ಐನಾಪುರದಲ್ಲಿ ಮಧ್ಯರಾತ್ರಿ ಕಳ್ಳರ ಓಡಾಟ ಗ್ರಾಮಸ್ಥರಲ್ಲಿ ಆತಂಕ

,
,
Published on

ಪ್ರಮುಖ ಮುಖ್ಯಾಂಶಗಳು

  • ಜಾನುವಾರು ಕಳ್ಳರಿಗೆ ಗ್ರಾಮಸ್ಥರಿಂದ ದಿಗ್ಬಂದನ
ಕಲಬುರಗಿ : ಚಿಂಚೋಳಿ ತಾಲೂಕಿನ ಐನಾಪುರ ಗ್ರಾಮದಲ್ಲಿ ಶುಕ್ರವಾರ ನಸುಕಿನ ಜಾವ ಜಾನುವಾರು ಕಳವು ಮಾಡಲು ಬಂದಿದ್ದ ಕಳ್ಳರನ್ನು ಜನರು ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ ಘಟನೆ ನಡೆದಿದೆ.
ಇಬ್ಬರು ವ್ಯಕ್ತಿಗಳು ಜಾನುವಾರು ಕಳ್ಳತನಕ್ಕೆ ಮಧ್ಯರಾತ್ರಿಯ ವೇಳೆ ಗ್ರಾಮದಲ್ಲಿ ಸಂಚರಿಸುವ ವೇಳೆ ಗ್ರಾಮಸ್ಥರು ಗಮನಿಸಿ ವಿಚಾರಿಸುತ್ತಿದ್ದಂತೆ ಒರ್ವ ಓಡಿ ಹೋಗಿದ್ದು, ಇನ್ನೋರ್ವನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ.
ಜಾನುವಾರು ಕಳ್ಳತನಕ್ಕೆ ಯತ್ನಿಸಿರುವ ಕಳ್ಳರು ಮೂಲತಃ ಬೀದರ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಬಗದಲ್ ತಾಂಡಾ ನಿವಾಸಿಗಳಾಗಿದ್ದು, ಬಾಬುರಾವ ತಂದೆ ಲಕ್ಷ್ಮಣ ರಾಠೋಡ ಎಂಬಾತನನ್ನು ಗ್ರಾಮಸ್ಥರು ಕೂಡಿ ಹಾಕಿದ್ದು, ಇನ್ನೊಬ್ಬ ಪೋಮ್ಮ ಚವ್ಹಾಣ ಓಡಿ ಹೋಗಿದ್ದಾನೆ ಎಂದು ಕಳ್ಳತನಕ್ಕೆ ಬಂದ ವ್ಯಕ್ತಿ ಗ್ರಾಮಸ್ಥರಿಗೆ ತಿಳಿಸಿದ್ದಾನೆ.
ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರಲ್ಲಿ ಆತಂಕ : ಬೆಳ್ಳಂಬೆಳಗ್ಗೆ ಕಳ್ಳರು ಬಂದಿದ್ದಾರೆ ಎಂಬ ಸುದ್ದಿ ಗ್ರಾಮದಲ್ಲಿ ವ್ಯಾಪಕವಾಗಿ ಹರಡುತ್ತಿದ್ದಂತೆ ಸಹಸ್ರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾವಣೆಗೊಂಡರು.
ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಚಿಂಚೋಳಿ ಪಿಎಸ್ಐ ಗಂಗಮ್ಮ ಅವರು ಆಗಮಿಸಿ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರೆಸಿದ್ದಾರೆ.
ಐನಾಪುರದಲ್ಲಿ ಪೋಲಿಸ್ ಠಾಣೆ ಆರಂಬಿಸಲು ಆಗ್ರಹ :
ಚಿಂಚೋಳಿ ತಾಲೂಕಿನಿಂದ 40 ಕಿ. ಮಿ ಅಂತರ ವಿದ್ದು, ಈ ಹಿಂದೆಯು ಹಲವು ಬಾರಿ ಪೋಲಿಸ್ ಠಾಣೆ ಸ್ಥಾಪಿಸುವಂತೆ ಚುನಾಯಿತ ಪ್ರತಿನಿಧಿಗಳಿಗೆ ಮನವಿ ಮಾಡಲಾಗಿದ್ದು, ಕೂಡಲೇ ಸರಕಾರವು ಗಂಭೀರವಾಗಿ ಪರಿಗಣಿಸಿ ನೂತನ ಪೋಲಿಸ್ ಠಾಣೆ ಸ್ಥಾಪನೆಗೆ ಮುಂದಾಗಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net