ಅಪಘಾತದಲ್ಲಿ ಮೂವರ ದುರ್ಮರಣ / HOSURU

 ಕಾರು ಮತ್ತು ಬಸ್​ ನಡುವೆ ಅಪಘಾತ
ಕಾರು ಮತ್ತು ಬಸ್​ ನಡುವೆ ಅಪಘಾತ
Published on
ಹೊಸೂರು : ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ಹೋಗುತ್ತಿದ್ದಾಗ ಹೊಸೂರು ಸಮೀಪದ ಶಾನ್​ಮಾವು ಗ್ರಾಮದಲ್ಲಿ ಕಾರು ಮತ್ತು ಬಸ್​ ನಡುವೆ ಅಪಘಾತವಾಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಧರ್ಮಪುರಿ ಜಿಲ್ಲೆಯ ಸಿಕಾರಾ ಹಳ್ಳಿಯ ವೀರಮಣಿ (25) ಮತ್ತು ಅವರ ಸಂಬಂಧಿಕರಾದ ಮಾರಿ (35) ಮತ್ತು ಪಲಯಂ ಪುತ್ತೂರಿನ ಪ್ರದಿಪ್​(30) ಮೃತರು. ಅವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕಡಯಮಡೈ ಗ್ರಾಮದ ಸತೀಶ್​ಕುಮಾರ್​ (25) ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೀರಮಣಿ ಬೆಂಗಳೂರಿನ ಕೆ.ಆರ್​.ಪುರಂನಲ್ಲಿ ಚಿಪ್ಸ್​ ಅಂಗಡಿ ನಡೆಸುತ್ತಿದ್ದರು. ಮಾರಿ, ಪ್ರದಿಪ್​ ಮತ್ತು ಸತೀಶ್​ಕುಮಾರ್​ ಕೂಡ ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮಾರಿ ಅವರಿಗೆ ಪತ್ನಿ ಮತ್ತು ಮಗುವಿದೆ, ಉಳಿದ ಮೂವರಿಗೆ ಮದುವೆ ಆಗಿರಲಿಲ್ಲ ಎಂದು ತಿಳಿದುಬಂದಿದೆ.
ಬಸ್​ನಲ್ಲಿ ಒಟ್ಟು 13 ಜನರು ಪ್ರಯಾಣಿಸುತ್ತಿದ್ದು, ಯಾರಿಗೂ ಗಾಯಗಳಾಗಿಲ್ಲ. ಉದ್ದನಪಲ್ಲಿ ಪೊಲೀಸರು ಬಸ್​ ಹಾಗೂ ಕಾರು ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net