ದಿ.ಪ್ರಭಾಕರ ಬಗಲಿ ಸೇವೆ ಮಾದರಿ

ಇಂಡಿ ಪಟ್ಟಣದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ವತಿಯಿಂದ ದಿ. ಪ್ರಭಾಕರ ಬಗಲಿ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಜ್ಞಾನಪ್ರಭೆ ದಿ.ಪ್ರಭಾಕರ ಬಗಲಿಯವರ ಬದುಕು ಹಾಗೂ ಸಾಧನೆ ಸಂಸ್ಮರಣಾ ಗ್ರಂಥವನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಗ್ರಂಥ ಲೋಕಾರ್ಪಣೆಗೊಳಿಸಿದರು. ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ, ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಸಂಗನಬಸವ ಮಹಾಶಿವಯೋಗಿಗಳು, ರಾಘವೇಂದ್ರ ಕುಲಕರ್ಣಿ, ಡಾ. ಆದರ್ಶ ಬಗಲಿ ಇತರರಿದ್ದರು.
ಇಂಡಿ ಪಟ್ಟಣದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ವತಿಯಿಂದ ದಿ. ಪ್ರಭಾಕರ ಬಗಲಿ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಜ್ಞಾನಪ್ರಭೆ ದಿ.ಪ್ರಭಾಕರ ಬಗಲಿಯವರ ಬದುಕು ಹಾಗೂ ಸಾಧನೆ ಸಂಸ್ಮರಣಾ ಗ್ರಂಥವನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಗ್ರಂಥ ಲೋಕಾರ್ಪಣೆಗೊಳಿಸಿದರು. ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ, ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಸಂಗನಬಸವ ಮಹಾಶಿವಯೋಗಿಗಳು, ರಾಘವೇಂದ್ರ ಕುಲಕರ್ಣಿ, ಡಾ. ಆದರ್ಶ ಬಗಲಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ
  • ಜ್ಞಾನಪ್ರಭೆ ಸಂಸ್ಮರಣಾ ಗ್ರಂಥ ಬಿಡುಗಡೆ
ಇಂಡಿ: ಶಿಕ್ಷಣ ಸಂಸ್ಥೆ ಬೆಳವಣಿಗೆ ಹೊಂದಲು ಪ್ರಾಮಾಣಿಕತೆ ಅತಿ ಮುಖ್ಯ. ದಿ. ಪ್ರಭಾಕರ ಬಗಲಿ ಅವರ ಪ್ರಾಮಾಣಿಕ ಪ್ರಯತ್ನ ಸೇವಾ ಮನೋಭಾವನೆ ಕೆಲಸದಿಂದ ಸಂಸ್ಥೆ ಬೆಳೆಯಲು ಸಾಧ್ಯ ಎಂಬುವುದಕ್ಕೆ ಅವರು ಸಾಕ್ಷಿ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ವತಿಯಿಂದ ದಿ. ಪ್ರಭಾಕರ ಬಗಲಿ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಜ್ಞಾನಪ್ರಭೆ ದಿ.ಪ್ರಭಾಕರ ಬಗಲಿಯವರ ಬದುಕು ಹಾಗೂ ಸಾಧನೆಯ ನೈಜ ಚಿತ್ರಣದ ಸಂಸ್ಮರಣಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ವಿಜಯಪುರ ಜಿಲ್ಲೆ ಶಿಕ್ಷಣದಲ್ಲಿ ಮುಂದುವರೆಯಲು ಬಂಥನಾಳ ಸಂಗನಬಸವ ಶ್ರೀಗಳೆ ಕಾರಣ. ಅವರು ಲಚ್ಯಾಣ ಗ್ರಾಮದಲ್ಲಿ ಶಿಕ್ಷಕ ತರಬೇತಿ ಕೇಂದ್ರ ಆರಂಭಿಸಿದ್ದರಿಂದ ಇಂದು ಜಿಲ್ಲೆಯ ಸಾಕಷ್ಟು ಜನರು ರಾಜ್ಯದ ವಿವಿಧ ಜಿಲ್ಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಿ. ಪ್ರಭಾಕರ ಬಗಲಿಯವರು ಕೇವಲ ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೆ ಸಾಮಾಜಿಕ ಕಳಕಳಿ, ರಾಜಕೀಯ ನಾಯಕತ್ವ, ಆಧ್ಯಾತ್ಮಿಕ, ಧಾರ್ಮಿಕ ಮನೋಭಾವ ಹೊಂದಿದವರಾಗಿದ್ದರು. ಶ್ರೀ ಶಾಂತೇಶ್ವರ ಶಿಕ್ಷಣ ಸಂಸ್ಥೆ ಕಟ್ಟುವಲ್ಲಿ ಬಗಲಿ ಅವರ ನಿಸ್ವಾರ್ಥ ಸೇವೆ ಅಪಾರವಾಗಿದೆ. ಅವರ ಬದುಕು ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ಮಾಜಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಮಾತನಾಡಿ, ದಿ.ಪ್ರಭಾಕರ ಬಗಲಿ ಅವರು ಇಂದು ನಮ್ಮ ಮಧ್ಯ ಇಲ್ಲವಾದರೂ ಅವರು ಮಾಡಿದ ಶಿಕ್ಷಣ ಕ್ಷೇತ್ರದಲ್ಲಿನ ಕಾರ್ಯ ಅವಿಸ್ಮರಣಿಯವಾಗಿದೆ. ಸೃಜನಶೀಲ ವ್ಯಕ್ತಿತ್ವ, ಎಲ್ಲರನ್ನೂ ಗೌರವಿಸುವ ಹೃದಯ ಶ್ರೀಮಂತಿಕೆ ಹೊಂದಿದವರಾಗಿದ್ದರು ಎಂದು ಹೇಳಿದರು.
ಸಂಸ್ಥೆ ಅಧ್ಯಕ್ಷ ನೀಲಕಂಠಗೌಡ ಪಾಟೀಲ ಮಾತನಾಡಿ, ಹಿಂದುಳಿದ ಗಡಿ ತಾಲೂಕಿನಲ್ಲಿ ಬಡ ಮಕ್ಕಳ ಕಲಿಕೆಗೆ ಅನುಕೂಲವಾಗಲು ಇನ್ನೂ ಹೆಚ್ಚಿನ ಕಾಲೇಜುಗಳನ್ನು ತರಲು ಆಸೆ ಇಟ್ಟುಕೊಂಡಿದ್ದರು. ದಿ.ಪ್ರಭಾಕರ ಬಗಲಿ ಅವರು ಕಂಡ ಕನಸು,ಅವರ ದಾರಿಯಲ್ಲಿ ಸಾಗಿ ನನಸು ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು. ಜ್ಞಾನ ಪ್ರಭೆ ಸಂಸ್ಮರಣಾ ಗ್ರಂಥ ಹೊರತರಲು ಶ್ರಮಿಸಿದ ಎಲ್ಲರಿಗೂ ಅಭಿನಂಧಿಸುವುದಾಗಿ ಹೇಳಿದರು.
ಸಂಸ್ಮರಣಾ ಗ್ರಂಥದ ಪ್ರಧಾನ ಸಂಪಾದಕ ರಾಘವೇಂದ್ರ ಕುಲಕರ್ಣಿ, ಸಂಸ್ಥೆ ಉಪಾಧ್ಯಕ್ಷ ಡಾ. ಆದರ್ಶ ಬಗಲಿ ಮಾತನಾಡಿದರು.
ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ, ತಡವಲಗಾ ಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಯರನಾಳ ವಿರಕ್ತಮಠದ ಸಂಗನಬಸವ ಮಹಾಶಿವಯೋಗಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು, ಮಹೇಶ ಅಥಣಿ, ದಯಾಸಾಗರ ಪಾಟೀಲ, ಎಂ.ಎಸ್. ರುದ್ರಗೌಡರ, ಚಂದ್ರಶೇಖರ ಪಾಟೀಲ, ಡಾ. ದೀಪಕ ದೋಶಿ, ಡಾ. ನಿತೀನ ಟಿಕಾರೆ, ಡಿ.ಆರ್.ಶಹಾ, ಪ್ರೋ. ಎನ್.ಜಿ. ಕರೂರ, ಪ್ರಭುಗೌಡ ಪಾಟೀಲ, ವೆಂಕಟೇಶ ಕುಲಕರ್ಣಿ, ಜಟ್ಟೆಪ್ಪ ರವಳಿ, ಸತೀಶ್ಚಂದ್ರ ಕುಲಕರ್ಣಿ, ಎಂ.ಆರ್. ಪಾಟೀಲ, ರವಿ ಕಲ್ಲೂರ, ಶಂಭುಲಿಂಗ ಕರ್ಪೂರಮಠ, ಜಗದೀಶ ಕ್ಷತ್ರಿ, ಮಂಜುನಾಥ ವಂದಾಲ, ಬಸವರಾಜ ತಾಂಬೆ, ಸಾತಪ್ಪ ತೆನ್ನಿಹಳ್ಳಿ, ಭೀಮನಗೌಡ ಪಾಟೀಲ, ಎಂ.ಕೆ. ಕುಲಕರ್ಣಿ, ಸಚಿನಕುಮಾರ ಗಾಂಧಿ, ವರ್ಧನ ಜೋಶಿ, ಆರ್.ವಿ. ದೇಶಪಾಂಡೆ, ಬಾಪುಗೌಡ ಪಾಟೀಲ, ಚಿದಾನಂದ ಕೂಳೆಕುಮಟಗಿ ಸೇರಿ ಸಂಸ್ಥೆ ಪದಾಧಿಕಾರಿಗಳು, ಶಿಕ್ಷಕರು, ಉಪನ್ಯಾಸಕರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net