ಮೂಲಸೌಲಭ್ಯದಿಂದ ಸೊರಗುತ್ತಿವ ನಿಲ್ದಾಣ

ಅವ್ಯವಸ್ಥೆಯ ಆಗರವಾಗಿರುವ ಕೆಂಭಾವಿ ಬಸ್ ನಿಲ್ದಾಣದಲ್ಲಿ ಸರಿಯಾಗಿ ಕೂಡಲು ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪ್ಲಾಟ್-Áರ್ಮ ಬಳಿಯ ಮೆಟ್ಟಿಲುಗಳ ಮೇಲೆ ಕುಳಿತಿರುವುದು.
ಅವ್ಯವಸ್ಥೆಯ ಆಗರವಾಗಿರುವ ಕೆಂಭಾವಿ ಬಸ್ ನಿಲ್ದಾಣದಲ್ಲಿ ಸರಿಯಾಗಿ ಕೂಡಲು ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪ್ಲಾಟ್-Áರ್ಮ ಬಳಿಯ ಮೆಟ್ಟಿಲುಗಳ ಮೇಲೆ ಕುಳಿತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಸಾರಿಗೆ ಅಽಕಾರಿಗಳ ವಿರುದ್ಧ ಜನರ ಆಕ್ರೋಶ
  • ಕುಡಿಯುವ ನೀರು, ಶೌಚಗೃಹಕ್ಕೆ ಒತ್ತಾಯ
ಕೆಂಭಾವಿ:

ಪಟ್ಟಣದ ಬಸ್ ನಿಲ್ದಾಣದಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಏರುತ್ತಿದ್ದು, ಸರಿಯಾದ ಕೂಡಲು ಸ್ಥಳವಿಲ್ಲದೆ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಎಸ್.ಎಂ. ಕೃಷ್ಣಾ ಉಪ ಮುಖ್ಯಮಂತ್ರಿಯಾಗಿದ್ದಾಗ ಅಂದರೆ ಕಳೆದ ೩೦ ವರ್ಷಗಳ ಹಿಂದೆ ಉದ್ಘಟನೆಗೊಂಡ ಈ ಬಸ್ ನಿಲ್ದಾಣ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೆ ಸೊರಗುತ್ತಿದೆ.

ನಿಗಮಕ್ಕೆ ಆದಾಯ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪ್ರಯಾಣಿಕರ ಹಿತದೃಷ್ಟಿ ಕಾಪಾಡಲು ನಿಗಮ ಸಂಪೂರ್ಣ ವಿ-Àಲವಾಗಿದೆ ಎಂದು ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿಂದ ನಗರ ಪಟ್ಟಣ ಸೇರಿ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಿಗೆ ನಿತ್ಯ ಬಸ್ ಸಂಚಾರ ಮಾಡುತ್ತಿದ್ದು ಬಸ್ ನಿಲ್ದಾಣದಲ್ಲಿ ಕೂಡಲು ಬೆರಣಿಕೆಯಷ್ಟು ಕಲ್ಲಿನ ಹಾಸು ಬಿಟ್ಟರೆ ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುವ ಈ ಬಸ್ ನಿಲ್ದಾಣದಲ್ಲಿ ಅನೇಕ ಪ್ರಯಾಣಿಕರು ಬಸ್ ನಿಲ್ಲುವ ಪ್ಲಾಟ್-Áರ್ಮ ಬಳಿಯ ಮೆಟ್ಟಿಲು ಮೇಲೆ ಕುಳಿತುಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಬಸ್ ನಿಲ್ದಾಣದ ಜÁಗ ಸಾಕಷ್ಟಿದ್ದರೂ ಬಸ್ ಸಾರಾಗವಾಗಿ ಬರಲು ಸುಸಜ್ಜಿತ ರಸ್ತೆ ವ್ಯವಸ್ಥೆ, ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು, ಶೌಚಗೃಹದ ವ್ಯವಸ್ಥೆ ಹೀಗೆ ಹತ್ತಾರು ಸಮಸ್ಯೆಯಿಂದ ಬಳಲುತ್ತಿರುವ ನಿಲ್ದಾಣಕ್ಕೆ ಕಾಯಕಲ್ಪದ ಅಗತ್ಯವಿದೆ. ಹೀಗಾಗಿ ಕೂಡಲೇ ನಿಗಮದ ಅಽಕಾರಿಗಳು ಮತ್ತು ಜನಪ್ರತಿನಿಽಗಳು ವಿಶೇಷ ಗಮನ ಹರಿಸಿ ಬಸ್ ನಿಲ್ದಾಣಕ್ಕೆ ಸರಿಯಾದ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಜನರ ಒತ್ತಾಯವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net