚಾರ ಸಮಸ್ಯೆಗೆ ದೊಡ್ಡಪರಿಹಾರ ದೊರೆತಂತಾಗುತ್ತದೆ.

ಲಕ್ಷ್ಮೀದೇವಿನಗರ,ವಿಧಾನಸೌಧಬಡಾವಣೆ, ಲಗ್ಗೆರೆಕಡೆ ಹೋಗುವ ವಾಹನಗಳಿಗೆ ಹೊರವರ್ತುಲರಸ್ತೆಯ ಓವರ್ ಬ್ರಿಡ್ಜ್ ಮೂಲಕಏಕಮುಖ ಸಂಚಾರವನ್ನು ನೀಡಿ 15ನೇಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸಬಹುದು.ಅದೇ ರೀತಿ ಲಗ್ಗೆರೆ,ವಿಧಾನಸೌಧಬಡಾವಣೆ,ಲಕ್ಷ್ಮೀದೇವಿನಗರಕಡೆಯಿಂದ ಕೂಲಿನಗರ ಮೇಲ್ಸೇತುವೆಮೂಲಕ ನಂದಿನಿ ಬಡಾವಣೆ ಬಸ್ ನಿಲ್ದಾಣಕಡೆಗೆ ತೆರಳುವ ವಾಹನಗಳಿಗೆ 16ನೇಮೇನ್‌ನಲ್ಲಿ ಏಕಮುಖ ಸಂಚಾರವನ್ನುಕಲ್ಪಿಸಿದರೆ ನಂದಿನಿ ಬಡಾವಣೆಗೆಬಸ್ ಸೌಕರ್ಯ ಕೂಡ ದೊರೆಯಲಿದೆ.

ಇದರಜೊತೆ ಮಾಗಡಿ ರಸ್ತೆ,ಸುಮ್ಮನಹಳ್ಳಿಜಂಕ್ಷನ್ ಕಡೆಯಿಂದ ಬರುವ ವಾಹನಗಳಿಗೆಕೂಲಿನಗರ ್ಲೈಓವರ್ ಕಡೆಯಿಂದಪ್ರವೇಶ ನೀಡದೇ,ಲಗ್ಗೆರೆ ಬ್ರಿಡ್ಜ್ಮೂಲಕ ನಂದಿನಿ ಬಡಾವಣೆ ತಲುಪಲುಅವಕಾಶ ನೀಡಿದರೆ ದೊಡ್ಡ ಮಟ್ಟದವಾಹನ ದಟ್ಟಣೆ ತಗ್ಗುತ್ತದೆ ಎಂಬುದತಜ್ಞರ ಅಭಿಪ್ರಾಯ

10 ವರ್ಷದ ಹಿಂದೆ ರಾಜಕಾಲುವೆ ಮೇಲೆ ಫ್ಲೈಓವರ್ ನಿರ್ಮಾಣ ಮಾಡಿದ್ದಾರೆ. ಆವತ್ತಿಗೂ ಇವತ್ತಿಗೂ ಬಹಳ ಬದಲಾವಣೆ ಆಗಿದೆ. ಆದರೆ ಬದಲಿ ಮಾರ್ಗ ಇಲ್ಲ. ಪೀಣ್ಯ ಕೈಗಾರಿಕಾ ಪ್ರದೇಶ ಹತ್ತಿರ ಇರೋದ್ರಿಂದ ಶಾರ್ಟ್ ಕಟ್ ಆಗುತ್ತೆ ಅಂತ ಜನ ಇಲ್ಲೇ ಹೆಚ್ಚು ಓಡಾಡ್ತಾರೆ. ಸಂಚಾರ ದಟ್ಟಣೆ ಇರುವ ರಸ್ತೆಗಳನ್ನ ಏಕಮುಖ ಸಂಚಾರ ಮಾಡಿ, ದ್ವಿಮುಖ ಸಂಚಾರ ಇರುವ ರಸ್ತೆ ಅಥವಾ ಫ್ಲೈಓವರ್‌ನಲ್ಲಿ ಡಿವೈಡರ್ ಅಳವಡಿಸಿದರೆ ಸ್ವಲ್ಪ ಸಮಸ್ಯೆ ಕಡಿಮೆ ಆಗುತ್ತೆ.

— ಎಸ್.ಸಂತೋಷ್ ಕುಮಾರ್, ಸ್ಥಳೀಯ ನಿವಾಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net