ಲಿಂಗದೀಕ್ಷೆ ಪಡೆಯಲು ಜಾತಿಯ ನಿರ್ಬಂಧವಿಲ್ಲ; ಶ್ರೀಶೈಲ ಜಗದ್ಗುರುಗಳ ಅಭಿಮತ

ಶ್ರಾವಣ ಮಾಸದ ಅಂಗವಾಗಿ ಶ್ರೀಶೈಲದಲ್ಲಿ ನಡೆದ ಸಾಮೂಹಿಕ ದೀಕ್ಷಾ ಸಮಾರಂಭದಲ್ಲಿ ವಟುಗಳೊಂದಿಗೆ ಶ್ರೀಶೈಲ ಜಗದ್ಗುರುಗಳು, ಆಡಳಿತಾಧಿಕಾರಿ ಎಂ.ಶ್ರೀನಿವಾಸ ಮತ್ತಿತರರಿದ್ದರು.
ಶ್ರಾವಣ ಮಾಸದ ಅಂಗವಾಗಿ ಶ್ರೀಶೈಲದಲ್ಲಿ ನಡೆದ ಸಾಮೂಹಿಕ ದೀಕ್ಷಾ ಸಮಾರಂಭದಲ್ಲಿ ವಟುಗಳೊಂದಿಗೆ ಶ್ರೀಶೈಲ ಜಗದ್ಗುರುಗಳು, ಆಡಳಿತಾಧಿಕಾರಿ ಎಂ.ಶ್ರೀನಿವಾಸ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಲಿಂಗದೀಕ್ಷೆ ಪಡೆದುಕೊಳ್ಳಲು ಯಾವುದೇ ಜಾತಿಯ ನಿರ್ಬಂಧವಿಲ್ಲ
  • ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರ ಅಭಿಮತ
  • ಶ್ರಾವಣ ಮಾಸದದ ನಿಮಿತ್ತ ಶ್ರೀಶೈಲದಲ್ಲಿ ಸಾಮೂಹಿಕ ಲಿಂಗದೀಕ್ಷೆ

ಶ್ರೀಶೈಲಂ : ವೀರಶೈವಲಿಂಗಾಯತ ಧರ್ಮದಲ್ಲಿ ಶ್ರೀಗುರುವುಶಿಷ್ಯನಿಗೆ ನೀಡುವ ಲಿಂಗದೀಕ್ಷೆಯನ್ನುಯಾವುದೇ ಜಾತಿಭೇದವಿಲ್ಲದೇ ಸರ್ವರೂಪಡೆದುಕೊಳ್ಳಲು ಮುಕ್ತಅವಕಾಶವಿರುವುದರಿಂದು ಇದು ಎಲ್ಲರಮೋಕ್ಷಕ್ಕೆ ಮಹಾದ್ವಾರವಾಗಿದೆಎಂದು ಶ್ರೀಶೈಲ ಜಗದ್ಗುರುಡಾ. ಚನ್ನಸಿದ್ದರಾಮಪಂಡಿತಾರಾಧ್ಯ ಶಿವಾಚಾರ್ಯಭಗವತ್ಪಾದರು ಹೇಳಿದ್ದಾರೆ.

ಶ್ರೀಶೈಲದಶ್ರೀ ಜಗದ್ಗುರು ಸೂರ್ಯಸಿಂಹಾಸನಮಹಾಪೀಠದಲ್ಲಿ ಶ್ರಾವಣ ಮಾಸದಅಂಗವಾಗಿ ಜರುಗಿದ ಸಾಮೂಹಿಕಅಯ್ಯಚಾರ ಮತ್ತು ಲಿಂಗದೀಕ್ಷೆಕಾರ್ಯಕ್ರಮದ ಸಾನ್ನಿಧ್ಯ ವಹಿಸಿಆಶೀರ್ವಚನ ನೀಡಿದರು.

ಮನುಷ್ಯನಿಗೆಅನಾದಿಕಾಲದಿಂದ ಆಣವ ಮಾಯಿಯ ಮತ್ತುಕಾರ್ಮಿಕ ಎಂಬ ಮೂರು ಪ್ರಕಾರದಮಲಗಳು ಆವರಿಸಿರುತ್ತವೆ. ಈಮಲಗಳೇ ಮನುಷ್ಯನ ಸಾಂಸಾರಿಕ ಎಲ್ಲದುಃಖಗಳಿಗೆ ಮತ್ತು ಭವಬಂಧನಕ್ಕೆಕಾರಣವಾಗಿರುತ್ತವೆ. ಶ್ರೀಗುರುವುಇಷ್ಟಲಿಂಗ ದೀಕ್ಷೆ ಮತ್ತುಅಯ್ಯಚಾರಗಳನ್ನು ನೀಡುವ ಸಂದರ್ಭದಲ್ಲಿವೇಧಾದೀಕ್ಷೆ, ಮಂತ್ರದೀಕ್ಷೆಮತ್ತು ಕ್ರಿಯಾದೀಕ್ಷೆ ಎಂಬ ಮೂರುಪ್ರಕಾರದ ದೀಕ್ಷೆಗಳನ್ನು ದಯಪಾಲಿಸುವಮೂಲಕ ಮಲತ್ರಯಗಳನ್ನು ನಿವಾರಿಸಿಶಿವಸ್ವರೂಪವಾದ ಇಷ್ಟಲಿಂಗವನ್ನುನೀಡುತ್ತಾನೆ. ಸದಾಚಾರಸದ್ವಿಚಾರ ಸಂಪನ್ನನಾಗಿ ನಿಷ್ಠೆಯಿಂದಲಿಂಗಪೂಜಾ ಮಹಾವ್ರತವನ್ನುಪರಿಪಾಲಿಸುವ ವ್ಯಕ್ತಿಯು ಸುಲಭವಾಗಿಮೋಕ್ಷವನ್ನು ಪಡೆಯಬಹುದು ಎಂದುಜಗದ್ಗುರುಗಳು ವಿವರಿಸಿದರು.

ಜೈನಾಪುರದಶ್ರೀರೇಣುಕ ಶಿವಾಚಾರ್ಯ ಸ್ವಾಮಿಗಳುವಟುಗಳಿಗೆ ಲಿಂಗದೀಕ್ಷೆ ಮತ್ತುಅಯ್ಯಚಾರ ದೀಕ್ಷೆಯನ್ನುನೀಡಿದರು. ಕಾರ್ಯಕ್ರಮದಲ್ಲಿಭ್ರಮರಾಂಬ ಮಲ್ಲಿಕಾರ್ಜುನದೇವಸ್ಥಾನದ ಆಡಳಿತಾಧಿಕಾರಿಎಂ.ಶ್ರೀನಿವಾಸ, ಅರ್ಚಕರಾದಮಲ್ಲಿಕಾರ್ಜುನ ಶಾಸ್ತ್ರಿಗಳು, ಶಿವಶಂಕರಸ್ವಾಮಿ, ಶ್ರೀಪೀಠದಮ್ಯಾನೇಜರ್ ಎಂ.ಬಿ.ಮಂಜುನಾಥ, ಜಂಗಮಸಮಾಜದ ಕಾರ್ಯದರ್ಶಿ ನಟರಾಜಮತ್ತಿತರರುಉಪಸ್ಥಿತರಿದ್ದರು. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣಮತ್ತು ಆಂಧ್ರಪ್ರದೇಶದ 100ಕ್ಕೂಹೆಚ್ಚು ಜನರು ದೀಕ್ಷೆಯನ್ನುಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net