ಮುಳಬಾಗಿಲಿನ labour day ಬಸ್ ನಿಲ್ದಾಣದ ಸಮೀಪದ ಸಿಪಿಐ(ಎಂ) ಕಚೇರಿಯ ಮುಂಭಾಗಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಯಲ್ಲಿ ತಾಲೂಕು ಸಿಪಿಐ(ಎಂ) ಕಾರ್ಯದರ್ಶಿ ಕಾಂ. ಪುಣ್ಯಹಳ್ಳಿ ಪಿ.ಆರ್.ಶಂಕರ್, ಸಿಐಟಿಯು ಮುಖಂಡ ಗುರಪ್ಪ, ರಾಜ್ಯ ಎಸ್ಎಫ್ಐ ಅಧ್ಯಕ್ಷ ಅಂಬ್ಲಿಕಲ್ ಶಿವಪ್ಪ ಇದ್ದರು.
Published on:
Copied
Follow Us
ಮುಳಬಾಗಿಲು: ಹಿಂದಿನ ಕಾಲದಲ್ಲಿ ಕಾರ್ಮಿಕರು ದಿನಕ್ಕೆ 12 ರಿಂದ 15 ಗಂಟೆ labour day ಅಮಾನವೀಯವಾಗಿ ಕೆಲಸ ಮಾಡಬೇಕಿತ್ತು. ಅದನ್ನು ಹೋಗಲಾಡಿಸಿ ಕಾರ್ಮಿಕರ ಹಿತಕ್ಕಾಗಿ ಕಾನೂನು ರೂಪಿಸಿ ವಿಶ್ವದೆಲ್ಲೆಡೆ ಅವರ ಆರೋಗ್ಯ, ರಕ್ಷಣೆಗೆ ಒತ್ತು ನೀಡಲಾಗಿದೆ. ದಿನಕ್ಕೆ 8 ಗಂಟೆ ಕೆಲಸ ನಿಗದಿಪಡಿಸಬೇಕೆಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡು, 1886ರಿಂದ ಧ್ವನಿ ಮೊಳಗಿತು ಎಂದು ತಾಲೂಕು ಸಿಪಿಐ(ಎಂ) ಕಾರ್ಯದರ್ಶಿ ಕಾಂ.ಪುಣ್ಯಹಳ್ಳಿ ಪಿ.ಆರ್. ಶಂಕರ್ ಹೇಳಿದರು.
ನಗರದ ಬಸ್ ನಿಲ್ದಾಣದ ಸಮೀಪದ ಸಿಪಿಐ(ಎಂ) ಕಚೇರಿಯ ಮುಂಭಾಗ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿ, ಕಾರ್ಮಿಕರ ದೈನಂದಿನ ಕಾಯಕಕ್ಕೆ ನೆರವಾಗುವ ನಿಟ್ಟಿನಲ್ಲಿ, ವಿವಿಧ ವೃತ್ತಿಪರ ಕಾರ್ಮಿಕರಿಗೆ ಅಗತ್ಯ ಸುತ್ತಿಗೆ, ಕುಡುಗೊಲು, ಚನಿಕಿ ಪಾರ, ಬಾಣಲಿ, ಗಾರೆ ಕೆಲಸಕ್ಕೆ ಬೇಕಾದ ಕರಣಿ ಹಾಗೂ ವಿವಿಧ ಸಲಕರಣೆ ವಿತರಿಸಲಾಯಿತು.
ಮುಖಂಡರಾದ ಸುರೇಶ್ ಬಾಬು, ಶಶಿಕುಮಾರ್, ವಿನುಪ್ರಿಯಾ, ಆನಂದ್, ರೈತ ಮುಖಂಡ ಗೂಕುಂಟೆ ಗಂಗುಲಪ್ಪ, ಜನವಾದಿ ಮಹಿಳಾ ಸಂಘಟನೆಯ ಭಾಗ್ಯಮ್ಮ, ಕೊಂಡಮ್ಮ, ನಾಗವೇಣಮ್ಮಮ, ಕ್ರಾಂತಿ ಕಲಾವಿದ ಮಿನಿ ಗದ್ದರ್ ಶ್ರೀನಿವಾಸ್ ಇದ್ದರು.