

ಪ್ರಮುಖ ಮುಖ್ಯಾಂಶಗಳು
ಹೋಟೆಲ್, ಬೇಕರಿ, ಅಂಗಡಿಯ ಮಾಲೀಕರಿಗೆ ಸ್ವಚ್ಛತೆ ಕಾಪಾಡಲು ಹೇಳಿ ಹೇಳಿ ಸಾಕಾಗಿದೆ. ಹೋಟೆಲ್ವೊಂದಕ್ಕೆ ಭೇಟಿ ನೀಡಿದಾಗ ಸಾಂಬಾರ್ನಲ್ಲಿ ಜಿರಳೆ ಸಿಕ್ಕಿದೆ. ಮಾಲೀಕ ಕ್ಷಮೆಯಾಚಿಸಿದ್ದು, ದಂಡ ವಿಧಿಸಿ ಮಾನವೀಯತೆ ದೃಷ್ಟಿಯಿಂದ ಎಚ್ಚರಿಕೆ ನೀಡಲಾಗಿದೆ. ಮತ್ತೊಮ್ಮೆ ಮತ್ತೆ ಪುನರಾವರ್ತನೆಯಾದರೆ ಕಾನೂನು ಕ್ರಮ ಕೈಗೊಂಡು ಹೋಟೆಲ್ ಮುಚ್ಚಿಸಲಾಗುವುದು.