ಫೆ.12ರಿಂದ 17ರವರೆಗೆ ವಿವೇಕಾನಂದ ನಗರದ ನಿವಾಸಿ ಗೋವಿಂದಪ್ಪ ಅವರು ಊರಿಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿದ್ದರು. ಸುಮಾರು 45.5 ಗ್ರಾಂ ಬಂಗಾರ, 1.1 ಕೆಜಿ ಬೆಳ್ಳಿ ವಸ್ತುಗಳು ಹಾಗೂ 20 ಸಾವಿರ ರೂ. ನಗದನ್ನು ದೋಚಿದ್ದರು. ಈ ಬಗ್ಗೆ ಗೋವಿಂದಪ್ಪ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಂಗಾರಪೇಟೆ ಇನ್ಸ್ಪೆಕ್ಟರ್ ರವಿಕುಮಾರ್ ನೇತೃತ್ವದ ವಿಶೇಷ ಅಪರಾಧ ಪತ್ತೆ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆಹಿಡಿದಿದೆ. ಅಲ್ಲದೆ, ಕಳವು ಮಾಡಿದ ಮಾಲನ್ನು ರಾರ್ಬಟ್ಸನ್ ಪೇಟೆಯ ಕುಮರೇಶ್ (21) ಎಂಬಾತನಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. ಕಳವು ಮಾಡಿದ ವಸ್ತು ಎಂದು ತಿಳಿದಿದ್ದರೂ ಕುಮರೇಶ್ ಅವುಗಳನ್ನು ಖರೀದಿಸಿದ್ದ ಎನ್ನಲಾಗಿದೆ.