ಹೆಣದ ಮೇಲೆ ಹಣ ಮಾಡಿದ ನೀಚರಿವರು

ಯಾದಗಿರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಶಾಸಕರಾದ ಶರಣಬಸಪ್ಪ ದರ್ಶನಾಪುರ, ಚನ್ನಾರಡ್ಡಿ ಪಾಟೀಲ್ ತುನ್ನೂರ ಇದ್ದರು.
ಯಾದಗಿರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಶಾಸಕರಾದ ಶರಣಬಸಪ್ಪ ದರ್ಶನಾಪುರ, ಚನ್ನಾರಡ್ಡಿ ಪಾಟೀಲ್ ತುನ್ನೂರ ಇದ್ದರು.
Published on
ಯಾದಗಿರಿ: ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಬಿಜೆಪಿ ನಾಯಕರಿಗೆ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ೨೦೦೮ರಿಂದ ೨೦೧೩ರವರೆಗಿನ ಬಿಎಸ್‌ವೈ ನೇತೃತ್ವದ ಬಿಜೆಪಿ ಆಡಳಿತವನ್ನು ಜನರು ನೋಡಿದ್ದಾರೆ . ೨೦೧೯ರಿಂದ ೨೦೨೩ರವರೆಗಿನ ಕೋವಿಡ್ ಸಮಯದಲ್ಲಿ ಹೆಣದ ಮೇಲೆ ಹಣ ಮಾಡಿದ ನೀಚರಿವರು. ಇಂಥವರಿಗೆ ಭ್ರಷ್ಟಾಚಾರದ ಬಗ್ಗೆ ಪಾಠ ಹೇಳುವಂತಹ ನೈಯಾಪೈಸೆ ನೈತಿಕ ಹಕ್ಕಿಲ್ಲ. ಇವರು ರಾಜಕೀಯದಲ್ಲಿ ಇರಲಿಕ್ಕೇ ನಾಲಾಯಕರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹಿಗ್ಗಾ-ಮುಗ್ಗಾ ಝಾಡಿಸಿದ ಅವರು, ಅಶೋಕ್, ವಿಜಯೇಂದ್ರಗೆ ಭ್ರಷ್ಟಾಚಾರ ಕುರಿತು ಮಾತನಾಡುವ ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಲವು ದೊಡ್ಡ ಹಗರಣಗಳು ನಡೆದಿವೆ. ಚುನಾವಣಾ ಬಾಂಡ್ ವ್ಯವಸ್ಥೆಯನ್ನು ನಾವು ಸಂಸತ್ತಿನಲ್ಲಿ ವಿರೋಧಿಸಿದ್ದಾರೆ. ಆದರೆ ಬಹುಮತದ ಆಧಾರದ ಮೇಲೆ ಜನರಿಗೆ ತಂದರು. ನಂತರ ಸುಪ್ರೀಂಕೋರ್ಟ್ ರದ್ದುಪಡಿಸಿತು. ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ ಸಾವಿರಾರು ಕೋಟಿ ಹಣ ಬಂದಿದೆ. ಇಡಿ, ಆದಾಯ ತೆರಿಗೆ ದಾಳಿ ಎದುರಿಸಿದ ಕೆಲವೇ ಸಮಯದಲ್ಲಿ ಕೆಲ ಕಂಪನಿಗಳು ದೇಣಿಗೆ ನೀಡಿರುವುದು ಬಹಿರಂಗವಾಗಿದೆ. ದೊಡ್ಡ ಯೋಜನೆ ಪಡೆದ ಕಂಪನಿಗಳಿಂದಲೂ ಹಣ ಬಂದಿದೆ. ಕೇಂದ್ರದ ಮೋದಿ ಸರ್ಕಾರ ಖುಲ್ಲಂ ಖುಲ್ಲಾ ಲೂಟಿ ಮಾಡಿದೆ ಎಂದು ಡಾ.ಶರಣಪ್ರಕಾಶ ಆರೋಪಿಸಿದರು.
ಶಾಸಕರಾದ ಶರಣಬಸಪ್ಪ ದರ್ಶನಾಪುರ, ಚನ್ನಾರಡ್ಡಿ ಪಾಟೀಲ್ ತುನ್ನೂರ, ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ ಇದ್ದರು.

ಇಡಿ ದಾಳಿ ಮೋದಿ ಮಾಡೆಲ್

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮೇಲಿನ ಜಾರಿ ನಿರ್ದೇಶನಾಲಯದ (ಇಡಿ) ದಾಳಿ ರಾಜಕೀಯ ಪ್ರೇರಿತವಾಗಿದೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿ ವಿಪಕ್ಷ ನಾಯಕರನ್ನು ಗುರಿಯಾಗಿಸುತ್ತಿದೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಕಿಡಿಕಾರಿದರು. ಇಡಿ, ಆದಾಯ ತೆರಿಗೆ ಹಾಗೂ ಸಿಬಿಐ ದಾಳಿಗಳು ಬಹುತೇಕ ವಿಪಕ್ಷ ನಾಯಕರ ಮೇಲೆಯೇ ನಡೆಯುತ್ತಿವೆ. ಇದರ ಉದ್ದೇಶ ವಿಪಕ್ಷದವರನ್ನು ಹೆದರಿಸುವುದಾಗಿದೆ. ಹಿಂದೆಯೂ ಅನೇಕ ನಾಯಕರ ಮೇಲೆ ಇಡಿ ಮತ್ತು ಆದಾಯ ತೆರಿಗೆ ದಾಳಿಗಳ ಮೂಲಕ ಒತ್ತಡ ಹೇರಲಾಗಿದೆ. ನಂತರ ಪಕ್ಷ ಬದಲಾಯಿಸಿದವರ ವಿರುದ್ಧದ ಪ್ರಕರಣಗಳು ತಣ್ಣಗಾಗಿರುವ ಉದಾಹರಣೆಗಳಿವೆ ಎಂದು ಹರಿಹಾಯ್ದರು. ಗುಜರಾತ್ ಮಾಡೆಲ್ ಎಂದು ಹೇಳುವ ಬಿಜೆಪಿ, ಈಗ ವಿಪಕ್ಷ ನಾಯಕರನ್ನು ಹೆದರಿಸಲು ಮೋದಿ ಮಾಡೆಲ್ ಅನುಸರಿಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ವಿಪಕ್ಷಗಳಿಗೂ ಗೌರವ ಇರಬೇಕು. ಆದರೆ ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಕ್ಕೆ ಬಳಸುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಬರ ಪಟ್ಟಿಗೆ ಸೇರುವ ನಿರೀಕ್ಷೆ
ಪ್ರಸ್ತುತ ಶಹಾಪುರ ತಾಲೂಕು ಮಾತ್ರ ಬರಪೀಡಿತ ಘೋಷಣೆಯಾಗಿದೆ. ಗುರುಮಠಕಲ್, ಸುರಪುರ, ಯಾದಗಿರಿ, ವಡಗೇರಾ, ಹುಣಸಗಿ ಇತರ ತಾಲೂಕುಗಳಲ್ಲೂ ಬರ ಪರಿಸ್ಥಿತಿ ಇದೆ. ಈಗಾಗಲೇ ಕಂದಾಯ ಸಚಿವರು ಮತ್ತು ಕಂದಾಯ ಇಲಾಖೆ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿದ್ದೇನೆ. ಆಪತ್ತು ನಿರ್ವಹಣೆ ನೋಡಿಕೊಳ್ಳುವ ಅಧಿಕಾರಿಗಳೊಂದಿಗೂ ಮಾತನಾಡಿದ್ದೇನೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು. ಸೆ.೧೬ರಂದು ಮತ್ತೊಂದು ಬರ ಪಟ್ಟಿಯನ್ನು ಸರ್ಕಾರ ಪ್ರಕಟಿಸಲಿದೆ. ಅದರಲ್ಲಿ ಯಾದಗಿರಿ ಜಿಲ್ಲೆಯಾ ಬಹುತೇಕ ತಾಲೂಕುಗಳು ಬರಪೀಡಿತ ಘೋಷಣೆಗೆ ಅರ್ಹತೆ ಪಡೆಯುವ ನಿರೀಕ್ಷೆ ಇದೆ ಎಂದರು. ಬರ ವಿಚಾರದಲ್ಲಿ ಯಾವುದೇ ರೀತಿಯ ರಾಜಕೀಯ ಇಲ್ಲ. ರೈತರ ಹಿತ ಕಾಪಾಡುವುದು ಸರ್ಕಾರದ ಆದ್ಯತೆ. ಬರ ಘೋಷಣೆಯಾದ ಬಳಿಕ ಪರಿಹಾರ, ಇನ್‌ಪುಟ್ ಸಬ್ಸಿಡಿ ಸೇರಿ ಅಗತ್ಯ ನೆರವು ನೀಡಲು ಸಾಧ್ಯವಾಗಲಿದೆ. ಜಿಲ್ಲೆ ಮತ್ತು ರಾಜ್ಯದ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.

ಸಭೆಗೆ ಬರೋದು-ಬಿಡೋದು ಕಂದಕೂರಗೆ ಬಿಟ್ಟ ವಿಚಾರ

ಕೆಡಿಪಿ ಸಭೆಗೆ ಬರುವುದು ಅಥವಾ ಬಿಡುವುದು ಶಾಸಕ ಶರಣಗೌಡ ಕಂದಕೂರ ಅವರಿಗೆ ಬಿಟ್ಟ ವಿಚಾರ. ಜಿಲ್ಲೆಯಾ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಸಭೆ ನಡೆಸುತ್ತಿದ್ದು, ಅವರಿಗೂ ಆಹ್ವಾನ ನೀಡಿದ್ದೇವೆ ಎಂದು ಸಚಿವ ಡಾ.ಶರಣಪ್ರಕಾಶ ಹೇಳಿದರು. ಬರ, ಕುಡಿಯುವ ನೀರು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲು ಎಲ್ಲರಿಗೂ ಆಹ್ವಾನ ನೀಡಿದ್ದೇವೆ. ಯಾರನ್ನೂ ಬಲವಂತಪಡಿಸಲು ಸಾಧ್ಯವಿಲ್ಲ ಎಂದರು.
"

ನಾನು ಅಧಿಕಾರ ವಹಿಸಿಕೊಂಡ ಬಳಿಕ ರಾಯಚೂರು ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಜುಬಿನ್ ಮೊಹಾಪಾತ್ರ ಅವರನ್ನು ಯಾದಗಿರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಽಕಾರಿ (ಸಿಇಒ) ಆಗಿ ನೇಮಕ ಮಾಡುವಂತೆ ಮನವಿ ಮಾಡಿದ್ದಾರೆ, ಅದರಂತೆ ನೇಮಕವಾಗಿದೆ. ಸದ್ಯ ಅವರು ಚುನಾವಣಾ ಆಯೋಗದ ಎಸ್‌ಐಆರ್ ಕಾರ್ಯದಲ್ಲಿ ತೊಡಗಿದ್ದು, ಮುಗಿದ ಬಳಿಕ ಅಽಕಾರ ಸ್ವೀಕರಿಸಲಿದ್ದಾರೆ.| ಡಾ.ಶರಣಪ್ರಕಾಶ ಪಾಟೀಲ್ವೈದ್ಯಕೀಯ ಶಿಕ್ಷಣ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net