ಶುದ್ಧ ಬುದ್ಧಿ ಸಹಿತತ್ವವೇ ಅನುಭವಾಮೃತ

ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಲ್ಪಾ ಭಸ್ಮೆ ಉಪನ್ಯಾಸ ನೀಡಿದರು. ವಿ.ಸಿ. ನಾಗಠಾಣ ಇದ್ದಾರೆ.
ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಲ್ಪಾ ಭಸ್ಮೆ ಉಪನ್ಯಾಸ ನೀಡಿದರು. ವಿ.ಸಿ. ನಾಗಠಾಣ ಇದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿಲ್ಪಾ ಭಸ್ಮೆ ಹೇಳಿಕೆ
  • ಉಪನ್ಯಾಸ

ವಿಜಯಪುರ : ಇಹಲೋಕ ಪರಲೋಕದಲ್ಲೂ ಸುಖಪರೀಕ್ಷೆಯ ಬಗ್ಗೆ ವಿರಕ್ತ ಭಾವ ತಳೆಯುವುದೇ ಯಮ. ಬ್ರಹ್ಮ ಜ್ಞಾನದ ಚಿಂತನೆಯಲ್ಲಿ ಸಹಜವಾದ ಆಸಕ್ತಿ ಹೊಂದಿರುವುದೇ ನಿಯಮ. ಬಾಹ್ಯ ವಸ್ತುಗಳ ಬಗ್ಗೆ ಅಲಕ್ಷ್ಯ ಭಾವದಿಂದಿರುವುದೇ ಆಸನ ಮತ್ತು ಇಂದ್ರಿಯಗಳನ್ನು ಸ್ವಾಧೀನಗೊಳಿಸಿಕೊಳ್ಳುವುದೇ ಪ್ರತ್ಯಾಹಾರ ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿಲ್ಪಾ ಭಸ್ಮೆ ಹೇಳಿದರು.

ನಗರದ ಜ್ಞಾನ ಯೋಗಾಶ್ರಮದಲ್ಲಿ ಶನಿವಾರ ನಡೆದ ಮಹಾಲಿಂಗ ರಂಗರ ಅನುಭವಾ ಮೃತದ ಆರನೇಯ ಅಧ್ಯಾಯವಾದ ಸಪ್ತ ಭೂಮಿಕಿಗಳ ಅಭ್ಯಾಸದ ರಾಜಯೋಗದ ಅಷ್ಟಾಂಗ ಗಳು ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ಶುದ್ಧ ಬುದ್ಧಿ ಮತ್ತು ಹೃದ್ಯ ಭಾವಗಳ ಸಹಿತತ್ವ ಈ ಅನುಭವಾಮೃತವಾಗಿದ್ದು, ನಮ್ಮ ಜೀವನದಲ್ಲಿ ನಡೆಯುವ ಒಂದೊಂದು ಘಟನೆಯು ಕೂಡ ಮನುಷ್ಯನನ್ನು ಜ್ಞಾನಿಯ ನ್ನಾಗಿಸುತ್ತದೆ. ಮನುಷ್ಯ ಯಾವಾಗಲೂ ಸಮತ್ವದ ಸುಖವನ್ನೇ ಸವಿಯುತ್ತ ಅದರ ಸವಿಯನಷ್ಟೇ ಎದುರು ನೋಡುತ್ತಿರಬಾರದು. ಬದಲಿಗೆ ತಿಳಿವಳಿಕೆಯಿಂದ ಬದುಕು ಸಾಗಬೇಕು. ಅನವಶ್ಯಕ ಆಸಕ್ತಿ ಇಲ್ಲದವನಾಗಿರಬೇಕು. ಅದುವೇ ರಾಜಯೋಗ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ವಿ.ಸಿ. ನಾಗಠಾಣ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ವ್ಯಕ್ತಿಯ ವ್ಯಕ್ತಿತ್ವದ ವಿಕಾಸನಕ್ಕಾಗಿ ನೈತಿಕ ನಿಯಮಗಳು,

ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ವ್ಯಕ್ತಿಗತ ಶುದ್ಧತೆ, ಸಂತೋಷ ಮತ್ತು ಸ್ವಯಂ ಅಧ್ಯಯನ ಮುಂತಾದ ನೈತಿಕ ಬಲ ಹೆಚ್ಚಿಸಬಹುದಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net