ತುಳಿತಕ್ಕೆ ಒಳಗಾದವರ ಧ್ವನಿ ಪೊ.ಕೃಷ್ಣಪ

ಶಹಾಬಾದ್​ನಲ್ಲಿ ದಸಂಸ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅವರ 88ನೇ ಜಯಂತಿ ಕಾರ್ಯಕ್ರಮವನ್ನು ನಿವೃತ್ತ ನ್ಯಾಯಾಧೀಶ ಜಿ.ಕೆ.ಗೋಖಲೆ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಉದ್ಘಾಟಿಸಿದರು. ಎ.ಬಿ.ಹೊಸಮನಿ, ಬಸಣ್ಣ ಸಿಂಗೆ, ಭೀಮಶಾ ಖನ್ನಾ, ಸುರೇಶ ಮೆಂಗನ್​ ಇತರರಿದ್ದರು.
ಶಹಾಬಾದ್​ನಲ್ಲಿ ದಸಂಸ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅವರ 88ನೇ ಜಯಂತಿ ಕಾರ್ಯಕ್ರಮವನ್ನು ನಿವೃತ್ತ ನ್ಯಾಯಾಧೀಶ ಜಿ.ಕೆ.ಗೋಖಲೆ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಉದ್ಘಾಟಿಸಿದರು. ಎ.ಬಿ.ಹೊಸಮನಿ, ಬಸಣ್ಣ ಸಿಂಗೆ, ಭೀಮಶಾ ಖನ್ನಾ, ಸುರೇಶ ಮೆಂಗನ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ನ್ಯಾಯಾಧೀಶ ಬಿ.ಕೆ.ಗೋಖಲೆ ಸ್ಮರಣೆ
  • ಶಹಾಬಾದ್​ನಲ್ಲಿ ದಸಂಸ ಸಂಸ್ಥಾಪಕರ ಜಯಂತಿ
ಶಹಾಬಾದ್​: ಸಮಾಜದಲ್ಲಿ ತುಳಿತಕ್ಕೆ ಒಳಗಾದ ಎಲ್ಲ ಜಾತಿಯವರನ್ನು ಮೇಲಕ್ಕೆತ್ತುವ ಮಹತ್ತರ ಉದ್ದೇಶದಿಂದ ಪೊ.ಬಿ. ಕೃಷ್ಣಪ್ಪ ಅವರು ದಲಿತ ಸಂಷ ಸಮಿತಿ ಸ್ಥಾಪಿಸಿ ನಿರಂತರ ಹೋರಾಟ ಮಾಡಿದ್ದರು ಎಂದು ನಿವೃತ್ತ ನ್ಯಾಯಾಧೀಶ ಜಿ.ಕೆ. ಗೋಖಲೆ ಹೇಳಿದರು.
ನಗರದ ಶಮ್ಸ್​ ಸಭಾಗೃಹದಲ್ಲಿ ಮಂಗಳವಾರ ಏರ್ಪಡಿಸಿದ್ದ ದಸಂಸ ಸಂಸ್ಥಾಪಕ ಪೊ.ಬಿ. ಕೃಷ್ಣಪ್ಪ ಅವರ 88ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಅವರು, ಡಾ.ಬಿ.ಆರ್​. ಅಂಬೇಡ್ಕರ್​ ವಿಚಾರಗಳೊಂದಿಗೆ ದಲಿತರು, ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಡಲು ಶ್ರಮಿಸಿದ್ದ ಮಹಾನ್​ ಹೋರಾಟಗಾರ ಎಂದು ಬಣ್ಣಿಸಿದರು.
ಪ್ರೊ.ಕೃಷ್ಣಪ್ಪ ಕಟ್ಟಿದ ದಸಂಸ ಮುಂದಿನ ದಿನಗಳಲ್ಲಿ ನಾಯಕರ ವೈಯಕ್ತಿಕ ಪ್ರತಿಷ್ಠೆಯಿಂದ 20 ಸಂಟನೆಗಳಾಗಿ ಹರಿದು ಹಂಚಿ ಹೋಗಿದ್ದರಿಂದ ಅಂಬೇಡ್ಕರ್​ ವಿಚಾರಗಳೊಂದಿಗೆ ನಡೆಸಿದ ಹೋರಾಟ ದಿಕ್ಕು ತಪ್ಪುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಖಂಡ ಎ.ಬಿ. ಹೊಸಮನಿ ಮಾತನಾಡಿ, ಪೊ.ಬಿ. ಕೃಷ್ಣಪ್ಪ ನೇತೃತ್ವದಲ್ಲಿ ದಸಂಸ ಪ್ರಬುದ್ಧ ಹೋರಾಟಗಳನ್ನು ನಡೆಸುತ್ತಿದ್ದಾಗ ಸರ್ಕಾರಗಳು ನಡುಗುತ್ತಿದ್ದವು. ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತಿರುವುದರಿಂದ ದಸಂಸ ಮುಖಂಡರಿಗೆ ವಿವಿಧ ರಾಜಕೀಯ ಸ್ಥಾನಮಾನ ನೀಡಿ ಹೋರಾಟದ ದಿಕ್ಕು ತಪ್ಪಿಸಲಾಯಿತು ಎಂದು ಕಳವಳ ವ್ಯಕ್ತಪಡಿಸಿದರು.
ಇಂದು ದಲಿತರನ್ನು ಎಡ&ಬಲ, ಒಳಮೀಸಲಾತಿ ಹೆಸರಿನಲ್ಲಿ ಒಡೆದು ಹಾಕಲಾಗುತ್ತಿದೆ. 20ಕ್ಕೂ ಹೆಚ್ಚಿರುವ ದಸಂಸ ಸಂಟನೆಗಳು ಜನರಲ್ಲಿ ರಾಜಕೀಯ ಪ್ರೆ ಮೂಡಿಸುವಲ್ಲಿ ವಿಫಲವಾಗುತ್ತಿವೆ. ಸಂಟನೆಗಳು ಇಬ್ಭಾಗವಾದರೂ ವಿಚಾರಗಳು ಇಬ್ಭಾಗವಾಗದಂತೆ ಯೋಚಿಸಬೇಕು ಎಂದು ಮನವಿ ಮಾಡಿದರು.
ಪ್ರಮುಖರಾದ ಬಸಣ್ಣ ಸಿಂಗೆ, ಭೀಮಶಾ ಖನ್ನಾ, ಡಿ.ಡಿ. ಓಣಿ ಮಾತನಾಡಿದರು. ಸುರೇಶ ಮೆಂಗನ್​ ಅಧ್ಯಕ್ಷತೆ ವಹಿಸಿದ್ದರು. ಯಶ್ವಂತ ಸಿಂಧೆ, ಶರಣಬಸಪ್ಪ ಧನ್ನಾ, ಶಿವಯೋಗಿ ಬಣಕಾರ, ಸಿದ್ರಾಮ ಉದಯಕರ್​, ಭಗವಾನ ದಂಡಗುಲಕರ್​, ಶರಣು ಪಗಲಾಪುರ, ರವಿ ಬೆಳಮಗಿ, ರಾಹುಲ್​ ಚಲುವಾದಿ, ರಾಜು ನಾಟೀಕಾರ, ನಾಗರಾಜ ವಾಮೋರೆ, ಪರಶುರಾಮ ಚಲುವಾದಿ, ಶರಣು ನಾಟೀಕಾರ, ಮಹೇಶ ಕಾಂಬಳೆ ಇತರರಿದ್ದರು.
ಬಸವರಾಜ ಮಯೂರ ನಿರೂಪಣೆ ಮಾಡಿದರು. ಮರಲಿಂಗ ಯಾದಗಿರಿ ಸ್ವಾಗತಿಸಿದರು. ಶ್ರೀಧರ ಕೊಲ್ಲೂರ ವಂದಿಸಿದರು. ರಾಜು ಜಂಬಗಿ, ಭಾವನಾ, ಬಸವರಾಜ ಮಯೂರ ಕ್ರಾಂತಿಗೀತೆಗಳನ್ನು ಹಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net