ಚಿಕ್ಕಬಳ್ಳಾಪುರ: ಪೈಪ್ಲೈನ್ ನಿರ್ವಹಣೆ ಕಾಮಗಾರಿ ಹಿನ್ನೆಲೆಯಲ್ಲಿ ಮಾ.31 ರಿಂದ ಏ.2 ರವರೆಗೆ ಜಕ್ಕಲಮಡು ಜಲಾಶಯದಿಂದ ನಗರಕ್ಕೆ ನೀರಿನ ಪೂರೈಕೆಯಾಗುವುದಿಲ್ಲ ಎಂದು ಪೌರಾಯುಕ್ತ ಮನ್ಸೂರು ಆಲಿ ತಿಳಿಸಿದ್ದಾರೆ.
ನಗರದ ಎಂ.ಜಿ.ರಸ್ತೆಯ ರಾಷ್ಟ್ರೀಯಹೆದ್ದಾರಿ 69/234 ರ ವಿಸ್ತರಣೆ ಕಾಮಗಾರಿ ಕೈಗೊಂಡಿರುವ ಕಾರಣ ಈ ರಸ್ತೆಯಲ್ಲಿ ಹಾದು ಹೋಗಿರುವ ಜಕ್ಕಲಮಡು ಜಲಾ ಶಯದ ಪೈಪ್ಲೈನ್ ಬದಲಾಯಿಸಲಾಗುತ್ತಿದೆ. ಹಾಗಾಗಿ 3 ದಿನ ನೀರು ಪೂರೈಕೆಯಾಗುವುದಿಲ್ಲ. ಜನರು ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.