ಮೂರು ದಿನಗಳ ಕೃಷಿ ಮೇಳಕ್ಕೆ ಚಾಲನೆ Krishi Mela

ನಗರದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಸೋಮವಾರ ಪ್ರಾರಂಭವಾದ ಮೂರು ದಿನಗಳ ಕೃಷಿ ಮೇಳಕ್ಕೆ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ, ಸಚಿವರಾದ ಪಿ.ಎಂ. ನರೇಂದ್ರಸ್ವಾಮಿ, ಕೃಷ್ಣ ಬೈರೇಗೌಡ ಸೋಮವಾರ ಚಾಲನೆ ನೀಡಿದರು.
Krishi_Mela
ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ ಕೃಷಿ ಮೇಳವನ್ನು ಪಿ.ಎಂ.ನರೇಂದ್ರಸ್ವಾಮಿ ಉದ್ಘಾಟಿಸಿದರು.folder
Published on: 

* ಮೊದಲ ದಿನವೇ ಸಾವಿರಾರು ರೈತರು, ವಿದ್ಯಾರ್ಥಿಗಳು ಭೇಟಿ

* ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟನೆ

ಬೆಂಗಳೂರು: ನಗರದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಸೋಮವಾರ ಪ್ರಾರಂಭವಾದ ಮೂರು ದಿನಗಳ ಕೃಷಿ ಮೇಳಕ್ಕೆ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ, ಸಚಿವರಾದ ಪಿ.ಎಂ. ನರೇಂದ್ರಸ್ವಾಮಿ, ಕೃಷ್ಣ ಬೈರೇಗೌಡ ಸೋಮವಾರ ಚಾಲನೆ ನೀಡಿದರು.

ಕಳೆದ ವರ್ಷಕ್ಕೆ ಹೊಲಿಸಿದರೆ, ಈ ವರ್ಷ ಮೇಳವು ಬರದ ಹಿನ್ನಲೆಯಲ್ಲಿ ಕಳೆಗುಂದಿತ್ತು. ವಿವಿಧ ಇಲಾಖೆಗಳು, ವಿವಿ ವ್ಯಾಪ್ತಿಯಲ್ಲಿನ ಕಾಲೇಜುಗಳಿಂದ 140ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪನೆ ಮಾಡಲಾಗಿತ್ತು. ಕೃಷಿ, ತೋಟಗಾರಿಕೆ, ಹೈನೋದ್ಯಮ, ರೇಷ್ಮೆ ಸೇರಿ ವಿವಿಧ ಬೇಸಾಯದಲ್ಲಿ ಉತ್ತಮ ಸಾಧನೆ ಮಾಡಿರುವ ಪ್ರಗತಿಪರ ರೈತರನ್ನು ಗುರುತಿಸಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಪ್ರಶಸ್ತಿ ಪ್ರದಾನ, ಹೊಸ ತಳಿಗಳ ಉದ್ಘಾಟನೆ ನಡೆಯಿತು.

ಕೃಷಿ ವಿಭಾಗ, ಹವಾಮಾನ ಆಧಾರಿತ ಬೀಜ ಬಿತ್ತನೆ, ನೀರು ನಿರ್ವಹಣಾ ತಂತ್ರಜ್ಞಾನ ಕೇಂದ್ರ, ಜೋಳ, ಮಣ್ಣು, ಜಲಾನಯನ, ಭತ್ತ, ಸಸ್ಯ ಸಂರಕ್ಷಣೆ, ರೇಷ್ಮೆ, ಸಿರಿಧಾನ್ಯ, ಎಣ್ಣೆಕಾಳು, ದ್ವಿದಳ ಧಾನ್ಯ, ಕೀಟಶಾಸ, ವಾಣಿಜ್ಯ ಬೆಳೆ, ಜೈವಿಕ ಗೊಬ್ಬರ, ಜೀಜ ತಾಂತ್ರಿಕತೆ, ಜೈವಿಕ ಇಂಧನ, ಕಬ್ಬು ಪ್ರಾತ್ಯಕ್ಷಿಕ ಕೇಂದ್ರಗಳಿಗೆ ಸಾವಿರಾರು ಮಂದಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಆಯಾ ಕೇಂದ್ರಗಳಲ್ಲಿ ಬೆಳೆಯುವ ದಿನಗಳ ಅವಧಿ, ಇಳುವರಿ, ಯಾವ ತಿಂಗಳಲ್ಲಿ ಬಿತ್ತನೆ ಮಾಡಬೇಕು, ಹಿಂಗಾರು, ಮುಂಗಾರು ಸಂದರ್ಭದಲ್ಲಿ ಯಾವ್ಯಾವ ಬೆಳೆ ಬೆಳೆಯಬೇಕು, ಹವಾಮಾನ ವೈಪರಿತ್ಯ ಸಮಸ್ಯೆಯಿಂದ ಬೆಳೆ ರಕ್ಷಿಸಿಕೊಳ್ಳುವುದು ಹೇಗೆ, ಕಳೆಯಿಂದ ಬೆಳೆ ರಕ್ಷಿಸಿಕೊಳ್ಳುವ ಬಗ್ಗೆ ತಜ್ಞರು ಮಾಹಿತಿ ನೀಡಿದರು.

ಹೊಸ ತಳಿಗಳ ಉದ್ಘಾಟನೆ

ಕೃಷಿ ವಿಶ್ವವಿದ್ಯಾಯದಿಂದ ಸಂಶೋಧಿಸಲಾಗಿರುವ ಹೊಸ ರಾಗಿ ಜಿಪಿಯು-101, ದಂಟಿನ ಬೀಜ ಕೆಬಿಜಿಎ-18 ಹಾಗೂ ಹೈಬ್ರಿಡ್ ಮುಸುಕಿನ ಜೋಳ ಎಂಎಎಚ್-20-45 ತಳಿಯನ್ನು ಗಣ್ಯರು ಉದ್ಘಾಟಿಸಿದರು.

ಸಚಿವ ಕೃಷ್ಣ ಬೈರೇಗೌಡ, ಶಾಸಕ ಎಸ್.ಆರ್. ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ ಸುಧಾಮ ದಾಸ್, ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಪಿ.ವೆಂಕಟರಮಣ, ಕೃಷಿ ಇಲಾಖೆ ಕಾರ್ಯದರ್ಶಿ ಡಾ.ಕೆ.ವಿ. ತ್ರಿಲೋಕಚಂದ್ರ, ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ರಾಜಶೇಖರಪ್ಪ, ನವೀನ್, ಕುಲಸಚಿವ ಮಧುಸೂಧನ್, ಸಂಶೋಧನಾ ನಿರ್ದೇಶಕ ಮೂಡಲಗಿರಿಯಪ್ಪ, ಬಾಗಲಕೋಟೆ ತೋಟಗಾರಿಕಾ ವಿವಿ ಕುಲಪತಿ ಡಾ.ವಿಷ್ಣುವರ್ಧನ್ ಉಪಸ್ಥಿತರಿದ್ದರು.

ಕೃಷಿ ಸಮಸ್ಯೆಗಳಿಗೆ ಪರಿಹಾರ

ಸಿರಿಧಾನ್ಯ ಸಂಬಂಧಿ ಮಳಿಗೆಗಳು ಈ ಬಾರಿ ಹೆಚ್ಚಾಗಿ ಕಾಣಿಸಿಕೊಂಡವು. ತೋಟಗಾರಿಕೆ, ಜಲಾಯನ ಅಭಿವೃದ್ಧಿ, ಮೀನುಗಾರಿಕೆ, ಪಶುಸಂಗೋಪನೆ, ಮಾರುಕಟ್ಟೆ, ಅರಣ್ಯ ಇತ್ಯಾದಿ ಮಾಹಿತಿಗಳನ್ನು ಒಂದೇ ಸೂರಿನಡಿ ಒದಗಿಸಲಾಯಿತು. ಹೊಸ ತಳಿಗಳು, ಯಂತ್ರೋಪಕರಣಗಳ ಆವಿಷ್ಕಾರ, ಕೃಷಿ, ತೋಟಗಾರಿಕೆಗೆ ಸಂಬಂಧಿಸಿದ ಹೊಸ ತಂತ್ರಜ್ಞಾನದ ಪ್ರದರ್ಶನ ಮತ್ತು ಮಾರಾಟ ನಡೆಯಿತು. ರೈತರ ಕೃಷಿ ಸಮಸ್ಯೆಗಳಿಗೆ ಕೃಷಿ ವಿಜ್ಞಾನಿಗಳು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಪರಿಹಾರ ಒದಗಿಸಿದರು.

ಹೊಸ ತಂತ್ರಜ್ಞಾನ ಕುರಿತು ಮಾಹಿತಿ

ಬೇಸಾಯಶಾಸ, ಮಣ್ಣುವಿಜ್ಞಾನ ಮತ್ತು ಕೃಷಿ, ರಾಸಾಯನಶಾಸ, ಕೃಷಿ ಸೂಕ್ಷ್ಮಾಣು ಜೀವಶಾಸ ವಿಭಾಗ, ಸಸ್ಯರೋಗ ಶಾಸ ಮತ್ತು ಕೀಟ, ರೇಷ್ಮೆ, ಜೇನು ಕೃಷಿ, ಕೃಷಿ ಮಾರಾಟ, ಸಹಕಾರ ಮತ್ತು ವ್ಯವಹಾರ ನಿರ್ವಹಣೆ, ಆಹಾರ ವಿಜ್ಞಾನ, ಅರಣ್ಯಶಾಸ ಹಾಗೂ ಬೆಳೆ ಶರೀರ ಸೇರಿ ಇನ್ನಿತರ ಮಾಹಿತಿಗಳನ್ನು ರೈತರಿಗೆ ಒದಗಿಸಲಾಗುತ್ತಿದೆ. ವ್ಯವಸಾಯ ಕೇಂದ್ರಿತ ಎಲ್ಲ ವಿಭಾಗಗಳಲ್ಲಿ ನಡೆದಿರುವ ಆವಿಷ್ಕಾರ, ತಂತ್ರಜ್ಞಾನ ಆಧಾರಿತ ಸುಧಾರಿತ ಬೆಳೆಗಳು, ಹೊಸ ತಳಿಗಳ ಪ್ರಾತ್ಯಕ್ಷಿಕೆಗಳು, ಬಿತ್ತನೆ-ಕಟಾವು-ಸಂಸ್ಕರಣೆ ಹಾಗೂ ಸಲಕರಣೆಗಳ ಪ್ರದರ್ಶನ ನಡೆಯಿತು. ಹೊಸ ವಿಧಾನದಲ್ಲಿ ಹಾಗೂ ನೂತನ ತಂತ್ರಜ್ಞಾನ ಅಳವಡಿಕೆಯೊಂದಿಗೆ ಹೇಗೆ ಕೃಷಿ ಮಾಡಬೇಕೆಂದು ತಿಳಿದುಕೊಳ್ಳಲು ಮೇಳವು ಸಹಕಾರಿಯಾಯಿತು.

ಗಮನ ಸೆಳೆದ ಜಾಫ್ರಾಬಾದಿ ಎಮ್ಮೆ

ಅತಿಹೆಚ್ಚು ಹಾಲು ಕೊಡುವ ಗುಜರಾತ್ ಮೂಲದ ಜ್ರಾಾಬಾದಿ ಎಮ್ಮೆ ಮೇಳದಲ್ಲಿ ನೋಡುಗರ ಗಮನ ಸೆಳೆಯಿತು. ಇದನ್ನು ಗಮನಿಸಿದ ರೈತರು ಮಾಲೀಕನ ಬಳಿ ಮಾಹಿತಿ ಪಡೆದುಕೊಂಡರು. ಹಲವು ತಳಿಯ ಹಸು, ಎಮ್ಮೆ, ಕುರಿ, ಕೋಳಿ, ಮೀನುಗಳು ನೋಡುಗರನ್ನು ಆಕರ್ಷಿಸುತ್ತಿದ್ದವು. ಕಳ್ಳಿಕಾರ, ಬನ್ನೂರು ಕುರಿ, ಮಲೆನಾಡು ಗಿಡ್ಡ ಅಕರ್ಷಣೆಯ ಕೇಂದ್ರವಾಗಿದ್ದವು.

Krishi_Mela
ಕೃಷಿ ಮೇಳfolder

ಬಾಯಲ್ಲಿ ನೀರೂರಿಸಿದ ಕೀಟ ಖಾದ್ಯ

ಕೀಟ ವಿಸ್ಮಯ ಮಳಿಗೆಯಲ್ಲಿ ಸಂಶೋಧನಾ ವಿದ್ಯಾರ್ಥಿನಿ ವೈಷ್ಣವಿ ತಯಾರಿಸಿದ್ದ ಮಿಡತೆ ಕಬಾಬ್, ಅಕ್ಕಿ ತಂಪಗ, ಮೀಲ್ ವರ್ಮ, ಮೀಲ್ ವರ್ಮ ರೈಸ್ ನೋಡುಗರ ಬಾಯಲ್ಲಿ ನೀರೂರಿಸಿತು. ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು, ಯುವಕರು ಕೀಟ ಖಾದ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು ಕಂಡುಬಂತು.

* ವಿಮಾ ನಿಯಮಗಳನ್ನು ಸಡಿಲಿಸಿ

ಬೆಳೆ ವಿಮಾ ಕಂಪನಿಗಳಿಂದ ರೈತರಿಗೆ ಮೋಸ ಆಗುತ್ತಿದೆ. ಪ್ರತಿ ವರ್ಷ ಬೆಳೆಗೆ ರೈತರಿಂದ ವಿಮಾ ಕಂತು ಪಾವತಿ ಮಾಡಿಸಿಕೊಂಡು ಲಾಭ ಗಳಿಸುತ್ತಿದ್ದಾರೆ. ರೈತನಿಗೆ ಪರಿಹಾರ ಕಲ್ಪಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಬೆಳೆ ನಾಟಿ ಉತ್ತಮವಾಗಿ ಆದರೆ ಕಂಪನಿಗೆ ಲಾಭ, ಒಂದು ವೇಳೆ ಹಾನಿಯಾದರೆ ಪರಿಹಾರ ನೀಡಬೇಕು. ಕಂಪನಿಗಳವರು ಕಠಿಣ ನಿಯಮಗಳನ್ನು ಇಟ್ಟಿರುವುದರಿಂದ ಬರಗಾಲದಲ್ಲಿ ಪರಿಹಾರ ಪಡೆದುಕೊಳ್ಳಲಾಗುತ್ತಿಲ್ಲ. ರಾಜ್ಯ ಸರ್ಕಾರ ಕಂಪನಿ ಮುಖ್ಯಸ್ಥರ ಸಭೆ ಕರೆದು ನಿಯಮಗಳನ್ನು ಸಡಿಲಿಸಲು ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.

ನೇಗಿಲ ಯೋಗಿ ಯೋಜನೆಗೆ ಚಾಲನೆ ಶೀಘ್ರ

ಬರ ಪರಿಸ್ಥಿತಿಯಲ್ಲೂ ರೈತ ಆಹಾರ ಉತ್ಪಾದಿಸಿ ದೇಶಕ್ಕೆ ಸರಬರಾಜು ಮಾಡುವ ಜವಾಬ್ದಾರಿ ಹೊಂದಿರುವವರನ್ನು ಸಂಕಷ್ಟದಿಂದ ಪಾರು ಮಾಡಲು ಶೀಘ್ರದಲ್ಲೇ ನೇಗಿಲ ಯೋಗಿ ಯೋಜನೆ ಜಾರಿಗೆ ತರಲಾಗುವುದು ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಹೇಳಿದರು. ರೈತ ಉತ್ಪಾದಕ ಸಂಗಳ ಮೂಲಕ ಸಾಮೂಹಿಕ ಕೃಷಿಗೆ ಒತ್ತು ನೀಡಿದಾಗ ವಾತ್ರ ರೈತರು ನಷ್ಟದಿಂದ ಪಾರಾಗಬಹುದು. ಒಟ್ಟು 226 ತಾಲೂಕುಗಳನ್ನು ಬರಪೀಡಿತ ಎಂದು ೋಷಿಸಲಾಗಿದೆ. 2025ರಲ್ಲಿ 20.91 ಲಕ್ಷ ರೈತರು ಬೆಳೆ ವಿಮೆ ನೋಂದಣಿ ವಾಡಿಕೊಂಡಿದ್ದರು. ಈ ವಷರ್ ರಾಜ್ಯದಲ್ಲಿ ಮಳೆ ಕೊರತೆಯ ಮುನ್ಸೂಚನೆ ಇದ್ದುದ್ದರಿಂದ 37.50 ಲಕ್ಷ ರೈತರು ನೋಂದಣಿ ವಾಡಿಸಿಕೊಂಡಿದ್ದು, ಅನುಕೂಲವಾಗಲಿದೆ ಎಂದು ತಿಳಿಸಿದರು. ರೈತ ಉತ್ಪಾದಕ ಸಂಸ್ಥೆಗಳನ್ನು ಬಲಪಡಿಸಬೇಕು. ಕಷಿ ಉತ್ಪನ್ನಗಳ ಸಂಗ್ರಹಣೆ, ಆಹಾರ ಸಂಸ್ಕರಣೆ, ಶೀತಲ ಗೋದಾಮು ಮತ್ತು ವಾರುಕಟ್ಟೆ ಸಂಪರ್ಕವನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು. ಕಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ವಾಡಿದರೆ ರೈತರ ಆದಾಯ ಹೆಚ್ಚಿಸಲು ಸಾಧ್ಯ. ಯುವಕರು ರೈತರು ಕೃಷಿಯನ್ನು ಹೊಸ ದೃಷ್ಟಿಕೋನದಿಂದ ನೋಡಬೇಕು. ಡ್ರೋನ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಡಿಜಿಟಲ್ ಕೃಷಿ, ಇ-ಮಾರುಕಟ್ಟೆ, ಆಧುನಿಕ ಯಂತ್ರೋಪಕರಣಗಳು ಮತ್ತು ಹವಾವಾನ ಮುನ್ಸೂಚನೆಗಳನ್ನು ಬಳಸಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.

ಮೇಳದ ವಿಶೇಷತೆ

  • ಬರ ನಿರ್ವಹಣೆಯಲ್ಲೂ ಬೆಳೆ ನಿರ್ವಹಣೆ ಕುರಿತ ಪ್ರತ್ಯಕ್ಷಿಕೆ

  • ಜಲಾನಯನ ನಿರ್ವಹಣೆ ಬಗ್ಗೆ ತಜ್ಞರೊಂದಿಗೆ ಚರ್ಚೆ

  • ಸಿರಿಧಾನ್ಯಗಳ ಬೆಳೆ, ಧಾನ್ಯಗಳ ಸಂಸ್ಕರಣೆ

  • ಡಿಜಿಟಲ್ ಕೃಷಿಯ ಹೊಸ ಶೋಧ

  • ಅರಣ್ಯ ಕೃಷಿ ಬಗ್ಗೆ ಮಾಹಿತಿ

  • ಹೊಸ ಯಂತ್ರೋಪಕರಣಗಳ ಪ್ರದರ್ಶನ, ಮಾರಾಟ

  • ಪಶು, ಮೀನುಗಳ ಪ್ರದರ್ಶನ, ಮಾರಾಟದ ವ್ಯವಸ್ಥೆ

  • ವಿವಿಯಿಂದ ಬೆಳೆಯಲಾಗಿದ್ದ ವಿವಿಧ ಬೆಳೆಗಳ ಪ್ರದರ್ಶನ