ಬಾಂಬ್ ಹಾಕುವವರು ಇವರಿಗೆ ಬ್ರದರ್ಸ್! ರಾಜ್ಯ ಸರ್ಕಾರದ ವಿರುದ್ಧ ಪ್ರಲ್ಹಾದ್ ಜೋಶಿ ವಾಗ್ದಾಳಿ | Pralhad Joshi

Pralhad Joshi
Pralhad Joshi
Published on

ರಾಯಚೂರು: ಬಾಗಲಕೋಟೆಯಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಮೆರವಣಿಗೆಯ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರಸಚಿವ ಪ್ರಲ್ಹಾದ್ ಜೋಶಿ (Pralhad‌ Joshi ) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಹಟ್ಟಿಯಲ್ಲಿಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಇಂತಹಘಟನೆಗಳು ಏಕೆ ನಡೆಯುತ್ತವೆ?" ಎಂದು ಪ್ರಶ್ನಿಸಿದ್ದಾರೆ.

ಬಾಗಲಕೋಟೆ ಘಟನೆಯನ್ನುಖಂಡಿಸಿದ ಜೋಶಿ, ಕಾಂಗ್ರೆಸ್‌ನ ತುಷ್ಟೀಕರಣ ನೀತಿಯೇ ಇದಕ್ಕೆ ಕಾರಣ ಎಂದರು. "ಪೊಲೀಸರಿಗೆ ಫ್ರೀಹ್ಯಾಂಡ್ ಕೊಟ್ಟರೆ ಇಂತಹ ಘಟನೆಗಳು ನಡೆಯುವುದಿಲ್ಲ. ಆದರೆ ಕಾಂಗ್ರೆಸ್ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದೆ"ಎಂದು ಆರೋಪಿಸಿದರು.

ಕಠಿಣ ಕ್ರಮಕ್ಕೆಆಗ್ರಹ: ಕಲ್ಲು ತೂರಾಟನಡೆಸಿದ ಆರೋಪಿಗಳನ್ನು ಕೇವಲ ಬಂಧಿಸುವುದಲ್ಲದೆ, ಅವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.ಬಾಂಬ್ ಹಾಕಿದವರನ್ನು 'ಬ್ರದರ್ಸ್' ಎನ್ನುವ ಸರ್ಕಾರ, ಅಕ್ರಮ ಮಸೀದಿಗಳ ಬಗ್ಗೆ ಮಾತನಾಡಿದವರ ಮೇಲೆಕೇಸ್ ಹಾಕುತ್ತಿದೆ ಎಂದು ಕಿಡಿಕಾರಿದರು.

ರಾಹುಲ್ ಎಂಟ್ರಿ:"ಅಪ್ರಬುದ್ಧ ರಾಜಕಾರಣಿ"

ಪತ್ರಿಕಾಗೋಷ್ಠಿಯವೇಳೆ ರಾಹುಲ್ ಗಾಂಧಿ ಬಂದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನಾವು ಅಲ್ಲಿಂದ ಓಡಿ ಹೋಗಿಲ್ಲ,ನಾನು ಮೋದಿ ಸರ್ಕಾರದ ಮಂತ್ರಿ. ನಾನು ಬೈಟ್ ನೀಡುವಾಗ ಅಡ್ಡ ಬಂದರೆ ಹೇಗೆ? " ಎಂದರು. ರಾಹುಲ್ಗಾಂಧಿಯನ್ನು 'ಅಪ್ರಬುದ್ಧ ಪಾರ್ಟ್-ಟೈಮ್ ರಾಜಕಾರಣಿ' ಎಂದು ಲೇವಡಿ ಮಾಡಿದರು.

"ಎಐನಿಂದಉದ್ಯೋಗ ನಷ್ಟವಿಲ್ಲ"

ಮುಂದಿನ ಎರಡುವರ್ಷಗಳಲ್ಲಿ ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ. ಕಂಪ್ಯೂಟರ್ ಬಂದಾಗಲೂ ಉದ್ಯೋಗ ಹೋಗುತ್ತದೆಎಂಬ ಅಪಪ್ರಚಾರ ನಡೆದಿತ್ತು. ಈಗ ಎಐ ಬಗ್ಗೆಯೂ ಹಾಗೆಯೇ ಹೇಳಲಾಗುತ್ತಿದೆ. ಹ್ಯೂಮನ್ ಬ್ರೇನ್ ಎಲ್ಲದಕ್ಕೂಬೇಕು, ಎಐನಿಂದ ಪ್ರಗತಿ ವೇಗವಾಗಲಿದೆ ಎಂದರು. ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದ ಬಗ್ಗೆ ಕಾಂಗ್ರೆಸ್ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಕೃಷಿ ಉತ್ಪನ್ನಗಳು ಮತ್ತು ಆಪಲ್ ಹೊರತುಪಡಿಸಿ ಇತರ ಹಣ್ಣುಗಳನ್ನುಈ ಒಪ್ಪಂದದಿಂದ ಹೊರಗಿಡಲಾಗಿದೆ. ರೈತರು ಮತ್ತು ಸಣ್ಣ ಉದ್ಯಮಿಗಳ ಹಿತಾಸಕ್ತಿಯಲ್ಲಿ ಮೋದಿ ಸರ್ಕಾರಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದರು.

ರಾಜ್ಯ ಸರ್ಕಾರದಗ್ಯಾರೆಂಟಿ ಯೋಜನೆಗಳನ್ನು ಟೀಕಿಸಿದ ಅವರು, "ಬಡವರನ್ನು ಸಬಲೀಕರಣಗೊಳಿಸುವುದು ನಮ್ಮ ಗುರಿ.ಅನ್ನಭಾಗ್ಯ ಯೋಜನೆಯಡಿ ನೀಡಲಾಗುವ 5 ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ತಮ್ಮದನ್ನುಕೊಡದ ಇವರು ಅಯೋಗ್ಯರು" ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net