ಇಲ್ಲಿನ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಟೆಕ್ನಿಕಲ್ ಕ್ಲಬ್ ವತಿಯಿಂದ ತೃತೀಯ ಮತ್ತು ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಟೆಕ್ನೋವಿಷನ್ ಪ್ರಾಜೆಕ್ಟ್ ಪ್ರದರ್ಶನ ಹಾಗೂ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಜಗತ್ತು ಶೈಕ್ಷಣಿಕ ಪಠ್ಯಕ್ರಮಕ್ಕಿಂತ ವೇಗವಾಗಿ ಬದಲಾಗುತ್ತದೆ. ಕಾಲೇಜಿನಲ್ಲಿ ಕಲಿತದ್ದು ಉದ್ಯಮದಲ್ಲಿ ಹಳತಾಗಿರುತ್ತದೆ. ನೂತನ ತಂತ್ರಜ್ಞಾನ ಅರಿಯುತ್ತಲೇ ಇರಬೇಕು ಎಂದರು. ಅಧ್ಯತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ದರ್ಶನಕುಮಾರ ಬಿಳ್ಳೂರ ಮಾತನಾಡಿ, ಸಮಾಜದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಾಜಕ್ಟ್ಗಳಿಗೆ ಹೆಚ್ಚು ಮಹತ್ವವಿದೆ. ಕೌಶಲ ಹೊಂದಿದ್ದರೆ ಅವಕಾಶಗಳು ಸಿಗುತ್ತವೆ ಎಂದರು.
ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು. ಡಾ.ವಿನೋದ ಬಿರಾದರ ಪ್ರಾಸ್ತಾವಿಕ ಮಾತನಾಡಿದರು. ವಿಜಯ ಇಟ್ಟನ್ನವರ, ಶೀತಲಕುಮಾರ ದೇವಲಾಪುರ, ಮಹೇಂದ್ರ ಕುರಬೇಟ್, ರಾಹುಲ ಪಾಲಕರ, ಅಯ ಹಿರೇಮಠ, ಶೆಣಿಕ ಸಂಯೋಜಕ ಕುಮಾರ ಚೌಗಲಾ, ವಿಭಾಗ ಮುಖ್ಯಸ್ಥ ಪ್ರದಿಪ ಹೊದ್ಲೂರ, ಡಾ.ಜಗನ್ನಾಥ ಜಾಧವ, ಸಂಗೀತಾ ವಾಟೆಗಾಂವಕರ, ಡಾ.ವೀರಣ್ಣ ಮೋದಿ, ಡಾ.ಸಚಿನ ಮೆಕ್ಕಳಕಿ, ಅಭಿಷೇಕ ಬಡಿಗೇರ, ಕವಿತಾ ಕಣವಿ, ಪ್ರಜ್ವಲ ಬಡಿಗೇರ ಇತರರಿದ್ದರು.