ಮಡಿವಾಳ: ಈ ಹಿಂದೆ ಕಾರ್ಪೊರೇಷನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಂಡ ನಂತರವೂ ಗ್ರಾಹಕರಿಗೆ ಹೆಚ್ಚಿನ ಸಾಲ ಸೌಲಭ್ಯ ಹಾಗೂ ಸವಲತ್ತುಗಳನ್ನು ಒದಗಿಸುವ ಮೂಲಕ ಉತ್ತಮ ಸೇವೆ ನೀಡುತ್ತಿದೆ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಲಯ ಮುಖ್ಯಾಧಿಕಾರಿ ಕಲ್ಯಾಣ್ ವರ್ಮ ಹೇಳಿದರು.customers
ಬೆಂಗಳೂರು, ವಾಲೂರು ಮುಖ್ಯರಸ್ತೆಯ ಚೊಕ್ಕಂಡಹಳ್ಳಿ ಗೇಟ್ ಬಳಿಯ ನೂತನ ಕಟ್ಟಡಕ್ಕೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಯಶವಂತಪುರ ಶಾಖೆಯನ್ನು ವರ್ಗಾಯಿಸಲಾಗಿದ್ದು, ಗುರುವಾರ ಶಾಖಾ ಕಚೇರಿ ಉದ್ಘಾಟನೆಗೊಳಿಸಿ ವಾತನಾಡಿದರು.
2021 ವಾ.31ರಲ್ಲಿ ಕಾರ್ಪೊರೇಷನ್ ಬ್ಯಾಂಕ್ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಲೀನವಾಯಿತು. ಕಾರ್ಪೊರೇಷನ್ ಬ್ಯಾಂಕ್ ಈ ಹಿಂದೆ ಮನೆ ವಾತಾದ ಬ್ಯಾಂಕ್ ಆಗಿತ್ತು, ವಿಲೀನವಾದ ನಂತರವೂ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯ ಹಾಗೂ ಸವಲತ್ತುಗಳನ್ನು ಒದಗಿಸುತ್ತಿದೆ ಎಂದರು.
ಸುರಕ್ಷಾ ವಿವಾ, ಪಿಂಚಣಿ, ಬೀದಿಬದಿ ವ್ಯಾಪಾರಸ್ಥರಿಗೆ ಸನ್ನದಿ ಯೋಜನೆ, ಮುದ್ರಾ ಯೋಜನೆ, 10 ಲಕ್ಷದವರೆಗೆ ಸಾಲ ವಿತರಣೆ, ನಿಗದಿತ ಅವಧಿಯೊಳಗೆ ಪಾವತಿಸಿದರೆ 20 ಲಕ್ಷದವರೆಗೆ ಸಾಲ ನೀಡಬಹುದಾಗಿದೆ. ಗರೀಬ್ ಗ್ಯಾರಂಟಿ ಸ್ಕೀಮ್ ಆಫ್ ಇಂಡಿಯಾ 10 ಕೋಟಿ ರೂ.ವರೆಗೆ ಸಾಲ ವಿತರಿಸಲಾಗುತ್ತಿದೆ. ರೈತರಿಗೆ ಕೆಸಿಸಿ ಸಾಲ 3 ಲಕ್ಷ ರೂ.ವರೆಗೆ ನೀಡಲಾಗುತ್ತಿದೆ ಎಂದು ಹೇಳಿದರು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಯಶವಂತಪುರ ಶಾಖೆಯಲ್ಲಿ ಉತ್ತಮ ವ್ಯವಹಾರ ನಡೆಸಿದ ಗ್ರಾಹಕರಾದ ಎ.ಕೆ.ಗೋವಿಂದಪ್ಪ, ಆರ್.ಸಿ.ಅಪ್ಪಾಜಿಗೌಡ, ಎಂ.ಸಿ.ರವಿ, ನಂಜುಂಡಪ್ಪ, ಎಂ.ವಿ.ವೇಮನ, ರಮೇಶ್, ಉಜ್ಜರಾಮ್, ದಿನೇಶ್, ಮಹೇಶ್, ಮುನಿರಾಜು ಅವರನ್ನು ಅಭಿನಂದಿಸಲಾಯಿತು.
ಸಹಾಯಕ ವ್ಯವಸ್ಥಾಪಕ ಸಚಿನ್ ಕುವಾರ್, ಎಲ್.ವರ್ಷಿಣಿ, ವಿಶೇಷ ಸಹಾಯಕ ದುರ್ಗಾಬಾಬು, ನಗದು ಗುವಾಸ್ತ ಮಂಜುನಾಥ್, ಕಟ್ಟಡ ವಾಲೀಕ ರಾಮಚಂದ್ರರೆಡಿ, ಗುರಪ್ಪ, ಯಶೋದಮ್ಮ ಇದ್ದರು.