ಸಚಿವ ಸ್ಥಾನ ಬಿಟ್ಟು ಬೇರೆ ಚರ್ಚೆಗೆ ಆಸ್ಪದವಿಲ್ಲ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
Published on
ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೇಸರಗೊಂಡಿರುವ ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ತಮ್ಮ ಬಿಗಿ ಪಟ್ಟು ಮುಂದುವರಿಸಿದ್ದಾರೆ. ಸಚಿವ ಸ್ಥಾನದ ವಿಚಾರ ಬಿಟ್ಟು ಬೇರೆ ಯಾವುದೇ ಚರ್ಚೆಗೆ ಆಸ್ಪದವಿಲ್ಲ. ನನಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ.
ಎಂ. ಕೃಷ್ಣಪ್ಪ ಮತ್ತು ಅವರ ಪುತ್ರ ಪ್ರಿಯಕೃಷ್ಣ ಅವರನ್ನು ಬುಧವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಸಿಎಂ ಡಿ.ಕೆ. ಶಿವಕುಮಾರ್ ಭೇಟಿ ಮಾಡಿ, ಮನವೊಲಿಸುವ ಪ್ರಯತ್ನ ಮಾಡಿದ್ದರೂ ಸಲವಾಗಿರಲಿಲ್ಲ. ಆದರಿಂದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಶುಕ್ರವಾರ ಕೃಷ್ಣಪ್ಪ ನಿವಾಸಕ್ಕೆ ಭೇಟಿ ನೀಡಿ, ಮಾತುಕತೆ ನಡೆಸಿದರೂ ಅಸಮಾಧಾನ ಸರಿಪಡಿಸಲು ಸಾಧ್ಯವಾಗಿಲ್ಲ.
ಪಕ್ಷದ ಮುಖಂಡರ ಭೇಟಿ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡುರುವ ಎಂ.ಕೃಷ್ಣಪ್ಪ, ತಮ್ಮ ನಿವಾಸಕ್ಕೆ ಬಂದವರು ಎಲ್ಲರೂ ಸ್ನೇಹಿತರು ಮತ್ತು ನಮ್ಮವರು. ನಮ್ಮಿಂದ ತಪ್ಪಾಗಿದೆ ಎಂದು ಹೇಳಿದ್ದಾರೆ. ಅದನ್ನು ಸರಿಮಾಡುವಂತೆ ಹೇಳಿದ್ದೇನೆ. ಯಾವ ರೀತಿ ಮಾಡುತ್ತಾರೆ ಎಂಬುದು ಅವರಿಗೆ ಬಿಟ್ಟ ವಿಚಾರ. ಸಚಿವ ಸ್ಥಾನ ಬಿಟ್ಟು ಬೇರೆ ಏನಿದೆ? ಅವರೇನು ಧರ್ಮಕ್ಕೆ ಕೊಡುತ್ತಾರಾ. ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಂದ ಇಬ್ಬಿಬ್ಬರು ಗೆದ್ದಿದ್ದೇವೆ. ಉಪಚುನಾವಣೆ ನಡೆದಾಗ ಎಲ್ಲರೂ ಸೋತರೇ ನಾವು ಮಾತ್ರ ಗೆದ್ದು ತೋರಿಸಿದ್ದೇವೆ. ಸಚಿವ ಸ್ಥಾನ ಕೊಡುವುದು ಅವರ ಧರ್ಮ ಎಂದರು.
ನಮಗೆ ಎಷ್ಟು ಬಾರಿ ಮೋಸ ಮಾಡುವುದು. ಬೆಂಗಳೂರಿನಲ್ಲಿ ಗೆದ್ದು, ಏನು ಇಲ್ಲ ಎಂದರೇ ಏನು ಅರ್ಥ. ಇದರಿಂದ ನನಗೆ ಅವಮಾನ ಮಾಡುತ್ತಿಲ್ಲ. ಕಾಂಗ್ರೆಸ್ ನಂಬಿ ಮತದಾನ ಮಾಡಿರುವ ಕ್ಷೇತ್ರದ ಜನತೆಗೆ ಅವಮಾನ ಮಾಡುತ್ತಿದ್ದಾರೆ. ರಾಜಕೀಯ ನಂಬಿಕೊಂಡು ಜೀವನ ನಡೆಸುತ್ತಿಲ್ಲ. ದೇವರು ಎಲ್ಲವನ್ನೂ ಕೊಟ್ಟಿದ್ದಾನೆ. ಜನಸೇವೆ ಮಾಡುವ ಉದ್ದೇಶಕ್ಕೆ ಇದ್ದೇವೆ. ನಾನು ಏನಾದರೂ ಲಂಚಕೋರತನ, ಭ್ರಷ್ಟಾಚಾರ ಆರೋಪ ಇದೀಯಾ ಹೇಳಬೇಕು. ನನಗೆ ಸಿಕ್ಕ ಒಂದೂವರೆ ವರ್ಷದಲ್ಲಿ ವಸತಿ ಇಲಾಖೆಯಲ್ಲಿ ದಾಖಲೆ ರೂಪದಲ್ಲಿ ಕೆಲಸ ಮಾಡಿ ತೋರಿಸಿದ್ದೇನೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಸದನದಲ್ಲಿ ಹೇಳಿದ್ದಾರೆ ಎಂದು ಕೃಷ್ಣಪ್ಪ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net