ರಕ್ತದಾನಕ್ಕಿಂತ ಶ್ರೇಷ್ಠದಾನ ಮತ್ತೊಂದಿಲ್ಲ

ಹೆಮ್ಮರಗಾಲ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ದಾನಿಗಳು ರಕ್ತದಾನ ಮಾಡಿದರು.
ಹೆಮ್ಮರಗಾಲ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ದಾನಿಗಳು ರಕ್ತದಾನ ಮಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಹೆಮ್ಮರಗಾಲ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ
  • ರಾಷ್ಟ್ರೀಯ ಸೇವಾ ಯೋಜನಾ ಘಟಕ

ನಂಜನಗೂಡು:

ತಾಲೂಕಿನ ಹೆಮ್ಮರಗಾಲ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 45 ಯೂನಿಟ್ ಸಂಗ್ರಹವಾಯಿತು.

ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ರಾಷ್ಟ್ರೀಯ ಸೇವಾ ಯೋಜನೆ ಘಟಕದ ನೋಡಲ್ ಅಧಿಕಾರಿ ಮಹೇಶ್ ಕ್ಯಾತಮಾರನಹಳ್ಳಿ ಮಾತನಾಡಿ, ರಕ್ತದಾನವೇ ಜೀವದಾನ. ರಕ್ತದಾನಕ್ಕಿಂತ ಶ್ರೇಷ್ಠದಾನ ಮತ್ತೊಂದಿಲ್ಲ. ರಕ್ತದಾನ ಕೇವಲ ವೈದ್ಯಕೀಯ ನೆರವು ಅಲ್ಲ. ಅದು ಮಾನವೀಯತೆಯ ಮಹೋನ್ನತ ಅಭಿವ್ಯಕ್ತಿಯಾಗಿದೆ. ಒಬ್ಬ ವ್ಯಕ್ತಿ ದಾನ ಮಾಡುವ ಒಂದು ಯೂನಿಟ್ ರಕ್ತ ಹಲವು ಜೀವಗಳನ್ನು ಉಳಿಸುವ ಸಂಜೀವಿನಿಯಾಗಿದೆ. ರಕ್ತದಾನಿಗೆ ಹಲವು ಜೀವಗಳನ್ನು ಉಳಿಸಿದೆನೆಂಬ ಸಾರ್ಥಕ್ಯ ಭಾವನೆ, ಸಂತೃಪ್ತಿ, ಸಂತೋಷ ಲಭಿಸುತ್ತದೆ ಎಂದು ಹೇಳಿದರು.
ಶಿಬಿರವನ್ನು ಡಾ.ಚಿಂಟು ಮೇರಿ ಮ್ಯಾಥಿವ್ ಉದ್ಘಾಟಿಸಿದರು. ಎನ್‌ಎಸ್‌ಎಸ್ ಘಟಕದ ಸಂಯೋಜಕ ಶ್ರೀಧರ್, ವಿಭಾಗೀಯ ಅಧಿಕಾರಿಗ ಡಾ.ಟಿ.ಕೆ.ರವಿ, ಎಸ್‌ಡಿಎಂಸಿ ಉಪಾಧ್ಯಕ್ಷ ಸಿದ್ದರಾಜು, ಸದಸ್ಯರಾದ ರವಿಮೂರ್ತಿ, ಕೃಷ್ಣಮೂರ್ತಿ, ಮಹದೇವಸ್ವಾಮಿ, ಅಭಿಲಾಷ, ಉಪನ್ಯಾಸಕರಾದ ಭೈರೇಶ್ವರ, ರಾಚಯ್ಯ, ಸಿದ್ದರಾಜು, ಉಮೇಶ್, ಅಂಕಶೆಟ್ಟಿ, ಲೋಕೇಶ್, ಪ್ರಭುಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net