

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಮಾನವ ಹಕ್ಕುಗಳಿಗೆಲಿಂಗ, ರಾಷ್ಟ್ರೀಯತೆ,ಜನಾಂಗ,ಬಣ್ಣ,ಧರ್ಮ,ಭಾಷೆ ಅಥವಾಯಾವುದೇ ಇತರ ಸ್ಥಾನಮಾನವನ್ನುಅವಲಂಬಿಸಿದ ಯಾವುದೇ ತಾರತಮ್ಯವಿರುವುದಿಲ್ಲಎಲ್ಲ ಮಾನವರಿಗೂ ಅಂತರ್ಗತವಾಗಿರುವಹಕ್ಕುಗಳಾಗಿವೆ ಎಂದು ಕರ್ನಾಟಕಕಾನೂನು ಆಯೋಗದ ಅಧ್ಯಕ್ಷ ನ್ಯಾ.ಡಾ.ಅಶೋಕ್ಬಿ. ಹಿಂಚಿಗೇರಿಹೇಳಿದರು.
ಅಂತರಾಷ್ಟ್ರೀಯಮಾನವ ಹಕ್ಕುಗಳ ದಿನಾಚರಣೆಹಿನ್ನೆಲೆಯಲ್ಲಿ ಯೂನಿವರ್ಸಲ್ಸ್ಕೂಲ್ ಆಫ್ ಲಾ ಸರ್ಕಾರಿ ನೌಕರರಸಂಘದ ಸಭಾಂಗಣದಲ್ಲಿ ಮಂಗಳವಾರಹಮ್ಮಿಕೊಂಡಿದ್ದ ಭಾರತ ಜಿಡಿಪಿಯಲ್ಲಿಮುಂದುವರೆದಿದ್ದು,ಮಾನವ ಹಕ್ಕುಗಳಲ್ಲಿಹಿಂದುಳಿದಿರುವುದೇಕೆ ?ಎಂಬ ಸೆಮಿನಾರ್ನಲ್ಲಿಪಾಲ್ಗೊಂಡು ಮಾತನಾಡಿದರು.
ಮಾನವಹಕ್ಕುಗಳನ್ನು ಯಾವುದೇ ಒಪ್ಪಂದದಕಾರ್ಯದಿಂದ ಗಳಿಸುವುದು,ಖರೀದಿಸುವುದುಅಥವಾ ಆನುವಂಶಿಕವಾಗಿ ರಚಿಸಲಾಗುವುದಿಲ್ಲ.ಹುಟ್ಟಿದಪ್ರತಿಯೊಬ್ಬ ವ್ಯಕ್ತಿಗೂ ಕೂಡಾಮಾನವ ಹಕ್ಕುಗಳು ಇರುತ್ತವೆ.ಬೌದ್ಧ ಧರ್ಮಗುರುದಲೈಲಾಮಾ ಎಲ್ಲಾ ಮಾನವರು ಒಂದೇ,ಮಾನವ ಮಾಂಸ,ಮೂಳೆ ಮತ್ತುರಕ್ತದಿಂದ ಮಾಡಲ್ಪಟ್ಟಿದ್ದು,ಇವರಲ್ಲಿ ಭೇದವಿಲ್ಲ.ಎಲ್ಲರೂ ಸಂತೋಷವಾಗಿರಲುಸಮಾನ ಹಕ್ಕಿದೆ ಎಂದು ಹೇಳುತ್ತಾರೆ.ವಿಶ್ವಸಂಸ್ಥೆಯಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿಅನ್ನಾನ್ ‘ಮಾನವ ಹಕ್ಕುಗಳುನಮ್ಮನ್ನು ಮನುಷ್ಯರನ್ನಾಗಿಮಾಡುತ್ತವೆ.ಇವು ಪ್ರತಿಯೊಬ್ಬವ್ಯಕ್ತಿಯು ಹೊಂದಿರುವ ಹಕ್ಕುಗಳಾಗಿವೆಎಂದು ವ್ಯಾಖ್ಯಾನಿಸಿದ್ದಾರೆ.ಯೂರೋಪಿಯನ್ಚಿಂತಕರು ಮಾನವ ಹಕ್ಕುಗಳನ್ನುನೈಸರ್ಗಿಕ ಹಕ್ಕುಗಳು ಎಂದುಕರೆದಿದ್ದಾರೆ. ಮಾನವ ಹಕ್ಕುಗಳುಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟತತ್ವಗಳು. ನೈತಿಕತೆ,ತನ್ನ ಸಾಮರ್ಥ್ಯವನ್ನುಅರಿತು ಸ್ವಾತಂತ್ರ್ಯ,ನ್ಯಾಯ,ಸಮಾನತೆ ಮತ್ತುಶಾಂತಿಯ ವಾತಾವರಣದಲ್ಲಿ ಜೀವನವನ್ನುನಡೆಸಲು ಅನುವು ಮಾಡಿಕೊಡುತ್ತವೆಎಂದು ಹಿಂಚಿಗೇರಿ ವಿವರಿಸಿದರು.
ಕಾರ್ಯಕ್ರಮದಲ್ಲಿಅಂತಾರಾಷ್ಟ್ರೀಯ ಮಾನವ ಹಕ್ಕುಗಳಕಾರ್ಯಕರ್ತ ಸಲೀಲ್ ಶೆಟ್ಟಿವಿದ್ಯಾರ್ಥಿಗಳನ್ನು ಕುರಿತುಅಂಕಿಅಂಶ ಸಹಿತಿ ವಿಶೇಷ ಉಪನ್ಯಾಸನೀಡಿದರು. ಯೂನಿವರ್ಸಲ್ಸಮೂಹ ಸಂಸ್ಥೆಗಳ ಮುಖ್ಯಸ್ಥರಾದಮೀರಾ ಕೃಷ್ಣಪ್ಪ, ಉಪೇಂದ್ರ ಶೆಟ್ಟಿ,ಸಂತೋಷ್ ಶೆಟ್ಟಿ,ಪ್ರಾಂಶುಪಾಲೆಜುವೆಲ್ ಪಣಿಕ್ಕರ್ ಮತ್ತಿತರರುಪಾಲ್ಗೊಂಡಿದ್ದರು.
ಕಳೆದ 10 ವರ್ಷಗಳಲ್ಲಿ ಭಾರತವು ಜಿಡಿಪಿಯಲ್ಲಿ ಅಭಿವೃದ್ಧಿಯನ್ನು ಸಾಧಿಸಿದೆ. ಆದರೆ ಮಾನವ ಹಕ್ಕುಗಳಲ್ಲಿ ಆ ಬೆಳವಣಿಗೆ ಕಂಡಿಲ್ಲ. ಅಂಬೇಡ್ಕರ್ ಅವರು ದೇಶದ ಅಭಿವೃದ್ಧಿಗೆ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ತತ್ವಗಳನ್ನು ನೀಡಿದ್ದಾರೆ. ಆದರೆ ಜಾತಿ ವ್ಯವಸ್ಥೆಯಿಂದ ದೇಶ ಹೊರ ಬಂದಿಲ್ಲ. ಎಷ್ಟೆಲ್ಲಾ ಭಾಷಣ ಮಾಡುವವರು ಕೂಡಾ ಮದುವೆ ವಿಷಯ ಬಂದಾಗ ಸ್ವಜಾತಿಯವರನ್ನೇ ಮದುವೆಯಾಗುತ್ತಿದ್ದಾರೆ. ದೇಶದಲ್ಲಿ ಅಂತರ್ಜಾತಿಯ ವಿವಾಹ ಕೇವಲ ಶೇ.6 ರಷ್ಟು ಮಾತ್ರ ಇದೆ.