ಅಂಗನವಾಡಿ ಬೀಗ ಮುರಿದು ಕುರಿ ಕಟ್ಟಿದರು!

They broke the Anganwadi lock and tied up a sheep!
They broke the Anganwadi lock and tied up a sheep!
Published on
ಚಿಂತಾಮಣಿ: ಬಸವಾಪುರ ಅಂಗನವಾಡಿಯ ಬೀಗ ಮುರಿದು ಕುರಿಗಳನ್ನು ಕಟ್ಟಿ ದರ್ಪ ತೋರಿದ್ದಲ್ಲದೆ, ಕಾರ್ಯಕರ್ತೆಗೆ ಬೆದರಿಕೆ ಹಾಕಿದ ಐವರ ವಿರುದ್ಧ ಎ್​ಐಆರ್​ ದಾಖಲಿಸಲಾಗಿದೆ.
ಅಂಗನವಾಡಿಗೆ 2025-&26ನೇ ಸಾಲಿನಲ್ಲಿ ಶಿಕ್ಷಕಿಯಾಗಿ ಆಯ್ಕೆಯಾದ ಅದೇ ಗ್ರಾಮದ ಅಶ್ವಿನಿ ಹಾಗೂ ಸಹಾಯಕಿ ಪ್ರಮೀಳಾ ನಡುವೆ 2 ತಿಂಗಳ ಹಿಂದೆ ಜಗಳವಾಗಿತ್ತು ಎನ್ನಲಾಗಿದೆ.

ಅಂಗನವಾಡಿಗೆ ಭೇಟಿ ನೀಡಿ ಪರಿಶೀಲಿಸಿದೆ. ಆರೋಪಿಗಳು ಕಾನೂನು ಬಾಹಿರವಾಗಿ ಕುರಿಗಳನ್ನು ತಂದು ಕಟ್ಟಿಕೊಂಡಿರುವುದು ಕಂಡು ಬಂತು. ಇದು ಕಾನೂನು ಪ್ರಕಾರ ಅಪರಾಧ, ಹೀಗೆ ಮಾಡಬಾರದು ಎಂದು ಅನೇಕ ಬಾರಿ ಬುದ್ಧಿ ಹೇಳಿದರೂ ನನ್ನ ಮಾತಿಗೆ ಬೆಲೆ ಕೊಟ್ಟಿಲ್ಲ. ಅಂಗನವಾಡಿ ತೆರೆದು ಕರ್ತವ್ಯ ನಿರ್ವಹಿಸಲು ಬಿಡುತ್ತಿಲ್ಲ.

— ಎಚ್​.ಜಿ.ಮಹೇಶ್​ಬಾಬು ಶಿಶು ಅಭಿವೃದ್ಧಿ ಯೋಜನಾಧಿಕಾರಿ
ಮೇ 27ರಂದು ಬೆಳಗ್ಗೆ 10ಕ್ಕೆ ಅಶ್ವಿನಿ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲು ಬಂದಾಗ, ಸಹಾಯಕಿ ಪ್ರಮೀಳಾ ಮತ್ತು ಕುಟುಂಬದವರು ಅಂಗನವಾಡಿ ಜಾಗ ನಮ್ಮದು ಎಂದು ಗುಂಪು ಕಟ್ಟಿಕೊಂಡು ಬಂದು ಬೀಗ ಮುರಿದು, ಒಳಗೆ ಪ್ರವೇಶಿಸಿದ್ದರು. ಅಲ್ಲದೇ ಆಹಾರ ಪದಾರ್ಥಗಳನ್ನು ಫಲಾನುಭವಿಗಳಿಗೆ ವಿತರಿಸದಂತೆ ತಡೆದಿದ್ದರು. ಜತೆಗೆ ಮಕ್ಕಳ ಕಲಿಕೆಗೂ ತೊಂದರೆ ಕೊಟ್ಟು, ಅಶ್ವಿನಿಗೆ ಅವಾಚ್ಯವಾಗಿ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಕುರಿಗಳನ್ನು ಕಟ್ಟಿ ಗಲಾಟೆ ಮಾಡಿದ್ದರು. ಈ ವೇಳೆ ಸ್ಥಳಿಯರಾದ ಈಶ್ವರರೆಡ್ಡಿ, ಶಫಿ ಎಂಬುವವರು ಮಧ್ಯಪ್ರವೇಶಿಸಿ ಗಲಾಟೆ ನಿಲ್ಲಿಸಿದ್ದರು.

ಯಾರ್ಯಾರ ವಿರುದ್ಧ ದೂರು?

ಟನೆ ಬಗ್ಗೆ ಸಿಡಿಪಿಒ ಇಲಾಖೆ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು, ಅವರ ಆದೇಶದ ಮೇರೆಗೆ ಜೂ.5ರಂದು ಸಂಜೆ ಕೆಂಚಾರ್ಲಹಳ್ಳಿ ಪೊಲೀಸ್​ ಠಾಣೆಗೆ ಲಿಖಿತ ದೂರು ನೀಡಿದೆ. ದೂರು ಸ್ವೀಕರಿಸಿರುವ ಚಿಂತಾಮಣಿ ಪೊಲೀಸರು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಸರ್ಕಾರಿ ಆಸ್ತಿ&ಪಾಸ್ತಿ ಹಾನಿ ಮಾಡಿದ ಆರೋಪದಡಿ ಪ್ರಮೀಳಾ, ನಾರಾಯಣಸ್ವಾಮಿ, ಅಮರೇಶ, ಶ್ರೀದೇವಿ, ಹರೀಶ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಅಶ್ವಿನಿ ನೀಡಿದ ದೂರಿನ ಮೇರೆಗೆ ಬಸವಾಪುರ ಅಂಗನವಾಡಿಗೆ ಖುದ್ದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಚ್​.ಜಿ.ಮಹೇಶ್​ ಬಾಬು ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. ಕುರಿಗಳನ್ನು ಹೊರ ಕಟ್ಟಲು ಒಪ್ಪದೆ ದರ್ಪ ತೋರಿದ್ದಾರೆ. ಸದ್ಯ ಅಂಗನವಾಡಿ ಮಕ್ಕಳನ್ನು ಸಮೀಪದ ಶಾಲೆಯಲ್ಲಿ ಕೂರಿಸಿ ಆಟ, ಪಾಠ ಹೇಳಿಕೊಡಲಾಗುತ್ತಿದೆ. ಜೂ.10ರಂದು ಪೊಲೀಸ್​ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಲಿದ್ದಾರೆ.
ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಚ್​.ಜಿ.ಮಹೇಶ್​ ಬಾಬು ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net