ಕೂಲಿಕಾರರು ಗುಳೆ ಹೋಗುವ ಅವಶ್ಯಕತೆ ಇಲ್ಲ

ಇಂಡಿ ತಾಲೂಕಿನ ಬಬಲಾದ ಗ್ರಾಪಂ ಸಭೆಯಲ್ಲಿ ಜಿಪಂ ಸಿಇಒ ರಿಷಿ ಆನಂದ ಮಾತನಾಡಿದರು. ಮಹಾದೇವಪ್ಪ ಏವೂರ, ಸಂಜಯ ಖಡಗೇಕರ, ಪಿಡಿಒ ಸಿ.ಜಿ. ಪಾರೆ, ಲಕ್ಷ್ಮಣ ಪಾಟೀಲ ಇತರರಿದ್ದರು.
ಇಂಡಿ ತಾಲೂಕಿನ ಬಬಲಾದ ಗ್ರಾಪಂ ಸಭೆಯಲ್ಲಿ ಜಿಪಂ ಸಿಇಒ ರಿಷಿ ಆನಂದ ಮಾತನಾಡಿದರು. ಮಹಾದೇವಪ್ಪ ಏವೂರ, ಸಂಜಯ ಖಡಗೇಕರ, ಪಿಡಿಒ ಸಿ.ಜಿ. ಪಾರೆ, ಲಕ್ಷ್ಮಣ ಪಾಟೀಲ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಪಂ ಸಿಇಒ ರಿಷಿ ಆನಂದ ಹೇಳಿಕೆ
  • ವಿಬಿ-ಜಿ ರಾಮ್-ಜಿ ಕಾಮಗಾರಿ ಸ್ಥಳಕ್ಕೆ ಭೇಟಿ
ಇಂಡಿ: ನಿಮ್ಮೂರಲ್ಲೆ ನಿಮ್ಮ ಗ್ರಾಮದಲ್ಲಿಯೇ ವಿಬಿ-ಜಿ ರಾಮ್-ಜಿ ಕಾಮಗಾರಿ ಸ್ಥಳಗಳಲ್ಲಿ ಉದ್ಯೋಗ ನೀಡಲಾಗುತ್ತದೆ. ಬರಗಾಲದಲ್ಲಿ ಕೂಲಿಕಾರರು ಗುಳೆ ಹೋಗುವ ಅವಶ್ಯಕತೆ ಇಲ್ಲ ಎಂದು ಜಿಪಂ ಸಿಇಒ ರಿಷಿ ಆನಂದ ಹೇಳಿದರು.
ತಾಲೂಕಿನ ಬಬಲಾದ ಇಂಗಳಗಿ ಮಾವಿನಹಳ್ಳಿ ಬಸನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ನಾಳ, ಬಳ್ಳೊಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ವಿಬಿ-ಜಿ ರಾಮ್-ಜಿ ಯೋಜನೆಯಡಿ ಪ್ರಗತಿಯಲ್ಲಿರುವ ವಿವಿಧ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.
ಯೊಜನೆಯಡಿಯಲ್ಲಿ ಕೈಗೊಳ್ಳಲಾಗುತ್ತಿರುವ ಜಲ ಸಂರಕ್ಷಣೆ, ಕೆರೆ ಹಾಗೂ ಕಾಲುವೆ ಪುನಶ್ಚೇತನ ಹೂಳು ತೆಗೆಯುವಿಕೆ ಸೇರಿ ವಿವಿಧ ಕಾಮಗಾರಿ ಪರಿಶೀಲಿಸಿ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿಯೊಂದಿಗೆ ಸ್ಥಳಿಯ ಕೂಲಿಕಾರರಿಗೆ ಉದ್ಯೋಗ ಅವಕಾಶ ಸೃಷ್ಟಿಸುವ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಬಬಲಾದ ಗ್ರಾಮ ಅರಣ್ಯ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಇಂಗು ಕೆರೆ, ಮಾವಿನಹಳ್ಳಿ ಗ್ರಾಮದಲ್ಲಿ ಕಂದಕ ನಿರ್ಮಾಣದ ಕಾಮಗಾರಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ತಾಪಂ ಇಒ ಮಹಾದೇವಪ್ಪ ಏವೂರ, ಸಂಜಯ ಖಡಗೇಕರ, ಬಬಲಾದ ಪಿಡಿಒ ಸಿ.ಜಿ. ಪಾರೆ, ಝಳಕಿ ಪಿಡಿಒ ಲಕ್ಷ್ಮಣ ಪಾಟೀಲ, ಮಲ್ಲಿಕಾರ್ಜುನ ನಿಲಂಗಿ, ಶ್ರೀಶೈಲ ಬಿರಾದಾರ, ಕೆನರಾ ಬ್ಯಾಂಕ್ ಮ್ಯಾನೆಜರ್ ವಿಠ್ಠಲ ಗೌರ, ನಾಗಪ್ಪ ಮಿಂಚನಾಳ, ಮಹಾದೇವ ಯರಗಟ್ಟಿ ಸಾಹಿಲ್ ಧನಶೇಟ್ಟಿ ರಾಮಗೌಡ ಸರಬಡಗಿ ಸಂಗಮೇಶ ಬಿರಾದಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net