ಭಜನಾ ಮಂಡಳಿ ಕಾರ್ಯ ಶ್ಲಾಘನೀಯ

ಕೆಂಭಾವಿಯ ಉತ್ತರಾದಿ ಮಠದಲ್ಲಿ ಸೋಮವಾರ ಪ್ರಮೋದಿನಿ ಮಹಿಳಾ ಭಜನಾ ಮಂಡಳಿ ಸದಸ್ಯರು ನಿತ್ಯ ನಡೆಸಿಕೊಂಡು ಬರುತ್ತಿದ್ದ 33 ದಾಸರ ಹಾಡುಗಳ ಸಮರ್ಪಣಾ ಕಾರ್ಯಕ್ರಮದ ನಿಮಿತ್ತ ಪಲ್ಲಕ್ಕಿ ಉತ್ಸವ ನಡೆಯಿತು. ಸುಮಂಗಲಾ ಕುಲಕರ್ಣಿ, ಸುರೇಖಾ ಜಹಾಗೀರದಾರ, ಭಾರತಿಬಾಯಿ ಕುಲಕರ್ಣಿ, ದೀಪಾ ಕುಲಕರ್ಣಿ, ಭೂದೇವಿ ಚನ್ನೂರ, ರಮ್ಯಾ ದೇಶಪಾಂಡೆ ಇತರರಿದ್ದರು.
ಕೆಂಭಾವಿಯ ಉತ್ತರಾದಿ ಮಠದಲ್ಲಿ ಸೋಮವಾರ ಪ್ರಮೋದಿನಿ ಮಹಿಳಾ ಭಜನಾ ಮಂಡಳಿ ಸದಸ್ಯರು ನಿತ್ಯ ನಡೆಸಿಕೊಂಡು ಬರುತ್ತಿದ್ದ 33 ದಾಸರ ಹಾಡುಗಳ ಸಮರ್ಪಣಾ ಕಾರ್ಯಕ್ರಮದ ನಿಮಿತ್ತ ಪಲ್ಲಕ್ಕಿ ಉತ್ಸವ ನಡೆಯಿತು. ಸುಮಂಗಲಾ ಕುಲಕರ್ಣಿ, ಸುರೇಖಾ ಜಹಾಗೀರದಾರ, ಭಾರತಿಬಾಯಿ ಕುಲಕರ್ಣಿ, ದೀಪಾ ಕುಲಕರ್ಣಿ, ಭೂದೇವಿ ಚನ್ನೂರ, ರಮ್ಯಾ ದೇಶಪಾಂಡೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಉಪನ್ಯಾಸಕ ನರಸಿಂಹರಾವ ಕುಲಕರ್ಣಿ ಬಣ್ಣನೆ
  • ದಾಸರ ಹಾಡುಗಳ ಸಮರ್ಪಣಾ
ಕೆಂಭಾವಿ: ಅಧಿಕ ಮಾಸ ನಿಮಿತ್ತ ಕಳೆದ ಒಂದು ತಿಂಗಳಿಂದ ಪಟ್ಟಣದ ಉತ್ತರಾದಿ ಮಠದ ಪ್ರಮೋದಿನಿ ಮಹಿಳಾ ಭಜನಾ ಮಂಡಳಿಯ ಸದಸ್ಯರು ನಿತ್ಯ ನಡೆಸಿಕೊಂಡು ಬರುತ್ತಿದ್ದ 33 ದಾಸರ ಹಾಡುಗಳ ಸಮರ್ಪಣಾ ಕಾರ್ಯಕ್ರಮ ಸೋಮವಾರ ಉತ್ತರಾದಿ ಮಠದಲ್ಲಿ ನೆರವೇರಿತು.
ನಿತ್ಯ ಭಕ್ತರ ಕರೆಯ ಮೇರೆಗೆ ಅವರ ಮನೆಗಳಿಗೆ ತೆರಳಿ ಗೌರಿ ಪ್ರತಿಷ್ಠಾಪಿಸಿ ದಾಸರ 33 ಹಾಡುಗಳ ಮೂಲಕ ಭಗವಂತನ ಸ್ಮರಣೆ ಧ್ಯಾನ ಮಾಡುತ್ತಿದ್ದ ಭಜನಾ ಮಂಡಳಿ ಕಾರ್ಯ ಅತ್ಯಂತ ಭಕ್ತಿದಾಯಕವಾಗಿತ್ತು. ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಬೆಳಗ್ಗೆ ಶ್ರೀಮಠದಲ್ಲಿ ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಅಲಂಕಾರ, ಭಜನೆ, ಪಲ್ಲಕ್ಕಿ ಉತ್ಸವ, ಲ್ಮ ಶೋಭನೆ, ತೀರ್ಥ ಪ್ರಸಾದ ಸೇರಿ ಹಲವು ಧರ್ಮಿಕ ಕಾರ್ಯಕ್ರಮ ಜರುಗಿದವು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ನಿವೃತ್ತ ಉಪನ್ಯಾಸಕ ನರಸಿಂಹರಾವ ಕುಲಕರ್ಣಿ, ಅಧಿಕಸ್ಯ ಅಧಿಕಂ ಫಲಂ ಎಂಬಂತೆ ಪುರುಷೋತ್ತಮ ಮಾಸವೆಂದು ಕರೆಸಿಕೊಳ್ಳುವ ಈ ಅಧಿಕ ಮಾಸದಲ್ಲಿ ನಿತ್ಯ ಭಗವಂತನನ್ನು ಸ್ತೋತ್ರ, ಹಾಡುಗಳ ಮೂಲಕ ಸ್ಮರಣೆ ಮಾಡುವುದು ಅತ್ಯಂತ ಪವಿತ್ರ ಕಾರ್ಯ. ಈ ಮಾಸದಲ್ಲಿ ನಮ್ಮ ಮಹಿಳಾ ಭಜನಾ ಮಂಡಳಿಯ ಸದಸ್ಯರು ಕೈಗೊಂಡ ಈ ಹರಿನಾಮ ಸ್ಮರಣೆ ಅತ್ಯಂತ ಶ್ಲಾನೀಯವಾಗಿದ್ದು ನಿತ್ಯ 33 ಹಾಡುಗಳ ಮೂಲಕ ಭಕ್ತಿಯ ದಾರಿ ತೋರಿದ ಎಲ್ಲ ಭಕ್ತರಿಗೆ ಶುಭವಾಗಲಿ ಎಂದರು.
ಚಂದ್ರಕಲಾ ಕುಲಕರ್ಣಿ, ಸುಧಾಬಾಯಿ ಜೋಷಿ, ಸುಮಂಗಲಾ ಕುಲಕರ್ಣಿ, ಸುರೇಖಾ ಜಹಾಗೀರದಾರ, ಮನೋರಮಾ ಕುಲಕರ್ಣಿ, ಲತಾಬಾಯಿ ಕುಲಕರ್ಣಿ, ಭಾರತಿಬಾಯಿ ಕುಲಕರ್ಣಿ, ದೀಪಾ ಕುಲಕರ್ಣಿ, ಭೂದೇವಿ ಚನ್ನೂರ, ರಮ್ಯಾ ದೇಶಪಾಂಡೆ, ಗೀತಾಬಾಯಿ ನಾಡಿಗೇರ, ರತ್ನಾಬಾಯಿ ಆಲಗೂರ, ರಾಧಿಕಾ ಜೋಷಿ, ರಮಾ ಕುಲಕರ್ಣಿ, ಸುಜಾತಾ ಪುರೋಹಿತ, ಶಾಂಭವಿ ನಾಡಿಗೇರ, ಚಂದ್ರಕಲಾ ನಗನೂರ, ರಾಧಾಬಾಯಿ ಕುಲಕರ್ಣಿ, ಮಾಲಾಬಾಯಿ ತಿಳಗೂಳ ಹಲವರಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net