

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಸುಮಾರು 4.75ಲಕ್ಷ ಕೀರ್ತನೆಗಳನ್ನುರಚಿಸಿ, ಸಮಾಜದಲ್ಲಿಭಕ್ತಿ ಮತ್ತು ಜ್ಞಾನವನ್ನುಬಿತ್ತಿದ ದಾಸರು ಕ್ರಾಂತಿ ಪುರುಷರುಎಂದು ಭುವನಗಿರಿ ಆಶ್ರಮದಶ್ರೀಸುವಿದ್ಯೇಂದ್ರತೀರ್ಥಶ್ರೀಪಾದರು ಹೇಳಿದರು.
ಉತ್ತರಾದಿಮಠದಲ್ಲಿ ಶ್ರೀ ಶ್ರೀನಿವಾಸ ಉತ್ಸವಬಳಗ ಹಮ್ಮಿಕೊಂಡಿದ್ದ ಶ್ರೀಪುರಂದರದಾಸರಆರಾಧನಾ ಸಂಗೀತೋತ್ಸವ ಮತ್ತುಶ್ರೀಮಧ್ವ ಪುರಂದರ ಪ್ರಶಸ್ತಿಪ್ರದಾನ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಶಾಸಗಳಲ್ಲಿದೇವರಿಗೆ ಅಂಗ ಪೂಜೆ,ರಂಗ ಪೂಜೆ ಮತ್ತುವೈಭವ ಪೂಜೆ ಎಂಬುದಾಗಿ 3ವಿಧಗಳಿವೆ.ದೇವರ ಗರ್ಭಗುಡಿಯಲ್ಲಿಮಾಡುವುದು ಅಂಗಪೂಜೆ,ದೇವರನ್ನುಜಗುಲಿಗೆ ತಂದು ಪೂಜಿಸುವುದುರಂಗಪೂಜೆ, ರಥಬೀದಿಗೆತಂದು ಪೂಜಿಸುವುದು ವೈಭವದ ಪೂಜೆ.ಇವುಗಳಲ್ಲಿದಾಸರು ಮಾಡಿದ್ದು ರಂಗಪೂಜೆ.ಸಮಾಜದಲ್ಲಿ 3ವರ್ಗದ ವಸ್ತುಮತ್ತು ಜನಗಳಿರುತ್ತಾರೆ.ನೀರಿನಲ್ಲಿತಾನು ಮಾತ್ರ ತೇಲುವ ಒಣಗಿದ ಎಲೆ,ತನ್ನೊಂದಿಗೆಇತರರರನ್ನು ತೇಲಿಸುವ ದೋಣಿ,ತಾನೂ ತೇಲದೆಮುಳುಗುವ ಕಲ್ಲು.ದಾಸರು ತಾವುತೇಲುವುದಲ್ಲದೆ ಭಕ್ತಿ ಪಂಥದಮೂಲಕ ಇತರರನ್ನು ಮುಳುಗದಂತೆತೇಲಿಸಿದವರು.ದಾಸರ ಕೀರ್ತನೆಗಳುನಶಿಸುತ್ತಿರುವ ಆತಂಕವಿದ್ದು,ಇಂತಹ ಉತ್ಸವಗಳುದಾಸರ ಪದವನ್ನು ಉಳಿಸಲು ಸಹಕಾರಿಯಾಗಿವೆ.ದಾಸ ಸಾಹಿತ್ಯದಭೀಷ್ಮರಂತಿರುವ ಡಾ.ಕೃಷ್ಣಕೊಲ್ಹಾರ ಕುಲಕರ್ಣಿಯವರಿಗೆಪ್ರಶಸ್ತಿ ನೀಡಿದ್ದು ಅರ್ಥಪೂರ್ಣಎಂದು ಸ್ವಾಮೀಜಿ ವಿವರಿಸಿದರು.
ಕಾರ್ಯಕ್ರಮದಲ್ಲಿಹಿರಿಯ ಹರಿದಾಸ ಸಾಹಿತ್ಯ ಸಂಶೋಧಕಡಾ.ಕೃಷ್ಣಕೊಲ್ಹಾರ ಕುಲಕರ್ಣಿಯವರಿಗೆಶ್ರೀಮಧ್ವ ಪುರಂದರ ಪ್ರಶಸ್ತಿನೀಡಿ ಗೌರವಿಸಲಾಯಿತು.ಇದೇ ವೇಳೆ ದಾಸಸಾಹಿತ್ಯ ಸಂಶೋಧಕರಾದ ಡಾ.ಸ್ವಾಮಿರಾವ್ಕುಲಕರ್ಣಿ,ಆಧ್ಯಾತ್ಮಿಕಚಿಂತಕರಾದ ಡಾ.ರವೀಂದ್ರಕುಷ್ಟಗಿ, ವಿಜಯವಾಣಿಸೀನಿಯರ್ ಡೆಪ್ಯೂಟಿ ಎಡಿಟರ್ರಾಘವೇಂದ್ರ ಗಣಪತಿ ಅವರಿಗೆ ಹರಿದಾಸಅನುಗ್ರಹ ಪ್ರಶಸ್ತಿ ನೀಡಿಗೌರವಿಸಲಾಯಿತು.ಸಮಾರಂಭದಲ್ಲಿಜಯತೀರ್ಥ ವಿದ್ಯಾಪೀಠದ ಕುಲಪತಿಗುತ್ತಲ್ ರಂಗಚಾರ್,ಪ್ರಾಂಶುಪಾಲಡಾ.ಸತ್ಯಧ್ಯಾನಾಚಾರ್ಕಟ್ಟಿ, ಉತ್ತರಾದಿಮಠದಕಾರ್ಯನಿರ್ವಹಣಾಧಿಕಾರಿವಿದ್ಯಾಧೀಶಾಚಾರ್ಯ ಗುತ್ತಲ್,ನಿವೃತ್ತ ಐಎಎಸ್ಅಧಿಕಾರಿ ಡಾ.ಮುದ್ದುಮೋಹನ್,ಗಾಯನ ಸಮಾಜದಅಧ್ಯಕ್ಷ ಡಾ.ಎಂ.ಆರ್.ವಿ.ಪ್ರಸಾದ್ಮತ್ತಿತರರು ಉಪಸ್ಥಿತರಿದ್ದರು.
ದಾಸ ಸಾಹಿತ್ಯವನ್ನು ಬ್ರಾಹ್ಮಣರ ಸಾಹಿತ್ಯ ಎಂದು ತಪ್ಪು ಭಾವಿಸಲಾಗಿದೆ. ಆದರೆ ದಾಸ ಸಾಹಿತ್ಯವು ಮನುಕುಲದ ಸಾಹಿತ್ಯ. ಜ್ಞಾನ, ಭಕ್ತಿ, ವೈರಾಗ್ಯದಿಂದ ತುಂಬಿರುವ ದಾಸ ಸಾಹಿತ್ಯವನ್ನು ಬ್ರಾಹ್ಮಣರ ಚಾವಡಿಯಿಂದ ಹೊರ ಜಗತ್ತಿಗೆ ಬಿಡಬೇಕಾದ ಕೆಲಸವಾಗಬೇಕು.