ಗಾಂಜಾ ಮಾರುತ್ತಿದ್ದ ಮೂವರ ಬಂಧನ marijuana

ಗಾಂಜಾ ಮಾರುತ್ತಿದ್ದ ಮೂವರ ಬಂಧನ marijuana
ಗಾಂಜಾ ಮಾರುತ್ತಿದ್ದ ಮೂವರ ಬಂಧನ marijuana
Published on
ಕೆಜಿಎಫ್​: ಮಾದಕ ವಸ್ತುಗಳ ಮಾರಾಟದ ಮೇಲೆ ಹದ್ದಿನ ಕಣ್ಣಿಟ್ಟಿರುವ ಕೆಜಿಎಫ್​ ಪೊಲೀಸರು, ಪ್ರತ್ಯೇಕ ಕಡೆ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ 410 ಗ್ರಾಂ ಗಾಂಜಾ ಹಾಗೂ 2 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.marijuana
ನಗರದ ಅಜಯ್​ಕುಮಾರ್​ (26), ಮೊಹಮ್ಮದ್​ ಯೂಸೂಫ್​ (22) ಯಕ್ಷಗೋರ್​ ಶರ್ಮ ಬಂಧಿತರು.
ಸಂಜಯ್​ ಗಾಂಧಿ ನಗರದಿಂದ ಇ.ಟಿ ಬ್ಲಾಕ್​ ಕಡೆಗೆ ಹೋಗುವ ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು ಅಜಯ್​ ಕುಮಾರ್​ನನ್ನು ಬಂಧಿಸಿ, 174 ಗ್ರಾಂ ಗಾಂಜಾ, 2 ಗ್ರಾಂ ಎಂಡಿಎಂಎ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ರಾಬರ್ಟಸನ್​ಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಕಾರ್ಯಾಚರಣೆಯಲ್ಲಿ, ಕೆಎನ್​ಜೆಎಸ್​ ಬ್ಲಾಕ್​ನ ಮುನೇಶ್ವರಸ್ವಾಮಿ ದೇವಸ್ಥಾನದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮೊಹಮ್ಮದ್​ ಯೂಸೂಫ್​ ಮತ್ತು ಯಕ್ಷಗೋರ್​ ಶರ್ಮನನ್ನು ಬಂಧಿಸಿ, 236 ಗ್ರಾಂ ಗಾಂಜಾ ವಶಪಡಿಸಿಕೊಂಡು ಉರಿಗಾಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಡಿವೈಎಸ್ಪಿ ವಿ. ಲಕ್ಷ$್ಮಯ್ಯ ಮಾರ್ಗದರ್ಶನದಲ್ಲಿ ಉರಿಗಾಂ ವೃತ್ತ ನಿರೀಕ್ಷಕ ಮಾರ್ಕೊಂಡಯ್ಯ, ರಾರ್ಬಟ್​ಸನ್​ಪೇಟೆ ವೃತ್ತ ನಿರೀಕ್ಷಕ ಅನಿಲ್​ಕುಮಾರ್​, ಪಿಎಸ್​ಐಗಳಾದ ಮಹೇಶ್​ ಮಾಲಿ, ಕೃಷ್ಣಮೂರ್ತಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net