ರಾಯಚೂರು ಜಿಲ್ಲಾ ಉತ್ಸವದಲ್ಲಿ ಕಲಾ ಪ್ರಪಂಚ ಅದ್ದೂರಿ ಅನಾವರಣ

ಸಾಂಸ್ಕೃತಿಕ ಮೆರವಣಿಗೆಯಲ್ಲಿ ಮನಸೂರೆಗೊಂಡ ಕಲಾ ತಂಡಗಳು.
ಸಾಂಸ್ಕೃತಿಕ ಮೆರವಣಿಗೆಯಲ್ಲಿ ಮನಸೂರೆಗೊಂಡ ಕಲಾ ತಂಡಗಳು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಮುಖ ರಸ್ತೆಗಳಲ್ಲಿ ಮೊಳಗಿದ ಜಾನಪದ ವಾದ್ಯಗಳ ನಿನಾದ
  • ಸಾಂಸ್ಕೃತಿಕ ಪರಂಪರೆಯ ಮೆಲುಕು ಹಾಕಿದ ಜಿಲ್ಲಾ ಉತ್ಸವ
ರಾಯಚೂರು: ರಾಯಚೂರು ಜಿಲ್ಲಾ ಉತ್ಸವ ನಿಮಿತ್ತ ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ವಿಜೃಂಭಣೆಯ ಮೆರವಣಿಗೆಯು ಈ ಭಾಗದ ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ಮೆರುಗು ಸಾರಿತು. ಕರ್ನಾಟಕ ಸಂಘದ ಆವರಣದಿಂದ ಆರಂಭಗೊಂಡ ಮೆರವಣಿಗೆಯು ಕೃಷಿ ವಿಜ್ಞಾನಗಳ ವಿವಿವರೆಗೆ ಅದ್ದೂರಿಯಾಗಿ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ್ ಅವರು ನಾಡದೇವತೆ ತಾಯಿ ಭುವನೇಶ್ವರಿ ದೇವಿಯ ಮೂರ್ತಿಗೆ ಪುಷ್ಪಾರ್ಪಿಸಿ ಗೌರವ ಸಲ್ಲಿಸಿದರು. ಬಳಿಕ ಸ್ವತಃ ಡೊಳ್ಳು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ನಗರದ ಪ್ರಮುಖ ರಸ್ತೆಗಳಾದ ಬಂಗಾರ ಬಜಾರ್, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಹಾಗೂ ಬಸವೇಶ್ವರ ವೃತ್ತದ ಮಾರ್ಗವಾಗಿ ಸಾಗಿತು. ಈ ವೇಳೆ ಬಸವರಾಜ ಸಿಂಧನೂರು ಅವರಿಂದ ವೀರಗಾಸೆ, ಅಂಬರೀಷ್ ಹಸಮಕಲ್ ಅವರಿಂದ ಹಗಲುವೇಷ, ದೇವರಾಜು ಅವರಿಂದ ಚಿಲಿಪಿಲಿ ಗೊಂಬೆ, ಹನುಮಂತ ಮಸ್ಕಿ ಅವರಿಂದ ಕೀಲುಕುದುರೆ, ಲಿಂಗರಾಜ ನೀರಮಾನ್ವಿ ಅವರಿಂದ ಡೊಳ್ಳು ಕುಣಿತ, ಶಾಂತರಾಜು ಆಶಾಪುರ ಅವರಿಂದ ಜಾಂಜ್ ಮೇಳ, ಶಿವರಾಜ ರುದ್ರಾಕ್ಷಿ ದೇವದುರ್ಗ ಅವರಿಂದ ಹಗಲುವೇಷ, ಲಂಕೆಪ್ಪ ಆಮದಿಹಾಳ ಅವರಿಂದ ಕಣಿಹಲಗೆ, ಬಸವರಾಜ ಸಿರವಾರ ಅವರಿಂದ ಡೊಳ್ಳುಕುಣಿತ, ಪಂಪನಗೌಡ ಸಿಂಧನೂರು ಅವರಿಂದ ತಾಷಾರಾಂಡೋಲು ಕಲಾ ಪ್ರಕಾರಗಳು ಪ್ರದರ್ಶನಗೊಂಡವು.

ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನ

ಮೆರವಣಿಗೆಯಲ್ಲಿ ಚಿನ್ನಪ್ಪ ಸಿಂಧನೂರು ತಂಡದ ಹಗಲುವೇಷ, ಗದ್ದೆಪ್ಪ ಭಜಂತ್ರಿ ಅವರಿಂದ ಶಹನಾಯಿ ವಾದನ, ತಮ್ಮಣ್ಣ ರಾಠೋಡ ದೇವದುರ್ಗ ಅವರಿಂದ ಲಂಬಾಣಿ ನೃತ್ಯ, ನಾಗೇಶ ಬೆಂಗಳೂರು ಅವರಿಂದ ಕೊಂಬುಕಹಳೆ, ಹನುಮಂತ್ರಾಯ ಅವರಿಂದ ಗೊರವ ಕುಣಿತ, ಮಾರೆಪ್ಪ ಆತಕೂರ ಅವರಿಂದ ತಮಟೆವಾದನ, ಹಣಮಂತ್ರ ಭಜಂತ್ರಿ ಅವರಿಂದ ನಾಸಿಕಡೊಳ್ಳು, ಮಹೇಶ ಕವಿತಾಳ ಅವರಿಂದ ಹಗಲುವೇಷ, ನೀಲಕಂಠ ಕಲಬುರಗಿ ಅವರ ಗೊಂಬೆ ಕುಣಿತ ಹಾಗೂ ತಿಪ್ಪೇಸ್ವಾಮಿ ಚಿತ್ರದುರ್ಗ ನೇತೃತ್ವದ ಮಹಿಳಾ ಡೊಳ್ಳು ತಂಡದ ನೃತ್ಯ ಮೆರಗು ನೀಡಿದವು.

ಕರಡಿಮಜಲು, ಡೊಳ್ಳು ಕುಣಿತ

ಇದರೊಂದಿಗೆ ಶ್ರೀಕಾಂತ ದಕ್ಷಿಣ ಕನ್ನಡ ಅವರಿಂದ ಕಂಗೀಲು ಕುಣಿತ, ಕೆ.ವಸಂತಕುಮಾರ ಬಳ್ಳಾರಿ ಅವರಿಂದ ಕಹಳೆವಾದನ, ಮಹಾಂತೇಶ ಚಿತ್ರದುರ್ಗ ಅವರಿಂದ ಸೋಮನಕುಣಿತ, ಸಿ.ವೀರೇಶ ವಿಜಯನಗರ ಅವರಿಂದ ನಂದಿಧ್ವಜ ಮತ್ತು ಸಮಾಳ, ವೀರಯ್ಯ ಹಿರೇಮಠ ಕೊಪ್ಪಳ ಅವರಿಂದ ಭದ್ರಕಾಳಿ ಕುಣಿತ, ಮೀನಾಕ್ಷಮ ದಾವಣಗೆರೆ ಅವರಿಂದ ಮಹಿಳಾ ವೀರಗಾಸೆ, ಕಲ್ಲಪ್ಪ ಹಂಚಿನಮನಿ ಧಾರವಾಡ ಅವರಿಂದ ಜಗ್ಗಲಗಿ, ಶ್ರೀನಿವಾಸ ದಾವಣಗೆರೆ ಅವರಿಂದ ಕೋಳಿಕುಣಿತ, ಮಹಾಂತೇಶ ವಾಲಿ ಕೊಣ್ಣೂರ ಅವರಿಂದ ಕರಡಿಮಜಲು ಹಾಗೂ ಮಲ್ಲಿಕಾರ್ಜುನ ಕೊಪ್ಪದ ಅವರ ತಂಡದ ಡೊಳ್ಳುಕುಣಿತ ಕಲಾ ಪ್ರಕಾರಗಳು ಸಾರ್ವಜನಿಕರ ಮನಸೂರೆಗೊಂಡವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net