ಟೂರಿಸ್ಟ್ ಗೈಡ್‌ಗಳು ತಪ್ಪು ಇತಿಹಾಸ ಹೇಳದಿರಲಿ

ಮಾನಸಗಂಗೋತ್ರಿಯಲ್ಲಿ ಪ್ರವಾಸಿ ಮಾರ್ಗದರ್ಶಕರಿಗೆ ಆಯೋಜಿಸಿದ್ದ ವಿದೇಶಿ ಭಾಷೆಗಳ ತರಬೇತಿ ಕಾರ್ಯಕ್ರಮವನ್ನು ಪ್ರವಾಸೋದ್ಯಮ ಇಲಾಖೆ  ಜಂಟಿ ನಿರ್ದೇಶಕ ಮೋತಿಲಾಲ ಕೃಷ್ಣ ಲಮಾಣಿ ಉದ್ಘಾಟಿಸಿದರು. ಎ.ಎಂ.ಪ್ರಭುಸ್ವಾಮಿ,  ಪ್ರೊ.ಎಚ್.ಪಿ.ಜ್ಯೋತಿ, ಕಮಲಮ್ಮ, ಡಾ.ಬಿ.ಶ್ರೀಕಂಠಾಚಾರ್, ಎಸ್.ಜೆ.ಅಶೋಕ್ ಇದ್ದರು.
ಮಾನಸಗಂಗೋತ್ರಿಯಲ್ಲಿ ಪ್ರವಾಸಿ ಮಾರ್ಗದರ್ಶಕರಿಗೆ ಆಯೋಜಿಸಿದ್ದ ವಿದೇಶಿ ಭಾಷೆಗಳ ತರಬೇತಿ ಕಾರ್ಯಕ್ರಮವನ್ನು ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕ ಮೋತಿಲಾಲ ಕೃಷ್ಣ ಲಮಾಣಿ ಉದ್ಘಾಟಿಸಿದರು. ಎ.ಎಂ.ಪ್ರಭುಸ್ವಾಮಿ, ಪ್ರೊ.ಎಚ್.ಪಿ.ಜ್ಯೋತಿ, ಕಮಲಮ್ಮ, ಡಾ.ಬಿ.ಶ್ರೀಕಂಠಾಚಾರ್, ಎಸ್.ಜೆ.ಅಶೋಕ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕ ಮೋತಿಲಾಲ ಕೃಷ್ಣ ಲಮಾಣಿ ಸಲಹೆ
  • ವಿದೇಶಿ ಭಾಷೆಗಳ ತರಬೇತಿ
ಮೈಸೂರು: ಸ್ಥಳೀಯ ಐತಿಹಾಸಿಕ ಸ್ಥಳಗಳು, ಪ್ರೇಕ್ಷಣೀಯ ತಾಣಗಳು, ಕಲೆ, ಸಾಂಸ್ಕೃತಿಕ, ಪರಂಪರೆಯನ್ನು ಪ್ರವಾಸಿಗರಿಗೆ ಪರಿಚಯಿಸುವ ಹೊಣೆಗಾರಿಕೆ ಟೂರಿಸ್ಟ್ ಗೈಡ್‌ಗಳ ಮೇಲಿದೆ. ಅದನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ಮೋತಿಲಾಲ ಕೃಷ್ಣ ಲಮಾಣಿ ಹೇಳಿದರು. 
ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಮೈವಿವಿ ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಪ್ರವಾಸಿ ಮಾರ್ಗದರ್ಶಕರಿಗೆ  ಆಯೋಜಿಸಿದ್ದ ವಿದೇಶಿ ಭಾಷೆಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 
ಸ್ಥಳೀಯ ಪ್ರವಾಸಿ ಸ್ಥಳಗಳ ಕುರಿತು ತಿಳಿದುಕೊಳ್ಳಲು ಬರುವ ಪ್ರವಾಸಿಗರಿಗೆ ಟೂರಿಸ್ಟ್ ಗೈಡ್‌ಗಳು ತಪ್ಪು ಇತಿಹಾಸ ಹೇಳಬಾರದು. ಒಮ್ಮೆ ತಪ್ಪು ಇತಿಹಾಸ ತಿಳಿಸಿದರೆ ಮೌಖಿಕವಾಗಿ ಹಾಗೂ ಪಾರಂಪರಿಕವಾಗಿ ಅದೇ ತಪ್ಪು ಮುನ್ನಲೆಗೆ ಬರುತ್ತದೆ. ಆದ್ದರಿಂದ ಪ್ರವಾಸಿಗರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು. ನಿಖರ, ನೈಜ ಮಾಹಿತಿಯನ್ನೇ ಕೊಡಬೇಕು ಎಂದು ತಿಳಿಸಿದರು.
ಪ್ರವಾಸೋದ್ಯಮ ವಿಷಯದಲ್ಲಿ ಕರ್ನಾಟಕವು, ಒಂದು ರಾಜ್ಯ ಹಲವು ಪ್ರಪಂಚವನ್ನು ಒಳಗೊಂಡಿದೆ. ಹೀಗಾಗಿ, ಇದುವೇ ಪ್ರವಾಸೋದ್ಯಮ ಇಲಾಖೆ ಧೇಯ್ಯ ವಾಕ್ಯವಾಗಿದೆ. ರಾಜ್ಯದಲ್ಲಿ ಹಿಮಪಾತ ಪ್ರದೇಶ ಬಿಟ್ಟರೆ ಎಲ್ಲ ರೀತಿಯ ಪ್ರವಾಸೋದ್ಯಮವೂ  ಬೆಳೆದಿದೆ. ಪ್ರವಾಸೋದ್ಯಮ ಅಭಿವೃದ್ಧಿ ಆಗಬೇಕೆಂದರೆ ಕೇವಲ ಸರ್ಕಾರದಿಂದ ಸಾಧ್ಯವಿಲ್ಲ. ಅದಕ್ಕೆ ಅನೇಕ ಎನ್‌ಜಿಒಗಳು, ಹೋಟೇಲ್ ಉದ್ಯಮ, ಪ್ರವಾಸಿ ಮಾರ್ಗದರ್ಶಕರು ಸೇರಿದಂತೆ ಸಾರ್ವಜನಿಕರ ಸಹಭಾಗಿತ್ವದಿಂದ ಪ್ರವಾಸೋದ್ಯಮ ಪ್ರಗತಿಯಾಗಲಿದೆ ಎಂದು ಹೇಳಿದರು.
ಕರ್ನಾಟಕದ ತುಂಬೆಲ್ಲ ದೈವಿಕದತ್ತವಾದ ಪ್ರವಾಸೋದ್ಯಮ ಹರಡಿಕೊಂಡಿದೆ. ಉಡುಪಿ, ಮಂಗಳೂರಿನಲ್ಲಿ ಮೈಸೂರು ಸೇರಿದಂತೆ ರಾಜ್ಯದ ಹಲವಾರು ಭಾಗದಲ್ಲಿ ಪರಿಸರ ಪ್ರವಾಸೋದ್ಯಮ, ಸ್ಮಾರಕ ಪ್ರವಾಸೋದ್ಯಮ ವಿಸ್ತಾರವಾಗಿ ಅಭಿವೃದ್ಧಿಯಾಗಿದ್ದು, ಪ್ರವಾಸೋಧ್ಯಮ ಅಭಿವೃದ್ಧಿಯಲ್ಲಿ ಟೂರಿಸ್ಟ್ ಗೈಡ್‌ಗಳ ಪಾತ್ರ ಬಹಳ ದೊಡ್ಡದು ಎಂದು ತಿಳಿಸಿದರು. 
ಪ್ರತಿವರ್ಷ ಅಂದಾಜು 30 ಕೋಟಿ ಪ್ರವಾಸಿಗರು ದೇಶದ ವಿವಿಧ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಇದರ ಫಲವಾಗಿ ಟೂರಿಸಂನಿಂದ ಪ್ರತ್ಯೇಕ್ಷ, ಪರೋಕ್ಷವಾಗಿ ಟ್ರಿಲಿಯನ್ ಡಾಲರ್‌ನಷ್ಟು ಆದಾಯ ಸರ್ಕಾರಕ್ಕೆ ಬರುತ್ತಿದೆ ಎಂದರು.
ಪ್ರವಾಸೋದ್ಯಮದಿಂದ ಜನರ ಸಹಭಾಗಿತ್ವದೊಂದಿಗೆ ಆರ್ಥಿಕ ಸಬಲೀಕರಣ ಆಗಬೇಕು. ಸ್ಥಳೀಯ ಬುಡಕಟ್ಟು ಸಮುದಾಯಗಳ ಕೌಶಲಗಳ ಬಗ್ಗೆ ಪ್ರಚಾರ ಆಗಬೇಕು. ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ ಎಂದರು.

ಪ್ರವಾಸ ಉಲ್ಲಾಸದಿಂದ ಕೂಡಿರಲಿ

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಎ.ಎಂ.ಪ್ರಭುಸ್ವಾಮಿ ಮಾತನಾಡಿ, ದೇಶದಲ್ಲಿ ಅತಿಥಿ ದೇವೋ ಭವ ಎಂಬ ಕಲ್ಪನೆ ಇದೆ. ಪ್ರವಾಸಿಗರನ್ನೂ ಈ ದೃಷ್ಟಿಯಲ್ಲಿ ಕಾಣಬೇಕು. ಅವರಿಗೆ ಸಮರ್ಪಕ ಮಾಹಿತಿಯೊಂದಿಗೆ ಪ್ರವಾಸದ ಅನುಭವ ಉಲ್ಲಸಿತಗೊಳ್ಳುವಂತೆ ಮಾಡುವಲ್ಲಿ ಟೂರಿಸ್ಟ್ ಗೈಡ್‌ಗಳ ಪಾತ್ರ ಮುಖ್ಯವಾಗಿದೆ ಎಂದರು.
ಮೈವಿವಿ ಮಾಳವೀಯ ಮಿಷನ್ ಶಿಕ್ಷಕರ ಕೇಂದ್ರದ ನಿರ್ದೇಶಕಿ ಪ್ರೊ.ಎಚ್.ಪಿ.ಜ್ಯೋತಿ, ಎಸ್‌ಸಿ, ಎಸ್‌ಟಿ ವಿಶೇಷ ಘಟಕದ ಸಹಾಯಕ ಕುಲಸಚಿವೆ ಕಮಲಮ್ಮ, ಶೈಕ್ಷಣಿಕ ಬಹು ಮಾದ್ಯಮ ಸಂಶೋಧನಾ ಕೇಂದ್ರದ ನಿದೇರ್ಶಕ ಡಾ.ಬಿ.ಶ್ರೀಕಂಠಾಚಾರ್, ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಅಧ್ಯಕ್ಷ ಎಸ್.ಜೆ.ಅಶೋಕ್ ಪಾಲ್ಗೊಂಡಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net