ಮೃತರನ್ನು ಹನೂರು ತಾಲೂಕಿನ ಮರಿಯ ಮಂಗಲದ ರೈತ ಆಂತೋಣಿ ಸ್ವಾಮಿ (50), ಜಗನ್ನಾಥದೊಡ್ಡಿಯ ರೈತ ಜಾನ್ ರೋಸ್ ಪೀಟರ್ (42) , ಲಾಸರ್ದೊಡ್ಡಿಯ ಹಿಟಾಚಿ ಆಪರೇಟರ್ ಕುಮಾರ್(33) ಎಂದು ಗುರುತಿಸಲಾಗಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಈ ಮಧ್ಯೆ, ಮೃತರ ಸಂಬಂಧಿಕರು ತೀವ್ರ ಆಕ್ರೋಶ ಹೊರಹಾಕಿದ್ದು, ಡಿಆರ್ಎಫ್ಒ ಅಧಿಕಾರಿಯ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ.