ಮಾಜಿ ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್ ಮಾತನಾಡಿ, ಮೈಸೂರಿಗೆ ಮಹಾರಾಜರು ಹೇಗೆ ಮುಖ್ಯನೋ ಹಾಗೆ ಬೆಂಗಳೂರಿಗೆ ಕೆಂಪೇಗೌಡರು ಬಹಳ ಮುಖ್ಯ. ಹಾಗಾಗಿ, ಅವರ ಬೃಹತ್ ಪುತ್ಥಳಿಯನ್ನು ಈ ಕ್ಷೇತ್ರದಲ್ಲಿ ನಿರ್ಮಿಸಬೇಕು. ಬೆಂಗಳೂರು ಉತ್ತಮವಾಗಿ ಬೆಳೆಯುತ್ತಿದೆ. ಅದರಂತೆ, ನಮ್ಮ ಕೆಲಸಗಳು ಉತ್ತಮವಾಗಿದ್ದರೆ ಅದೇ ನಾವು ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಹೇಳಿದರು.