ರಾಜ್ಯದ ಇತಿಹಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜತೆಗೆ ಸರ್ಕಾರದ ಸಂಘರ್ಷ, ನಟ್ಟು ಬೋಲ್ಟು ಟೈಟ್ ಮಾಡುತ್ತೇವೆ ಎಂದು ಚಲನಚಿತ್ರದವರೊಂದಿಗೆ ಜಗಳ, ಏನೂ ಇಲ್ಲ ಎಂದು ಹೇಳಿ ಬಿಗ್‌ಬಾಸ್ ಜತೆಗೂ ಜಗಳ, ರಸ್ತೆ ಸರಿಯಿಲ್ಲ ಎಂದಿದ್ದಕ್ಕೆ ಐಟಿ-ಬಿಟಿ ಉದ್ಯಮಿಗಳೊಂದಿಗೆ ಸಂಘರ್ಷ, ಬ್ಯಾಲೆಟ್ ಪೇಪರ್ ಬೇಕು ಎಂದು ಚುನಾವಣಾ ಆಯೋಗದ ಜತೆ ಜಗಳ. ಹಾಗಾದರೆ ಸಿಲಿಕಾನ್ ಸಿಟಿಯನ್ನು ಶಿಲಾಯುಗಕ್ಕೆ ಕೊಂಡೊಯಬೇಕೇ ಎಂದು ಪ್ರಶ್ನಿಸಿದ ಅವರು, ಸರ್ಕಾರಕ್ಕೆ ಅಭಿವೃದ್ಧಿ ಬೇಡ, ಕೇಂದ್ರದ ಜನಪರ ಯೋಜನೆಗಳು ಬೇಡ. ಎಲ್ಲದರಲ್ಲೂ ಸಂಘರ್ಷ ಎಂದು ಹರಿಹಾಯ್ದರು.