ಕ್ಯೂರಿಯಾಸಿಟಿ ಕಾರ್ನಿವಲ್-2025 ವಿಜ್ಞಾನ ವಸ್ತುಪ್ರದರ್ಶನವನ್ನು ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಬಸವರಾಜ ಪಾಟೀಲ ಉದ್ಘಾಟಿಸಿದರು. ಕ್ಯೂರಿಯಾಸಿಟಿ ಕಾರ್ನಿವಲ್‌ದಲ್ಲಿ 430 ತಂಡಗಳು ಭಾಗವಹಿಸಿದ್ದವು. ಪದವಿಪೂರ್ವ ಹಾಗೂ ಪ್ರೌಢಶಾಲಾ ವಿಭಾಗದ 1,300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರದರ್ಶಿಸಿದ ವಿಜ್ಞಾನ ವಸ್ತುಪ್ರದರ್ಶನ, ರಸಪ್ರಶ್ನೆ, ಆಹಾರಮೇಳ, ಕಲಾಸಂಗಮ, ಕಾಮ್ ಎಕ್ಸ್ಪೋ ಹಾಗೂ ನೃತ್ಯಪ್ರದರ್ಶನ ಎಲ್ಲರ ಗಮನಸೆಳೆದವು. ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಎಸ್.ಎಸ್.ಕವಲಾಪುರೆ, ಎನ್.ಎಸ್.ವಂಟಮುತ್ತೆ, ನಿವೃತ್ತ ಪ್ರಾಚಾರ್ಯ ಡಾ.ಎಂ.ಟಿ.ಕುರಣಿ, ಐಕ್ಯೂಎಸಿ ಸಂಯೋಜಕ ಡಾ.ವಿನಾಯಕ ಮಂಜಲಾಪುರ, ಸಂಘಟನಾ ಕಾರ್ಯದರ್ಶಿ ಮಹೇಶ ಮದಬಾವಿ, ಡಾ.ಸಿದ್ಧಲಿಂಗ ಮಟ್ಟೆಪ್ಪನವರ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸದಾಶಿವ ಹಾದಿಮನಿ, ಡಾ.ಎಸ್.ಎಂ.ಪಾಟೀಲ, ಡಾ.ಲಕ್ಷ್ಮೀಕಾಂತ ನಾಯಕ, ಡಾ.ರಾಮಣ್ಣ, ಡಾ.ಬಾಪೂಗೌಡ ಪಾಟೀಲ, ಮಲ್ಲಿಕಾರ್ಜುನ ಜರಳಿ, ಎಸ್.ಇ.ಅವರಾದಿ, ಸುಷ್ಮಾ ಜಮದಾಡೆ ಇತರರು ಇದ್ದರು. ಪದವಿ ಮಹಾವಿದ್ಯಾಲಯದ ಉಪಪ್ರಾಚಾರ್ಯ ಸುಧೀರ ಕೋಟಿವಾಲೆ ಸ್ವಾಗತಿಸಿದರು. ಡಾ.ಗೀತಾಂಜಲಿ ದೊಡ್ಡಮನಿ ಹಾಗೂ ಪದ್ಮಶ್ರೀ ಚೌಗಲಾ ನಿರೂಪಿಸಿದರು. ಪದವಿಪೂರ್ವ ಪ್ರಾಚಾರ್ಯ ಪ್ರಕಾಶ ಕೋಳಿ ವಂದಿಸಿದರು.