They dumped the gravel and completely forgot about it!
Published on:
Copied
Follow Us
ಶ್ರೀನಿವಾಸಪುರ : ತಾಲೂಕಿನ ರೋಣೂರು&ಲೋಚರವಪಲ್ಲಿ ಮಾರ್ಗದಲ್ಲಿ ರಸ್ತೆ ನಿರ್ಮಿಸಿಲು ಜಲ್ಲಿ ಹಾಕಿ ಸುಮಾರು 2 ರಿಂದ 3 ತಿಂಗಳು ಕಳೆದರೂ ಡಾಂಬರ್ ಹಾಕದಿದ್ದರಿಂದ ಈ ಭಾಗದಲ್ಲಿ ವಾಹನಗಳ ಓಡಾಟಕ್ಕೆ ತೀವ್ರ ಸಮಸ್ಯೆ ಉಂಟಾಗಿದ್ದು, ಆಂಬುಲೆನ್ಸ್, ರೈತರ ವಾಹನಗಳು ಸೇರಿ ದ್ವಿಚಕ್ರವಾಹನ ಓಡಾಟಕ್ಕೆ ತೊಂದರೆಯಾಗಿದೆ.
ಸುಮಾರು 80 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಎಲ್ಲ ಕಡೆ ಡಾಂಬರ್ ಹಾಕಿ ಈ ಎರಡೂ ಗ್ರಾಮಗಳ ಮಧ್ಯೆ 1 ಕಿ.ಮೀ.ಉದ್ದದ ರಸ್ತೆಗೆ ಜಲ್ಲಿ ಹಾಕಿ ಹಾಗೇ ಬಿಡಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಸುಮಾರು 3.40 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಗುತ್ತಿಗೆದಾರರು ಇತ್ತ ಸುಳಿದೇ ಇಲ್ಲ.
ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧ ಶುರುವಾದಾಗಿನಿಂದ ಡಾಂಬರ್ ಸರಬರಾಜು ಆಗುವುದು ವಿಳಂಬವಾಗಿದೆ. ಜತೆಗೆ ಬೆಲೆಯೂ ಗಗನಕ್ಕೇರಿದೆ. ವಾಹನಗಳ ಸಂಚಾರದಿಂದ ಧೂಳು ಹಬ್ಬುವುದನ್ನು ಕಡಿಮೆ ಮಾಡಲು ನಿತ್ಯ ಟ್ಯಾಂಕರ್ ಮೂಲಕ ನೀರು ಹರಿಸುತ್ತಿದ್ದೇವೆ. ಮುಂದಿನ 15 ದಿನದ ಒಳಗೆ ರಸ್ತೆ ಅಭಿವೃದ್ಧಿಪಡಿಸಲಾಗುವುದು.
— ಮಂಜುನಾಥ್, ಎಇಇ, ಲೋಕೋಪಯೋಗಿ ಇಲಾಖೆ
ಈ ಮಾರ್ಗವು ರೋಣೂರು ಹೋಬಳಿಯ ಪಂಚಾಯಿತಿ ಕೇಂದ್ರ ಸ್ಥಾನದಿಂದ ಲಕ್ಷಿ$್ಮಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತದೆ. ದ್ವಿಚಕ್ರವಾಹನದಲ್ಲಿ ಹೋಗುವವರು ಜಲ್ಲಿಕಲ್ಲುಗಳನ್ನು ದಾಟಿ ಹೋಗಲು ಹರಸಾಹಸ ಪಡಬೇಕಿದೆ. ಹೋಗುವಾಗ ಎದುರಿನಿಂದ ಯಾವುದಾರರೂ ಬೃಹತ್ ವಾಹನ ಬಂದಾಗ ಜಲ್ಲಿಕಲ್ಲು ತಾಗುತ್ತಿವೆ. ರೋಗಿಗಳು ಆಸ್ಪತ್ರೆಗೆ ಹೋಗಲು ಹೆಣಗಾಡಬೇಕಿದೆ. ಇನ್ನೂ ಮಕ್ಕಳು ಸೈಕಲ್ನಲ್ಲಿ ಹೋಗಲು ಆಗುವುದೇ ಇಲ್ಲ.
ಮತ್ತೊಂದೆಡೆ ಆಗಾಗ ಎದುರಾಗು ಧೂಳಿನ ಸಮಸ್ಯೆಯಿಂದ ಅನೇಕರು ಮುಖಕ್ಕೆ ಬಟ್ಟೆ ಕಟ್ಟಿಕೊಂಡೇ ಓಡಾಡಬೇಕಿದೆ. ಪ್ರತಿನಿತ್ಯ ಕೆಎಸ್ಆರ್ಟಿಸಿ ಬಸ್ಗಳು, ಟ್ರಾ$್ಯಕ್ಟರ್ಗಳು, ಇತರೆ ವಾಹನಗಳು ಹೆಚ್ಚಾಗಿ ಓಡಾಡುತ್ತವೆ.
ಕೂಡಲೇ ಸಂಬಂಧಪಟ್ಟ ಮೇಲಧಿಕಾರಿಗಳು ಗಮನಿಸಿ ರಸ್ತೆಗೆ ಡಾಂಬರ್ ಹಾಕಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ.