_1785599038254.webp?w=480&auto=format%2Ccompress&fit=max)
_1785599038254.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ವೀರಶೈವ ಲಿಂಗಾಯತಪರಂಪರೆಗೆ ಪ್ರಾಚೀನ ಇತಿಹಾಸವಿದ್ದು,ಸನಾತನ ಗುರುಪರಂಪರೆಯನ್ನುಹೊಂದಿದೆ ಎಂದು ಉಜ್ಜಯಿನಿ ಜಗದ್ಗುರುಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರಶಿವಾಚಾರ್ಯ ಭಗವತ್ಪಾದರುಹೇಳಿದ್ದಾರೆ.
ಬಸವನಗುಡಿಬುಲ್ ಟೆಂಪಲ್ ರಸ್ತೆಯಲ್ಲಿರುವಶ್ರೀನಿಜಗುಣರ ಕಲ್ಯಾಣ ಮಂಟಪದಲ್ಲಿಶ್ರೀಮದ್ ಉಜ್ಜಯಿನಿ ಜಗದ್ಗುರುಗಳಪೂಜಾ ಸಮಿತಿ ಹಮ್ಮಿಕೊಂಡಿದ್ದಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿಆಶೀರ್ವಚನ ನೀಡಿದರು.
ವೀರಶೈವಲಿಂಗಾಯತ ಧರ್ಮಕ್ಕೆ ಯುಗ ಯುಗಗಳಹಿನ್ನೆಲೆ ಇದೆ. ಆದಿಜಗದ್ಗುರು ಪಂಚಾಚಾರ್ಯರು,ಅನಾದಿ ಜಗದ್ಗುರುಸದಾಶಿವನಿಂದ ದೀಕ್ಷೆ-ಉಪದೇಶವನ್ನುಪಡೆದು ಭೂತಲದಲ್ಲಿ ವೀರಶೈವಸಿದ್ಧಾಂತವನ್ನು ಸಂಸ್ಥಾಪಿಸಿದ್ದಾರೆ.ಯಾವುದೇ ಜಾತಿ,ಮತ, ಗಂಡು,ಹೆಣ್ಣು ಇತ್ಯಾದಿಭೇದವಿಲ್ಲದೆ ಪ್ರತಿಯೊಬ್ಬಜೀವಾತ್ಮನು ಪರಮಾತ್ಮನಾಗಲುಬೇಕಾದ ಶಿವಾದ್ವೈತ ಸಿದ್ಧಾಂತವನ್ನುಭೋದಿಸಿದ್ದಾರೆ. ಇಂತಹಧರ್ಮದ ತಳಹದಿಯ ಮೇಲೆ 12ನೇಶತಮಾನದಲ್ಲಿ ಬಸವಾದಿ ಶರಣರುತತ್ವಪ್ರಸಾರ ಮಾಡುವ ಕಾರ್ಯಮಾಡಿದ್ದಾರೆ ಎಂದು ಜಗದ್ಗುರುಗಳುವಿವರಿಸಿದರು.
ಸಮಾರಂಭದಲ್ಲಿವಿಭೂತಿಪುರ ಮಠದ ಡಾ.ಮಹಾಂತಲಿಂಗಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತನೀಡಿದರು. ರಾಜಾಪುರ,ನಾಗಲಾಪುರ,ಬೆಳ್ಳಾವಿ ಮತ್ತಿತರಮಠಗಳ ಶ್ರೀಗಳು ಉಪಸ್ಥಿತರಿದ್ದರು.ಕೇಂದ್ರ ಸಚಿವವಿ.ಸೋಮಣ್ಣ,ಅಭಾವೀಮ ಯುವ ಘಟಕದರಾಜ್ಯಾಧ್ಯಕ್ಷ ಮನೋಹರ ಅಬ್ಬಿಗೆರೆ,ಮುಖಂಡರಾದ ಹರೀಶಆರಾಧ್ಯ, ವಿದ್ವಾನ್ಚನ್ನಬಸವಾರಾಧ್ಯ, ಸಮಿತಿಅಧ್ಯಕ್ಷ ಷಡಕ್ಷರಿ ಶಾಸ್ತ್ರಿ,ಉಪಾಧ್ಯಕ್ಷ ಶಿವಶಂಕರಶಾಸ್ತ್ರಿ, ಕಾರ್ಯದರ್ಶಿನಂದೀಶ ಬಿಜ್ಜಳ್ಳಿ, ಭಾರತಿಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.
ಪಂಚಪೀಠಗಳು ಧರ್ಮಜಾಗೃತಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿವೆ. ವೀರಶೈವ ಲಿಂಗಾಯತ ಮಠಗಳು ಸಮಾಜದ ಎಲ್ಲ ವರ್ಗದ ಹಿತಕ್ಕಾಗಿ ತ್ರಿವಿಧ ದಾಸೋಹದ ಮೂಲಕ ಸಮಾಜದಲ್ಲಿ ಕೆಲಸ ಮಾಡುತ್ತಿವೆ. ಇಂತಹ ಕಾರ್ಯಕ್ರಮಗಳಿಂದ ಧರ್ಮ ಜಾಗೃತಿಯಾಗಲಿದೆ.
— ವಿ.ಸೋಮಣ್ಣ, ಕೇಂದ್ರ ಸಚಿವರು