ವಿಷಾನಿಲ ಸೋರಿಕೆಗೆ ಮೂವರು ಕಾರ್ಮಿಕರು ಬಲಿ

ಗುರುಮಠಕಲï ತಾಲೂಕಿನ ಕಡೆಚೂರ-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ಸಿಲ್ ಲ್ಯಾಬೋರೇಟರೀಸ್ ಪ್ರೆÊ.ಲಿಮಿಟೆಡ್ ಕಂಪನಿ.
ಗುರುಮಠಕಲï ತಾಲೂಕಿನ ಕಡೆಚೂರ-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ಸಿಲ್ ಲ್ಯಾಬೋರೇಟರೀಸ್ ಪ್ರೆÊ.ಲಿಮಿಟೆಡ್ ಕಂಪನಿ.
Published on

ಪ್ರಮುಖ ಮುಖ್ಯಾಂಶಗಳು

  • ಕಡೇಚೂರು-ಬಾಡಿಯಾಳ ಕೆಮಿಕಲï -Á್ಯಕ್ಟರಿಯಲ್ಲಿ ಅವಘಡ
  • ಸಚಿವ ಡಾ.ಶರಣಪ್ರಕಾಶ ಪಾಟೀಲ್ ಭೇಟಿ
ಯಾದಗಿರಿ:

ಕೆಮಿಕಲ್ -Á್ಯಕ್ಟರಿಯಲ್ಲಿ ವಿಷಾನಿಲ ಸೋರಿಕೆಯಾಗಿ ಮೂವರು ಕಾರ್ಮಿಕರು ದುರ್ಮರಣ ಹೊಂದಿ, ಇನ್ನಿಬ್ಬರು ಚಿಂತಾಜನಕ ಸ್ಥಿತಿ ತಲುಪಿರುವ ದುರ್ಘಟನೆ ಗುರುಮಠಕಲï ತಾಲೂಕಿನ ಕಡೇಚೂರ-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ಸಿಲ್ ಲ್ಯಾಬೋರೇಟೀಸ್ ಕೆಮಿಕಲï ಕಾರ್ಖಾನೆಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

ಮಧ್ಯಪ್ರದೇಶದ ವಿಕ್ರಂಸಿAಗ್ ಗೊಂಡಾ, ಸಂಜಯಸಿAಗ್ ಗೊಂಡಾ, ತೆಲಂಗಾಣ ಮಹಿಬೂಬ್ ನಗರ ಜಿಲ್ಲೆಯ ಅಲ್ಲಪಲ್ಲಿ ಗ್ರಾಮದ ಕತಾಲ್ ಗಣೇಶ್ ಕಾಡದೇವಪ್ಪ ಮೃತ ಕಾರ್ಮಿಕರು. ತೆಲಂಗಾಣದ ಅನಂತಪುರ ಜಿಲ್ಲೆಯ ಮಂಚಾಲï ಹೇಮಂತ್, ಮಂಚಾಲ್ ಶಿವಕುಮಾರ ತೀವ್ರ ಅಸ್ವಸ್ಥರಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಲï ಲ್ಯಾಬೋರೇಟರೀಸ್ ಪ್ರೆÊ.ಲಿಮಿಟೆಡ್ ಹೆಸರಿನ ರಾಸಾಯಿನಿಕ ಕಂಪನಿಯಲ್ಲಿ ಎಂದಿನAತೆ ಕಾರ್ಮಿಕರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾಗ ಎತ್ತರ ಬಾಯ್ಲರ್‌ನಿಂದ ಕೆಮಿಕಲ್ ಸೋರಿಕೆಯಾಗಿ ಕ್ಷಣಾರ್ಧದಲ್ಲೇ ಕಟ್ಟಡದ ತುಂಬೆಲ್ಲ ಆವರಿಸಿಕೊಂಡಿದೆ. ಕೆಟ್ಟ ವಾಸನೆ ಮತ್ತು ವಿಷ ಗಾಳಿಯಿಂದಾಗಿ ಒಳಗಿದ್ದ ಐವರಲ್ಲಿ ಮೂವರು ಉಸಿರುಗಟ್ಟಿ ಮೃತಪಟ್ಟರೆ, ಇನ್ನಿಬ್ಬರು ಹರಸಾಹಸ ಪಟ್ಟು ಹೊರಗೆ ಓಡಿ ಬಂದಿದ್ದಾರೆ. ಉಸಿರಾಡಲು ಆಗದೆ ಕೆಳಗೆ ಬಿದ್ದು ನರಳಾಡುತ್ತಿದ್ದಾಗ ಸ್ಥಳದಲ್ಲಿದ್ದ ಇನ್ನಿತರ ಕಾರ್ಮಿಕರ ಸಹಾಯಕ್ಕೆ ಧಾವಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಬರ ಪರಿಸ್ಥಿತಿ ಅವಲೋಕನ ಮಾಡುವುದಕ್ಕಾಗಿ ಜಿಲ್ಲೆಗೆ ಆಗಮಿಸಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ವಿಷಯ ತಿಳಿಯುತ್ತಿದ್ದಂತೆ ಕಾರ್ಖಾನೆಗೆ ಭೇಟಿ ನೀಡಿ ಸಮಗ್ರ ಮಾಹಿತಿ ಪಡೆದರು. ಶಾಸಕ ಶರಣಗೌಡ ಕಂದಕೂರ, ಜಿಲ್ಲಾಽಕಾರಿ ರಾಹುಲ್ ಪಾಂಡ್ವೆ, ಎಸ್‌ಪಿ ಪೃಥ್ವಿಕ್ ಶಂಕರ್ ಜತೆಗಿದ್ದರು. ಪೊಲೀಸರು ಕಂಪನಿಗೆ ಬೀಗ ಹಾಕಿ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಸೈದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆಗೆ ಕೈಗಾರಿಕೆಗಳ ಬೇಜವಾಬ್ದಾರಿ, ಸುರಕ್ಷತಾ ನಿರ್ಲಕ್ಷ್ಯ ಮತ್ತು ಆಡಳಿತದ ವೈ-Àಲ್ಯ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಳೀಯ ಅಽಕಾರಿಗಳ ನಿರ್ಲಕ್ಷ್ಯದಿಂದ¯್ಲೆ ಈ ದುರ್ಘಟನೆ ಸಂಭವಿಸಿದೆ ಎಂಬುವುದು ಸ್ಥಳೀಯ ಆರೋಪವಾಗಿದೆ.

ಕಂಬಪನಿ ಬಂದ್ ಮಾಡಿ ಜನರ ಜೀವ ಉಳಿಸಿ

ಕಡೆಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ನೂರಾರು ಎಕರೆ ಸ್ಥಳದಲ್ಲಿ ೭೫ಕ್ಕೂ ಅಽಕ ವಿವಿಧ ಹೆಸರಿನ ಕೆಮಿಕಲ್ ಕಂಪನಿಗಳಿದ್ದು, ದಿನದ ೨೪ ಗಂಟೆ ಕೂಡ ಕೆಟ್ಟ ವಾಸನೆ ಹರಡಿರುತ್ತದೆ. ಇಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರು ಇಂತಹ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪಕ್ಕದಲ್ಲಿರುವ ಜಿಟಿಟಿಜಿ ಕಾಲೇಜಿನ ವಿದ್ಯಾರ್ಥಿ ಮತ್ತು ಉಪನ್ಯಾಸಕರು ಇದರಿಂದಾಗಿ ಕಾಲೇಜು ನಡೆಸಲಾಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಕೆಟ್ಟ ವಾಸನೆ ಸೈದಾಪುರವರೆಗೂ ಹರಡುತ್ತಿರುವುದರಿಂದ ಸುತ್ತಲಿನ ಹಳ್ಳಿಗಳ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರನ್ನು ಭೇಟಿ ಮಾಡಿದ ನೂರಾರು ಜನರು ಮನವಿ ಸಲ್ಲಿಸಿ ಕೂಡಲೇ ಇಲ್ಲಿನ ಎಲ್ಲ ಕೆಮಿಕಲ್ ಕಂಪನಿ ಬಂದ್ ಮಾಡಿಸಿ ಜನರ ಜೀವ ಉಳಿಸುವಂತೆ ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net