ಮಹಿಳೆ ಸರ, ಓಲೆ ಕದ್ದೋಯ್ದ ಖದಿಮ

The woman is a scoundrel, the old man who stole the scoundrel
The woman is a scoundrel, the old man who stole the scoundrel
Published on
ಮುಳಬಾಗಿಲು: ತಾಲೂಕಿನ ತಾಯಲೂರು ಮುಖ್ಯರಸ್ತೆಯ ಎಮ್ಮೇನತ್ತ ಗ್ರಾಮದ ಬಳಿ ಶನಿವಾರ ಜಮೀನಿಗೆ ತೆರಳುತ್ತಿದ್ದ ಒಂಟಿ ಮಹಿಳೆ ಅಡ್ಡಗಟ್ಟಿದ ಖದೀಮ 20 ಗ್ರಾಂ ಚಿನ್ನದ ಸರ, ಓಲೆ ಕಸಿದು ಪರಾರಿಯಾಗಿದ್ದಾನೆ.
ಎಮ್ಮೇನತ್ತ ಗ್ರಾಮದ ನಿವಾಸಿ ಕಾಂತಮ್ಮ ತಮ್ಮ ತೋಟಕ್ಕೆಂದು ಮುಖ್ಯ ರಸ್ತೆಯ ಅಂಜನಾದ್ರಿ ಪ್ರೌಢಶಾಲೆ ದಾಟಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾಗ ಮುಖ್ಯರಸ್ತೆ ಮಾವಿನ ತೋಟದಲ್ಲಿ ಅಡಗಿಕೊಂಸಿದ್ದ ಕಳ್ಳ ಕಾಂತಮ್ಮ ಮಾಂಗಲ್ಯ ಸರ ಕಿತ್ತುಕೊಂಡಿದ್ದಾನೆ. ಈ ವೇಳೆ ಕುತ್ತಿಗೆಗೆ ಪೆಟ್ಟಾಗಿ ಕಾಂತಮ್ಮ ಪ್ರಜ್ಞಾಹಿನರಾಗಿದ್ದಾರೆ. ಬಳಿಕ ಕಿವಿ ಓಲೆ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಎಸ್​ಪಿ ಕನ್ನಿಕಾ ಸಿಕ್ರಿವಾಲ್​, ವೃತ್ತ ನಿರೀಕ್ಷಕ ಕೆ.ಜಿ.ಸತೀಶ್​, ಪಿಎಸ್​ಐ ಅರುಣ್​ ಪಾಟೀಲ್​ಗೌಡ ಪ್ರತ್ಯೆಕ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಳಬಾಗಿಲು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net